ಧಾರವಾಡ ಸೆ.26: ಕರ್ನಾಟಕ ಎಲ್ಲ ನಿವಾಸಿಗಳಿಗೂ ಸರಕಾರದ ಆರೋಗ್ಯ ಸೇವೆಗಳನ್ನು ತಲುಪಿಸಲು ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ ಪೂರಕವಾಗಿದೆ. ಜಿಲ್ಲೆಯು ರಾಜ್ಯದಲ್ಲಿ ಎಂಟನೆಯ ಸ್ಥಾನದಲ್ಲಿದ್ದು, ಸೆ. 30ರೊಳಗೆ ಗರಿಷ್ಟ ನೋಂದಣಿ ಸಾಧನೆ ಮಾಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಹೆಚ್ಚು ಶ್ರಮಿಸಬೇಕು , ಜನತೆ ಯೋಜನೆಯ ಸದುಪಯೋಗ ಪಡೆಯಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದರು.
ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ ಹಾಗೂ ವಾರ್ತೆ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ ಜಾರಿಗೊಂಡು ಒಂದು ವರ್ಷ ಪೂರ್ಣಗೊಂಡ ನಿಮಿತ್ಯ ಆಯೋಜಿಸಿದ್ದ ಜನಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಹಸಿರು ಬಾವುಟ ತೋರಿಸಿ ಚಾಲನೆ ನೀಡಿ, ಅವರು ಮಾತನಾಡಿದರು.
ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಬಿಪಿಎಲ್ ಕುಟುಂಬಗಳಿಗೆ ಒಂದು ವರ್ಷಕ್ಕೆ ರೂ.5 ಲಕ್ಷಗಳವರೆಗೆ ಉಚಿತ ಚಿಕಿತ್ಸೆ ಲಭಿಸುತ್ತದೆ. ಮತ್ತು ಎಪಿಎಲ್ ಕುಟುಂಬಗಳಿಗೆ ಸರ್ಕಾರಿ ಪ್ಯಾಕೆಜ್ ದರದ ಶೇಕಡಾ 30ರಷ್ಟು ವೆಚ್ಚ ಲಭ್ಯವಿದ್ದು, ವಾರ್ಷಿಕ ಮಿತಿ ಪ್ರತಿ ಎಪಿಎಲ್ ಕುಟುಂಬಕ್ಕೆ ರೂ.1.50ಲಕ್ಷ ವರೆಗೆ ಇದೆ. ಇದರ ಸದುಪಯೋಗ ಎಲ್ಲ ಕುಟುಂಬಗಳು ಪಡೆಯಬೇಕು ಎಂದು ಹೇಳಿದರು. ಖಾಸಗಿ ಆಸ್ಪತ್ರೆಗಳಿಗಿಂತ ಹೆಚ್ಚು ಸೌಲಭ್ಯಗಳು ಸರಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿದೆ. ಈಚೆಗೆ ನವಲಗುಂದ ತಾಲೂಕು ಆಸ್ಪತ್ರೆಯಲ್ಲಿ ವ್ಯಕ್ತಿಯೋರ್ವನಿಗೆ ಶಸ್ತ್ರಚಿಕಿತ್ಸೆ ಮೂಲಕ ಸೊಂಟದ ಕೀಲು ಮೂಳೆಗಳನ್ನು ಯಶಸ್ವಿಯಾಗಿ ಜೋಡಿಸಲಾಗಿದೆ. ಅಲ್ಲಿನ ವೈದ್ಯರು, ಸಿಬ್ಬಂದಿಗಳು ಅಭಿನಂದನಾರ್ಹರು. ಸಾರ್ವಜನಿಕರು ಸರಕಾರಿ ಆಸ್ಪತ್ರೆಯ ಸೌಲಭ್ಯಗಳನ್ನುಉಪಯೋಗಿಸಿಕೊಂಡು ತಮ್ಮ ಆರೋಗ್ಯ ವೆಚ್ಚ ಕಡಿಮೆ ಮಾಡಿಕೊಳ್ಳಬೇಕು ಮತ್ತು ಸರಕಾರಿ ಆಸ್ಪತ್ರೆಗಳಿಗೆ ಪ್ರೋತ್ಸಾಹಿಸಿ ವಿಶ್ವಾಸರ್ಹತೆ ಹೆಚ್ಚಿಸಬೇಕೆಂದು ಹೇಳಿದರು.
ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಇಲ್ಲಿಯವರೆಗೆ ಜಿಲ್ಲೆಯಲ್ಲಿ 2,61,712 ಕಾರ್ಡಗಳನ್ನು ವಿತರಿಸಲಾಗಿದೆ. ಈ ಮೂಲಕ ರಾಜ್ಯದಲ್ಲಿ ಜಿಲ್ಲೆ ಎಂಟನೆಯ ಸ್ಥಾನ ಪಡೆದಿದೆ. ಸೆಪ್ಟಂಬರ್ ತಿಂಗಳೊಂದರಲ್ಲಿಯೇ ಈಗಾಗಲೇ 31,712 ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಕಾರ್ಡ ವಿತರಿಸಲಾಗಿದೆ. ಯೋಜನೆಯನ್ನು ಆರೋಗ್ಯ ಇಲಾಖೆ ಪರಿಣಾಮಕಾರಿಯಾಗಿ ಅನುಷ್ಟಾನ ಗೊಳಿಸುತ್ತಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ ಮಾತನಾಡಿ, ಆರೋಗ್ಯ ಇಲಾಖೆ ಉತ್ತಮ ಸೇವೆ ನೀಡುತ್ತಿದ್ದು, ಜನಸಾಮಾನ್ಯರಿಗೆ ಯೋಜನಾ ಸೌಲಭ್ಯ ತಲುಪಿಸುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ ಎಂದು ಶ್ಲಾಘಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಶವಂತ ಮದಿನಕರ ಸ್ವಾಗತಿಸಿ, ಪ್ರಾಸ್ತಾವಿಕವಾ ವಿಷಯ:- ಭಗತ್ ಸಿಂಗ್ ರವರ 113ನೇ ಜನ್ಮದಿನದ ಕಾರ್ಯಕ್ರಮ
ಇಂದು ಧಾರವಾಡ ನಗರದ ಕೆ.ಯು.ಪಿ.ಯು ಕಾಲೇಜಿನಲ್ಲಿ ಭಗತ್ ಸಿಂಗ್ ರವರ 113ನೇ ಜನ್ಮದಿನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನುದ್ಧೇಶಿಸಿ ಎಐಡಿಎಸ್ಓ ನ ಜಿಲ್ಲಾ ಕಾರ್ಯದರ್ಶಿಗಳಾದ ರಣಜೀತ್ ಧೂಪದ ಮಾತನಾಡಿ ಭಗತ್ ಸಿಂಗ್ರವರಿಗೆ ತಮ್ಮ ಮನೆಯಲ್ಲಿನ ಸ್ವಾತಂತ್ರ್ಯ ಹೋರಾಟದ ವಾತಾವರಣದ ಪ್ರಭಾವದಿಂದ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು ಅವರ ಆ ಹೋರಾಟದ ಕೆಚ್ಚಿಗೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಘಟನೆ ಇನ್ನಷ್ಟು ಪುಷ್ಠಿ ಕೊಟ್ಟಿತು.
ಅಲ್ಲಿಂದ ಗಾಂಧಿಜೀಯವರ ನೇತೃತ್ವದಲ್ಲಿ ನಡೆದ ಅಸಹಕಾರ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಆದರೆ ಆ ಚಳುವಳಿಯನ್ನು ಗಾಂಧಿಜೀಯವರು ಹಿಂತೆಗೆದುಕೊಂಡಿದ್ದರಿಂದ ನಿರಾಸೆಯಾಯಿತು. ನಂತರ ಎಚ್ಆರ್ಎ ಯನ್ನು ಸೇರಿದರು. ತಮ್ಮ ವಿಚಾರಗಳನ್ನು ದೇಶದ ಜನತೆಗೆ ಮುಟ್ಟಿಸಲು ಅಸೆಂಬ್ಲಿಯ ಖಾಲಿ ಜಾಗದಲ್ಲಿ ಬಾಂಬ್ ಸ್ಪೋಟಿಸಿ ಬಂಧಿತರಾಗಿ ಕೊರ್ಟ ವಿಚಾರಣೆಯನ್ನೆ ತಮ್ಮ ಪ್ರಚಾರದ ವೇದಿಕೆಯನ್ನಾಗಿಸಿಕೊಂಡು ಇಡೀ ದೆಶಕ್ಕೆ ತಮ್ಮ ವಿಚಾರಗಳನ್ನು ಮುಟ್ಟಿಸಿದರು. ಇದನ್ನರಿತ ಬ್ರಿಟಿಷರು ವಿಚಾರಣೆಯ ನಾಟಕವಾಡಿ, ಇವರು ಕೊರ್ಟನಲ್ಲಿ ಇರದೆ ತೀರ್ಪು ನೀಡಿ ಗಲ್ಲಿಗೇರಿಸಿದರು.
