ಬಸವಣ್ಣನವರ ಜಯಂತ್ಯೋತ್ಸವ: ಹಾಡೋಣ ಬಾ ಕುಣಿಯೋಣ ಬಾ ