ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ
ಗೋಕಾಕ, 28 : ಸಮಾಜದ ಅಭಿವೃದ್ಧಿಗೆ ಚಿಂತನೆ ನಡೆಸಿ ಸಮಾಜವನ್ನು ಉದ್ದಾರ ಮಾಡುತ್ತಿರುವ ಸಾಧಕರನ್ನು ಗುರುತಿಸಿ ಅವರಿಗೆ ಸನ್ಮಾನ ಮತ್ತು ಗೌರವ ನೀಡಿದರೆ ಮತ್ತಷ್ಟು ಉತ್ಸಾಹ ತುಂಬುವ ನಿಟ್ಟಿನಲ್ಲಿ ಅವರು ತಮ್ಮ ಸೇವೆಯನ್ನು ಒದಗಿಸುವ ಪ್ರಯತ್ನ ಮಾಡುತ್ತಾರೆ ಸಾಧಕರಿಗೆ ಸನ್ಮಾನವೇ ಭೂಷಣ ಎಂದು ಗುರು ಬಸವಲಿಂಗ ಮಹಾ ಸ್ವಾಮೀಜಿಗಳು ಹೇಳಿದರು. ಅವರು ಗೋಕಾಕ ಸಮುದಾಯ ಭವನದಲ್ಲಿ ನಡೆದ ಜಾರಕಿಹೋಳಿ ಸಹೋದರರ ಆಶೀರ್ವಾದದೊಂದಿಗೆ, ಯುಗಾದಿ ವಸಂತೋತ್ಸವ ಹಾಗೂ ಮಹಿಳಾ ದಿನಾಚಣೆಯ ನಿಮಿತ್ಯವಾಗಿ ಕೃಷ್ಣಾ ಮಾಳಿ ಅವರು ಹಮ್ಮಿಕೊಂಡಿರುವ ವಿವಿಧ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಮಾತನಾಡಿ ಎಲೆ ಮರೆ ಕಾಯಿಯಂತೆ ಸಮಾಜ ಸೇವೇ ಮಾಡುವವರನ್ನು ಗುರುತಿಸುವುದು, ಒಳ್ಳೆಯದು ಹಾಗು ಆದರ್ಶ ದಂಪತಿಗಳಿಗೆ ಸನ್ಮಾನ ಮಾಡುತ್ತಿರುವ ಕೃಷ್ಣಾ ಮಾಳಿ ಅವರ ಕಾರ್ಯ ಮೆಚ್ಚುವಂತಹದ್ದು ಎಂದು ಹೇಳಿದರು.
ಸಾನಿಧ್ಯ ವಹಿಸಿದ ಮುತ್ತೇಶ್ವರ ಮಹಾಸ್ವಾಮಿಗಳು ಮಾತನಾಡಿ ಸಮಾಜ ಸೇವೆ ಜೊತೆಗೆ ತಂದೆ ತಾಯಿಯ ಸೇವೆ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಮನುಷ್ಯ ಸಾಧನೆ ಮಾಡದೆ ಸತ್ತರೆ ಸಾವಿಗೆ ಅವಮಾನ ಮಾಡಿದಂತಾಗುತ್ತದೆ ಹಣ ಅಂತಸ್ತು ಅಧಿಕಾರ ನಮ್ಮ ಕಷ್ಟ ಕಾಲದಲ್ಲಿ ಕಾಯುವುದಿಲ್ಲ ಬೇರೆಯವರಿಗೆ ಮಾಡಿದ ಸಹಾಯ ನಮ್ಮಲ್ಲಿರುವ ಸಂಸ್ಕಾರ ಚಾರಿತ್ರ್ಯ ನಮ್ಮನ್ನು ಕಾಪಾಡುತ್ತದೆಂದು ಹೇಳಿದರು.
ಈ ಸಮಯದಲ್ಲಿ ಸತೀಶ ಜಾರಕಿಹೊಳಿ ಅವರ ಆಪ್ತ ಸಹಾಯಕ ಪಾಂಡು ಮನ್ನಿಕೇರಿ.ಸುಶೀಲಾ ಸಂಜೀವಕುಮಾರ.ಮಲ್ಲಿಕಾರ್ಜುನ ಕಬ್ಬೂರ. ಅರ್ಜುನ ನಾಯಿಕವಾಡಿ. ಮರಿಯಪ್ಪ ಮರೆಪ್ಪಗೊಳ. ಅಬ್ದುಲ್ ಸತ್ತಾರ್ ಮುಲ್ಲಾ. ಸುರೇಶ ಜಾಧವ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮುರಿಗೆಪ್ಪ ಮಾಲಗಾರ.ಭೀಮಶಿ ಕೆಂಪವ್ವಗೊಳ. ನಿತ್ಯಾ ಆಚಾರ ಸೇರಿದಂತೆ ಅನೇಕರಿದ್ದು ಕಾರ್ಯಕ್ರಮವನ್ನು ದೀಕ್ಷಾ ಪೂಜೇರಿ ಸ್ವಾಗತಿಸಿ ಮುರಿಗೆಪ್ಪ ಮಾಲಗಾರ.ನಿರೂಪಿಸಿ. ಕೃಷ್ಣಾ ಮಾಳಿ ವಂದಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ, ಆದರ್ಶ ದಂಪತಿಗಳಿಗೆ, ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ, ಪ್ರಶಸ್ತಿ ಪ್ರಮಾನ ಪತ್ರ ನೀಡಿ ಸನ್ಮಾನಿಸಿ ಗೌರವಿಸಲಾಯಿತು.