ಅಧ್ಯಕ್ಷರಾಗಿ ಬಸಪ್ಪ ಬಾಳಪ್ಪಗೋಳ, ಉಪಾಧ್ಯಕ್ಷರಾಗಿ ದೇವಾನಂದ ಮಾಡಲಗಿ ಆಯ್ಕೆ
ರಾಯಬಾಗ, 23: ತಾಲೂಕಾ ಪ್ರಾಥಮಿಕ ಶಿಕ್ಷಕರ ಪತ್ತು ಬೆಳೆಸುವ ಸಹಕಾರ ಸಂಘದ 5 ವರ್ಷದ (2025-30) ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಸಪ್ಪ ಬಾಳಪ್ಪಗೋಳ ಹಾಗೂ ಉಪಾಧ್ಯಕ್ಷರಾಗಿ ದೇವಾನಂದ ಮಾಡಲಗಿ ಅವರು ಅವಿರೋಧವಾಗಿ ಆಯ್ಕೆಯಾದರು.
ಸಂಘದ ನಿರ್ದೇಶಕರಾಗಿ ಅಶೋಕ ಗಸ್ತಿ, ರೇಷ್ಮಾ ಪಟೇಲ, ದಿಲಾವರ ಸುಲ್ತಾನಬಾಂವಿ, ಸದಾಶಿವ ಮಸರಗುಪ್ಪಿ, ಶಂಕರ ಕ್ಯಾಸ್ತಿ, ನಿಂಗಪ್ಪ ಮಠದಕರ, ಕಸ್ತೂರಿ ಧನಗರ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಎಸ್.ಎಸ್.ಕರಬಸನವರ ಕಾರ್ಯ ನಿರ್ವಹಿಸಿದರು.
ನೂತನ ಅಧ್ಯಕ್ಷ ಬಸಪ್ಪ ಬಾಳಪ್ಪಗೋಳ ಮಾತನಾಡಿ, ಸಂಘದ ಅಭಿವೃದ್ಧಿಗಾಗಿ ಎಲ್ಲರೂ ಕೂಡಿಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ. ಸಂಘದ ಎಲ್ಲ ವ್ಯವಸ್ಥೆಯನ್ನು ಗಣಕೀರಣ ಮಾಡಲಾಗುವುದು, ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ ನೀಡುವ ಪ್ರೋತ್ಸಾಹ ಧನವನ್ನು ಹೆಚ್ಚಿಸಲಾಗುವುದು, ಸಂಘದ ಸದಸ್ಯರಿಗೆ ಕಡಿಮೆ ಬಡ್ಡಿದರದಲ್ಲಿ ಸಕಾಲದಲ್ಲಿ ಸಾಲವನ್ನು ನೀಡಲಾಗುವುದು ಎಂದು ಹೇಳಿದರು.
ಗುರು ಸ್ಪಂದನ ಬಳಗದ ಬಿ.ಎಸ್.ಮುತ್ತೂರ, ಎಸ್.ಡಿ.ಸಪ್ತಸಾಗರ, ಎನ್.ಬಿ.ಭಿರಡಿ, ಬಿ.ವಿ.ಹುಣಸಿಕಟ್ಟಿ, ಕೆ.ಆರ್.ಶಿಂಗೆ, ವಿ.ಎಸ್.ಬೀರಗೋನಿ, ಡಿ.ಎಸ್.ಬಸರಗಿ, ಸತ್ಯರಾಜ ಕಾಂಬಳೆ, ಎಸ್.ಪಿ.ಕಂಕಣವಾಡಿ, ವಿ.ಆರ್.ಢವಳೇಶ್ವರ ಸೇರಿ ಅನೇಕ ಶಿಕ್ಷಕರು ಇದ್ದರು.