ಭಗತ್ ಸಿಂಗ್ರವರದು ಭಾರತಕ್ಕೆ ಬರೀ ಬ್ರಿಟಿಷರಿಂದ ಸ್ವಾತಂತ್ರ ಪಡೆಯುವುದೊಂದೆ ಉದ್ಧೇಶವಾಗಿರಲಿಲ್ಲ. ಸ್ವತಂತ್ರ ಬಂದ ಮೇಲೆ ನಮ್ಮನ್ನು ಯಾರು ಆಳುತ್ತಾರೆನ್ನುವುದು ಬಹಳ ಮುಖ್ಯ, ಈ ಸ್ವಾತಂತ್ರ್ಯ ಬರೀ ಶ್ರೀಮಂತರ ಪಾಲಾದರೆ ಇಲ್ಲಿನ ಸಾಮಾನ್ಯ ಜನಗಳ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ ಆ ಜನರ ಜೀವನ ಸುಧಾರಿಸುವುದಿಲ್ಲ. ಈ ದೇಶದಲ್ಲಿ ಎಲ್ಲರಿಗೂ ಶಿಕ್ಷಣ, ಆರೋಗ್ಯ, ಜೀವನದ ಭದ್ರತೆ ಸಿಗಬೇಕು, ಭಾರತವು ಒಂದು ಸಮಾಜವಾದಿ ರಾಷ್ಟ್ರವಾಗಬೇಕು ಎಂಬುದು ಅವರ ಕನಸಾಗಿತ್ತು. ಆದರೆ ಇಂದಿನ ಪರಿಸ್ಥಿತಿ ನೋಡಿದರೆ ಭಗತ್ ಸಿಂಗ್ರ ಕನಸು ಕನಸಾಗಿಯೆ ಉಳಿದಿದೆ. ದೇಶದ ಜನಸಾಮಾನ್ಯರ ಬದುಕು ದಿನೇ ದಿನೇ ದುಸ್ಥರವಾಗುತ್ತಿದೆ, ಈ ದೇಶದ ಇಂತಹ ಪರಿಸ್ಥಿತಿಯನ್ನು ಬದಲಾಯಿಸಬೇಕಾದರೆ ಭಗತ್ ಸಿಂಗ್ರ ವಿಚಾರಗಳು ಅವಶ್ಯಕ. ಈ ವಿಚಾರಗಳನ್ನು ಹೆಚ್ಚು ಹೆಚ್ಚು ಅರ್ಥ ಮಾಡಿಕೊಂಡು ಎಲ್ಲೆಡೆ ಹರಡಬೇಕು ಈ ಕೆಲಸಕ್ಕಾಗಿ ವಿದ್ಯಾರ್ಥಿ ಯುವಜನರು ಮುಂದೆಬರಬೇಕು ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಎಐಡಿಎಸ್ಓ ನ ಜಂಟಿ ಕಾರ್ಯದರ್ಶಿಳಾದ ಶಶಿಕಲಾ ಮೇಟಿ ವಹಿಸಿಕೊಂಡಿದ್ದರು, ಕಾರ್ಯಕಾರಿ ಸಮಿತಿಯ ಸದಸ್ಯರಾದ ದೀಪಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ರಾಜಶೇಕರ, ಮಲ್ಲಿನಾಥ, ಲಕ್ಷ್ಮೀ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಕುಮಾರ ಮಾನಕರ, ನಿವೃತ್ತ ಜಿಲ್ಲಾ ಸರ್ಜನ ಡಾ.ವ್ಹಿ.ಡಿ.ಕಪರ್ೂರಮಠ, ಆರ್.ಸಿ.ಎಚ್ ಅಧಿಕಾರಿ ಡಾ.ಎಸ್.ಎಂ.ಹೊನಕೇರಿ, ಡಾ.ಶಶಿ ಪಾಟೀಲ, ಡಾ.ತನುಜಾ ಕೆ.ಎನ್, ಡಾ.ಅಯ್ಯನಗೌಡ ಪಾಟೀಲ ಸೇರಿದಂತೆ ವಿವಿಧ ವೈದ್ಯಾಧಿಕಾರಿಗಳು, ನಸರ್ಿಂಗ್ ಕಾಲೇಜ್ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತ್ಯರು ಉಪಸ್ಥಿತರಿದ್ದು, ಜಾಥಾ ನಡಿಗೆಯಲ್ಲಿ ಪಲ್ಗೊಂಡಿದ್ದರು. ಜನಜಾಗೃತಿ ಜಾಥಾ ನಡಿಗೆಯು ಜಿಲ್ಲಾಧಿಕಾರಿಗಳ ಕಚೇರಿಯಿಂದ ಆರಂಭವಾಗಿ ಕೋರ್ಟ ವೃತ್ತ, ಜುಬ್ಲಿ ವೃತ್ತ, ಹಳೆ ಬಸ್ ನಿಲ್ದಾಣ, ವಿವೇಕಾನಂದ ಸರ್ಕಲ್, ಅಂಜುಮನ್ ಕಾಲೇಜು ಮಾರ್ಗವಾಗಿ ಜಿಲ್ಲಾ ಆಸ್ಪತ್ರಗೆ ತಲುಪಿತು.