ನಗರಸಭೆಯಲ್ಲಿ ಅಧಿಕಾರ ಹಿಡಿವ ವಿಶ್ವಾಸದಲ್ಲಿ ಅಸ್ನೋಟಿಕರ್


ಲೋಕದರ್ಶನ ವರದಿ

ಕಾರವಾರ: ನಗರದ ಸೇಂಟ್ ಜೋಸೆಫ್ ಮತಗಟ್ಟೆಯಲ್ಲಿ ಮಾಜಿ ಸಚಿವ ಹಾಲಿ ಜೆಡಿಎಸ್ ನಾಯಕ ಆನಂದ ಅಸ್ನೋಟಿಕರ್ ಸಂಜೆ ವೇಳೆ ಆಗಮಿಸಿ ಮತದಾನ ಮಾಡಿದರು. ಕೊನೆಯ ಕ್ಷಣದಲ್ಲಿ ಮತದಾನ ಬಂದಿದ್ದರಿಂದ ಅವರು ಸರತಿ ಸಾಲಿನಲ್ಲಿ ಹತ್ತು ನಿಮಿಷ ನಿಲ್ಲಬೇಕಾಯಿತು. ಸರದಿಯಲ್ಲಿ ಸಮಧಾನದಿಂದ ನಿಂತಿದ್ದ ಅವರು, ತಮ್ಮ ಸರದಿ ಬಂದಾಗ  ಮತ ಚಲಾಯಿಸಿದರು. ಮತದಾನ ಮಾಡಿದ ನಂತರ ಹೊರ ಬಂದ ಅವರು ಸ್ಥಳದಲ್ಲಿದ್ದ ಮಾಧ್ಯಮಗಳ ಜೊತೆ ಮಾತನಾಡಿದರು.

ಕಳೆದ ಮೂರು ನಗರಸಭೆಯ ಚುನಾವಣೆಗಳಲ್ಲಿ ಅಸ್ನೋಟಿಕರ್ ಬೆಂಬಲಿಗರೇ ಅಧಿಕಾರ ಮಾಡಿದ್ದೇವೆ. ಎಲ್ಲಾ ಪಕ್ಷಗಳನ್ನು ನೋಡಿದ್ದೇನೆ. ಶಾಸಕ ವಸಂತ ಅಸ್ನೋಟಿಕರ್ ಕಾಲದಿಂದ ನಮ್ಮ ಅಭಿಮಾನಿಗಳು ಆರಿಸಿ ಬಂದು ಅಧಿಕಾರ ನಡೆಸಿದ್ದಾರೆ. ನಾನು ಆರಂಭದಲ್ಲಿ ಉದಯಿಸುವ ಸೂರ್ಯನ ಚಿಹ್ನೆಯಿಂದ ನನ್ನ ಬೆಂಬಲಿಗರನ್ನು ಆರಿಸಿ ತಂದಿದ್ದೆ. ನಂತರ ಕಾಂಗ್ರೆಸ್ ಪಕ್ಷದಲ್ಲಿದ್ದಾಗ ನಗರಸಭೆಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಬಿಜೆಪಿ ಸೇರಿ ಗೆಲುವು ಸಾಧಿಸಿ ಮಂತ್ರಿಯಾದಾಗ ನಗರಸಭೆಯ ಆಡಳಿತ ಬಿಜೆಪಿ ಕಡೆ ವಾಲಿತು. ನನ್ನ ಬೆಂಬಲಿಗರು ಬಿಜೆಪಿಗೆ ಬಂದ ಕಾರಣ ಅವರೇ ನಗರಸಭೆಯಲ್ಲಿ ಅಧಿಕಾರ ನಡೆಸಿದರು. ಕಳೆದ 5 ವರ್ಷ ನಾವು ಅಧಿಕಾರದಲ್ಲಿ ಇರದಿದ್ದರೂ, ನನ್ನ ಕೆಲ ಬೆಂಬಲಿಗರು ನಗರಸಭೆಯಲ್ಲಿದ್ದರು. ಈ ಸಲ 24 ವಾರ್ಡಗಳಿಗೆ ಅಭ್ಯಥರ್ಿಗಳನ್ನು ಕಣಕ್ಕೆ ಜೆಡಿಎಸ್ ನಿಂದ ಇಳಿಸಿದ್ದೇವೆ. ಈ ಸಲ ನಗರಸಭೆಯ ಅಧಿಕಾರ ಜೆಡಿಎಸ್ ಪಾಲಾಗಲಿದೆ. ಜೆಡಿಎಸ್ ಪಕ್ಷದ ಮುಖ್ಯಮಂತ್ರಿ ಇರುವ ಕಾರಣ ನಗರದ ಮತದಾರರು ಜೆಡಿಎಸ್ನ್ನು ಬೆಂಬಲಿಸಿದ್ದಾರೆ ಎಂಬ ವಿಶ್ವಾಸವಿದೆ. ಪಕ್ಷೇತರರು ಸಂಪರ್ಕದಲ್ಲಿದ್ದು, ನಗರಸಭೆಯ ಅಧಿಕಾರವನ್ನು ಪಡೆಯಲಿದ್ದೇವೆ.