ಹಾವೇರಿ೧೫: ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಯುವ ಸ್ಪಂದನ, ಇಂಡಿಯನ್ ಇಂಗ್ಲೀಷ್ ಟ್ರೈನಿಂಗ್ ಸೆಂಟರ್ ಮತ್ತು ಜೆ.ಸಿ.ಸಂಸ್ಥೆ ಆಶ್ರಯದಲ್ಲಿ ವಿದ್ಯಾಥರ್ಿಗಳಿಗೆ ಅರಿವು ಕಾರ್ಯಕ್ರಮ ಮಂಗಳವಾರ ನಗರದಲ್ಲಿ ಆಯೋಜಿಸಲಾಗಿತ್ತು.
ಯುವ ಪರಿವರ್ತಕರಾದ ಮಂಜುಳಾ ಪಡಿಗೋಡಿ ಹಾಗೂ ಯುವ ಸಮಾಲೋಚಕರಾದ ಸುಮಂಗಲಾ ಹಂಚಿಮನಿ ಅವರು ಮಾನಸಿಕ ಒತ್ತಡ ನಿರ್ವಹಣೆ, ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯ, ಸಕಾರಾತ್ಮಕ ಚಿಂತನೆಗಳ ಕುರಿತು ತಿಳುವಳಿಕೆ ನೀಡಿದರು.
ವಿದ್ಯಾಥರ್ಿಗಳು ಓದಿನ ಕಡೆಗೆ ಹೆಚ್ಚಿನ ಆಸಕ್ತಿ ವಹಿಸಬೇಕು. ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಿ ಸಬಲರಾಗಬೇಕು.
ಸ್ವಾಮಿ ವಿವೇಕಾನಂದರು ಹೇಳಿದಂತೆ "ಎಳಿ ಎದ್ದೇಳಿ ಗುರಿ ಮುಟ್ಟುವವರೆಗೆ ನಿಲ್ಲದಿರಿ" ಎಂಬ ಧ್ಯೇಯವನ್ನು ವಿದ್ಯಾಥರ್ಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಶಿಕ್ಷಕ ಎನ್.ಎಸ್.ನಡುವಿನಮಠ ಹಾಗೂ ಕಾರ್ಯಕ್ರಮಾಧಿಕಾರಿ ಕೆ.ಮಂಜುನಾಥ ಅವರು ಮಾತನಾಡಿ, ವಿದ್ಯಾಥರ್ಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಹಾಗೂ ಸಂವಹನ ಕೌಶಲ್ಯವನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.