ಕೇರಳ : ಹಕ್ಕಿ ಜ್ವರ ಪ್ರಕರಣ ಬೆಳಕಿಗೆ

ಕೋಝಿಕ್ಕೋಡ್, ಮಾ 07 ,ಕೇರಳದ ವೆಂಗೇರಿ ಮತ್ತು ಕೊಡಿಯಾತ್ತೂರು ಕೋಳಿ ಸಾಕಣೆ ಕೇಂದ್ರಗಳಲ್ಲಿ ಹಕ್ಕಿ ಜ್ವರ (ಅವಿಯನ್ ಇನ್ ಫ್ಲುಯೆಂಜಾ) ಕಾಣಿಸಿಕೊಂಡಿರುವುದಾಗಿ  ಅಧಿಕಾರಿಗಳು ತಿಳಿಸಿದ್ದಾರೆ.   ಕೋಳಿ ಸಾಕಣೆ ಕೇಂದ್ರಗಳಲ್ಲಿ ಕಂಡುಬಂದಿರುವ ಹಕ್ಕಿ ಜ್ವರ, ಇತರ ಪ್ರದೇಶಗಳಿಗೂ ವ್ಯಾಪಿಸಿದೆಯೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.   ವೆಂಗೇರಿ ಮತ್ತು ಕೊಡಿಯಾತ್ತೂರಿನ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಕೋಳಿಗಳು ಹಾಗೂ ಇತರ ಸ್ಥಳೀಯ ಹಕ್ಕಿಗಳನ್ನು ಕೊಂದು ಹಾಕಲಾಗಿದ್ದು, ಅಲ್ಲಲ್ಲಿ ಅವುಗಳನ್ನು ಹೂಳಲಾಗಿದೆ ಎಂದು ಪಶುಸಂಗೋಪನೆ ಇಲಾಖೆಯ ಮೂಲಗಳು ತಿಳಿಸಿವೆ.  ಅವಿಯೆನ್ ಇನ್ ಫ್ಲುಯೆಂಜಾ ಎಚ್ ಪಿಎಐ ವೈರಾಣುವಿನಿಂದ ಹರಡುವ ಸೋಂಕು.  ಇದು ಹೆಚ್ಚಾಗಿ ಮೊಟ್ಟಿಗಳನ್ನಿಡುವ ಹಕ್ಕಿಗಳಲ್ಲಿ ಕಂಡುಬರುತ್ತವೆ.  ಕೋಳಿ ಸಾಕಾಣಿಕಾ ಕೇಂದ್ರಗಳಲ್ಲಿ ಹೆಚ್ಚಿನ ಪ್ರಮಾಣದ ಕೋಳಿಗಳು ಸಾವನ್ನಪ್ಪುತ್ತವೆ.