ಧಾರವಾಡ 22: ನಮ್ಮದು ಬಹುಭಾಷೆಗಳ ದೇಶ.ಅನುವಾದಗಳೂ ನಮ್ಮಲ್ಲಿ ಅನೇಕ ಇವೆ.ಇಂಗ್ಲೀಶ್ ಅನುವಾದಿತ ಕೃತಿ ಗಳೂ ನಮ್ಮಲ್ಲಿ ಬಂದಿವೆ.ಆದರೆ ನಾವು ನಮ್ಮ ಬೇರುಳ್ಳ ಭಾಷೆಗಳನ್ನು ಮರೆಯಬಾರದು ಎಂದರು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಎಲ್. ಹೈದರಾಬಾದ್.
ಕರ್ನಾಟಕ ವಿಶ್ವವಿದ್ಯಾಲಯದ ಡಾ.ಆರಿ್ಸ.ಹಿರೇಮಠ ಕನ್ನಡ ಅಧ್ಯಯನ ಪೀಠ ಮತ್ತು ಪಿ.ಎಂ.ಉಷಾ,ಭಾರತ ಸರ್ಕಾರ,ನವದೆಹಲಿ ಇವರ ಸಹಯೋಗದೊಂದಿಗೆ ಅನುವಾದ ಸಾಹಿತ್ಯ:ಸಾಂಸ್ಕೃತಿಕ ಅನುಸಂಧಾನ ಎಂಬ ವಿಷಯದ ಮೇಲೆ ನಡೆದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಅನುವಾದ, ಅನುವಾದಕನ ಕೊಡುಗೆ ದೊಡ್ಡದಿದೆ. ಭಾಷೆ ಬೆಳೆಯುತ್ತಲೇ ಭಾಷಾ ಸಂಸ್ಕೃತಿಯಐಕ್ಯತೆಯೂ ಬೆಳೆಯುತ್ತದೆ.ಇದು ತುಂಬಾಮಹತ್ವದ ಸಮ್ಮೇಳನ.ಇದರಿಂದ ಇನ್ನಷ್ಟು ಸಂವಾದಗಳು ನಡೆಯಲಿ ಎಂದು ಆಶಿಸಿದರು.
ಸಮ್ಮೇಳನದಲ್ಲಿ ಆಶಯ ನುಡಿಗಳನ್ನಾಡಿದ ಡಾ.ನಟರಾಜ ಹುಳಿಯಾರ ಅವರು ತಮ್ಮ ಇಡೀ ಮಾತನ್ನು ಬ್ರೂಕರ್ ಪ್ರಶಸ್ತಿ ಪಡೆದ ಕನ್ನಡದ ಕಥೆಗಾರ್ತಿ ಬಾನು ಮುಷ್ತಾಕ್ ಅವರಿಗೆ ಅರ್ಿಸಿದರು. ಅನುವಾದದ ಚಾರಿತ್ರ್ಯಿಕ ಹಂತಗಳನ್ನು ನೆನಪಿಸುತ್ತಾ ಭಾರತೀಯ ಸಂಸ್ಕೃತಿಯೊಳಗೆ ಅನುವಾದಗಳು ಮಾಡಿರುವ ದೊಡ್ಡ ಪಲ್ಲಟಗಳು ಹಾಗೇ ಬರಹಗಾರನೊಳಗೆ ಹುಟ್ಟುವ ಅಸಂಖ್ಯಾತ ಅನುವಾದಗಳ ಕುರಿತು ಮಾತನಾಡಿದರು.ಅನುವಾದದ ಸಾಂಸ್ಕೃತಿಕ ರಾಜಕಾರಣ ಇಡೀ ಭಾಷಾಂತರ ಕ್ರಿಯೆ ಒಂದು ಸಾಂಸ್ಕೃತಿಕ ಭಾಷಾಂತರ ಕ್ರಿಯೆ ಎನ್ನುವ ಕುರಿತು ಹಲವು ಜಾಗತಿಕ ಉದಾಹರಣೆಗಳನ್ನು ನೀಡಿದರು.ಲೋಹಿಯಾ, ಕಾರ್ಲಮಾರ್ಕ್ಸ,ಅಂಬೇಡ್ಕರ್,ಗಾಂಧಿ ಹಲವು ಚಿಂತನೆಗಳ ವಿಸ್ತಾರಕ್ಕೆ ಅನುವಾದ ಮೂಲ ಆಧಾರವಾದ ಬಗೆಯನ್ನು ವಿವರಿಸಿದರು.
ಕುಲಸಚಿವರಾದ ಡಾ.ಎ.ಚನ್ನಪ್ಪ ಅವರು ಬಿ.ಎಂ.ಶ್ರೀ ಅವರ ಇಂಗ್ಲೀಶ್ ಗೀತೆಗಳನ್ನು ಉಲ್ಲೇಖಿಸಿ ಅನುವಾದ ಎನ್ನುವುದು ’ಅವಳ ತೊಡುಗೆ ಇವಳಿಗಿಟ್ಟು ಇವಳ ತೊಡುಗೆ ಅವಳಿಗಿಟ್ಟು ನೋಡಬಯಸುವ ಕೊಡುಕೊಳ್ಳುವಿಕೆಯ ವಿಧಾನವೇ ಆಗಿದೆ ಎಂದರು.ಸಂಗೀತವೂ ಒಂದು ಅನುವಾದವೇ.ಏನೇ ಇರಲಿ ಭಾಷೆ ಒಳ್ಳೆಯದಕ್ಕೆ ಬಳಕೆಯಾಗಬೇಕು.ಅನುವಾದಕ ಭಾಷೆಯಲ್ಲಿ ಎಚ್ಚರವಹಿಸಬೇಕು ಎಂದು ತಿಳಿ ಹೇಳಿದರು.
ಈ ಸಮ್ಮೇಳನದ ಅಧ್ಯಕ್ಷತೆಯನ್ನು ಕಲಾನಿಕಾಯದ ಡೀನರಾದ ಡಾ.ಮೃತ್ಯುಂಜಯ ಅಗಡಿಯವರು ವಹಿಸಿದ್ದರು.
ವೇದಿಕೆಯ ಮೇಲೆ ಮೌಲ್ಯಮಾಪನ ಕುಲಸಚಿವರಾದ ಡಾ.ನಿಜಲಿಂಗಪ್ಪ ಮಟ್ಟಿಹಾಳ,ಪಿ.ಎಂ.ಉಷಾ ಸಂಯೋಜಕರಾದ ಪ್ರೊ.ಆರ್.ಎಫ್.ಭಜಂತ್ರಿ, ಡಾ.ಆರಿ್ಸ.ಹಿರೇಮಠ ಕನ್ನಡ ಅಧ್ಯಯನ ಪೀಠದ ಸಂಯೋಜಕರಾದ ಡಾ.ನಿಂಗಪ್ಪ ಮುದೇನೂರು,ಸಮ್ಮೇಳನ ಸಂಯೋಜಕರಾದ ಡಾ.ಅನಿತಾ ಗುಡಿ, ಡಾ.ಮಲ್ಲಪ್ಪ ಬಂಡಿ, ಡಾ.ಅನಸೂಯ ಕಾಂಬಳೆ ಉಪಸ್ಥಿತರಿದ್ದರು.