ಅಂತರ ರಾಜ್ಯ ಮಟ್ಟದ ಮಹಿಳಾ ಕಬ್ಬಡಿಯಲ್ಲಿ ಬಾಚನಿ ಪ್ರಥಮ

ಲೋಕದರ್ಶನ ವರದಿ

ಮುಗಳಖೋಡ 16: ಸಮಿಪದ ಕಂಕಣವಾಡಿ ಪಟ್ಟಣದಲ್ಲಿ ಶ್ರೀ ಹಾಲಸಿದ್ದೇಶ್ವರ ಜಾತ್ರಾ ಮಹತ್ಸವದ ಅಂಗವಾಗಿ ಅಂತರ ರಾಜ್ಯ ಮಟ್ಟದ ಮಹಿಳಾ ಕಬ್ಬಡಿಯಲ್ಲಿ ಬಾಚನಿ ತಂಡ ಪ್ರಥಮ ಸ್ಥಾನ ಪಡೆಯಿತು. ಪ್ರಥಮ ಸೆಮಿಪಾಯ್ನಲ್ ಪಂದ್ಯದಲ್ಲಿ ಕೋಲ್ಲಾಪೂರ ತಂಡದ ವಿರುದ್ದ 10-20 ಅಂಕಗಳಿಂದ ಬಾಚನಿ ತಂಡ ಬಜ್ರರಿ ಅಂತರದಿಂದ ಗೆಲವು ಸಾಧಿಸಿ ಪಾಯನಲ್ ಹಂತಕ್ಕೆ ಪ್ರವೇಶ ಪಡೆಯಿತು ಎರಡನೇ ಸೇಮಿಪಾಯನಲ್ ಪಂದ್ಯಕ್ಕೆ ಪ್ರವೇಶ ಪಡೆಯಿತು ಪಾಯಿನಲ್ ಪಂದ್ಯದ ಸೆನಸಾಟದಲ್ಲಿ ಬಾಚನಿ ತಂಡವು ಬಿರಡಿ ತಂಡವನ್ನು 10-07 ಅಂಕಗಳಿಂದ ಪ್ರಥಮ ಸ್ಥಾನ ಪಡೆಯಿತು ಪರಾಬವಗೋಂಡ ಬಿರಡಿ ತಂಡವು ದ್ವಿತಿಯ ಸ್ಥಾನ ಪಡೆಯಿತು. 

ತೃತಿಯ ಸ್ಥಾನ ಪಟ ವಡಗಾಂವ  ಕೋಲ್ಲಾಪೂರ ತಂಡ ಹಾಗೂ ಶ್ರೀ ಹಾಲಸಿದ್ದೇಶ್ವರ ಕಂಕಣವಾಡಿ ತಂಡ ಚತುರ್ಥ ಸ್ಥಾನ ಪಡೆಯಿತು ವಿಜೇತ ತಂಡಗಳಿಗೆ ನಗದು ಬಹುಮಾನ ಹಾಗೂ  ಟ್ರೋಪಿ ನೀಡಿ ಗೌರವಿಸಲಾಯಿತು  ವಯಕ್ತಿಕ ಬಹುಮಾನ ಕಂಕಣವಾಡಿಯ ಗೀತಾ ಬಿದರಿ ಉತ್ತಮ ದಾಳಿಗಾರ್ತಿ. ಬಾಚನಿಯ ಮಾಲಾಲ ಮಾನೆ ಸರ್ವೋತ್ತಮ ಆಟಗಾರ್ತಿ ಬಿರಡಿಯ ನೀಲಾ ಮಹಿಶ್ಯಾಳೆ. ಉತ್ತಮ ಹಿಡಿತಗಾರ್ತಿ  ಪ್ರಶಸ್ತಿಗೆ ಬಾಜನರಾದರು.