ಲೋಕದರ್ಶನವರದಿ
ರಾಣೇಬೆನ್ನೂರು: ಏ.12: ಕರೋನಾ ವೈರಸ್ ಮಹಾಮಾರಿ ಸೊಂಕು ರೋಗ ಹರಡಿದಾಗಿನಿಂದ ಕೇಂದ್ರ ಮತ್ತು ರಾಜ್ಯ ಸಕರ್ಾರಗಳು ಲಾಕ್ಡೌನ್ಗೆ ಕರೆ ನೀಡಿ ದೇಶದ ಪ್ರತಿಯೊಬ್ಬ ನಾಗರೀಕರು ಮನೆಯಲ್ಲಿಯೇ ಸ್ವಯಂ ಗೃಹ ಬಂಧನಕ್ಕೆ ಒಳಪಡಬೇಕೆಂದು ಆಯಾ ಪ್ರದೇಶದ ಜಿಲ್ಲಾ ಮತ್ತು ತಾಲೂಕಾಡಳಿತ ಕಟ್ಟು-ನಿಟ್ಟಿನ ಆದೇಶ ಮಾಡಿ ನಾಗರೀಕರಿಗೆ ಮೂರು ತಿಂಗಳ ಕಾಲದ ಪಡಿತರ ವ್ಯವಸ್ಥೆ ಕಲ್ಪಿಸಿ ಕಳೆದ ವಾರವಷ್ಟೇ ಸಂಪೂರ್ಣ ಉಚಿತವಾಗಿ ಅಕ್ಕಿ ವಿತರಿಸುವಂತೆ ಕ್ರಮ ಕೈಗೊಂಡಿದೆ.
ಆಹಾರ ಇಲಾಖೆ ಪಡಿತರ ನ್ಯಾಯ ಬೆಲೆ ಅಂಗಡಿಗಳ ಮೂಲಕ ವಿತರಿಸಲು ಕ್ರಮ ಜಾರಿಗೊಳಿಸಿದೆ. ಆದರೆ, ಅಲ್ಲಲ್ಲಿ ಕೆಲವು ಅಂಗಡಿಕಾರರು ಸಿಕ್ಕಷ್ಟೇ ಸಿರುಂಡೆ ಎನ್ನುವಂತೆ ಗ್ರಾಹಕರಿಂದ ಹಣ ವಸೂಲಿ ಮಾಡುವ ದಂಧೆಗೆ ಇಳಿದಿರುವುದು ಅತ್ಯಂತ ವಿಶಾಧಕರ ಸಂಗತಿಯಾಗಿದೆ.
ತಾಲೂಕಿನ ಮಾಕನೂರು ಗ್ರಾಮದ ಪಡಿತರ ಅಂಗಡಿಕಾರರು ಗ್ರಾಹಕರಿಂದ ಹಣ ಪಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ತಿಳಿದ ಶಾಸಕ ಅರುಣಕುಮಾರ ಸೇರಿದಂತೆ ತಹಶೀಲ್ದಾರ ಬಸನಗೌಡ ಕೊಟೂರು ಮತ್ತು ಆಹಾರ ಇಲಾಖೆಯ ಅಧಿಕಾರಿಗಳು ಗ್ರಾಮದ ಪಡಿತರ ಅಂಗಡಿಗೆ ದಿಢೀರ್ ಭೇಟಿ ಇತ್ತು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಹಣ ಪಡೆಯುತ್ತಿರುವ ಸಂಗತಿ ಸತ್ಯವಾಗಿದೆ.
ಇದೇ ರೀತಿ ಮುಂದುವರೆಯುವ ಯಾವುದೇ ಪಡಿತರ ನ್ಯಾಯಬೆಲೆ ಅಂಗಡಿಗಳ ಪರವಾನಗಿಯನ್ನು ರದ್ದುಪಡಿಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ಪಡಿತರ ಅಂಗಡಿ ಮಾಲೀಕರು ಯಾವುದೇ ಕಾರಣಕ್ಕೂ ಸಕರ್ಾರದ ನಿಯಮಗಳನ್ನು ಮತ್ತು ಆಹಾರ ಇಲಾಖೆ ನೀಡಿದ ಆದೇಶವನ್ನು ಉಲ್ಲಂಘಿಸುವುದು ಸರಿಯಲ್ಲ. ಇದು ಬಹುತೇಕ ಭಾಗಗಳಲ್ಲಿ ನಡೆಯುತ್ತಿರುವುದಾಗಿ ದೂರುಗಳು ಬರುತ್ತಲೇ ಇವೆ. ಮೊದಲೇ ಕರೋನಾ ವೈರಸ್ ಪ್ರಕರಣದಿಂದಾಗಿ ಆಥರ್ಿಕ ಸಮಸ್ಯೆಯಿಂದ ನಾಗರೀಕರು ನಿತ್ಯವೂ ಬಳಲುತ್ತಿದ್ದಾರೆ.
ಸಕರ್ಾರ ಯಾವುದೇ ತೊಂದರೆ ಆಗಬಾರದು ಎನ್ನುವ ಏಕೈಕ ಉದ್ದೇಶದಿಂದ ಉಚಿತ ಸೇವೆಯನ್ನು ನೀಡಲು ಮುಂದಾಗಿದೆ ಎಂದ ಅವರು ಇಲಾಖೆಯ ಪ್ರಕಟಣೆಗಳನ್ನು ಗಮನಿಸಿ ಸಾರ್ವಜನಿಕರು ಎಚ್ಚರಗೊಂಡು ಯಾವುದೇ ಹಣವನ್ನು ನೀಡದೇ, ಉಚಿತವಾಗಿ ಪಡಿತರ ಪಡೆಯಬೇಕು. ಒಂದು ವೇಳೆ ಹಣ ಪಡೆಯಲು ಮುಂದಾದರೆ, ತಕ್ಷಣವೇ ದೂರು ನೀಡಬೇಕು ಎಂದು ಸಾರ್ವಜನಿಕರಿಗೆ ಕರೆ ನೀಡಿದರು.