ಲೋಕದರ್ಶನವರದಿ'
ರಾಣೇಬೆನ್ನೂರು: ಮೇ.30: ಕೃಷಿ ಪ್ರಧಾನ ರಾಣೇಬೆನ್ನೂರು ತಾಲೂಕಿನಲ್ಲಿ ರೈತರಿಗೆ ಮೂಲ ಭೂತಸೌಕರ್ಯಗಳನ್ನು ಕಲ್ಪಿಸಬೇಕಾದ ಅಗತ್ಯವಿದ್ದು, ಅವರಿಗೆ ಸರಿಯಾದ ರೀತಿಯಲ್ಲಿ ವ್ಯವಸ್ಥೆಯನ್ನು ಕಲ್ಪಿಸಿದಾಗ ಮಾತ್ರ ಆಥರ್ಿಕವಾಗಿ ಸುಧಾರಣೆ ಕಾಣುವುದರ ಜೊತೆಗೆ ಗ್ರಾಮ ಮತ್ತು ತಾಲೂಕು ಅಭಿವೃದ್ಧಿ ಕಂಡು ಸಮಗ್ರ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡ್ಯೊಯಲು ಸಹಕಾರಿಯಾಗಲಿದೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.
ಅವರು ಶನಿವಾರ ತಾಲೂಕಿನ ಹಿರೇಮಾಗನೂರ ಮತ್ತು ಚಿಕ್ಕಮಾಗನೂರ ಗ್ರಾಮಗಳ ತುಂಗಾಮೇಲ್ದಂಡ ಯೋಜನೆಯ ಕಾಲುವೆ-ಉಪಕಾಲುವೆ ಮತ್ತು ರೈತ ಸಂಪರ್ಕ ರಸ್ತೆಗಳನ್ನು ಪರಿಶೀಲನೆ ನಡೆಸಿ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಸಿದ್ಧಣ್ಣ ಕೆಂಚಕ್ಕನವರ, ರಮೇಶ್ ಎಡಚಿ, ಶಿವನಾಗಪ್ಪ ಕಿಟ್ಟದ್, ಜಯಣ್ಣ ಕರಡೇರ, ಮಹೇಶ್ ಸಿರಗೇರಿ, ತುಂಗಾಮೇಲ್ದಂಡೆ ಯೋಜನೆಯ ಅಭಿಯಂತರಾದ ಆನಂದ ಕುಲಕಣರ್ಿ, ಟಿ.ರವಿಕುಮಾರ, ಕೆ.ಮನು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.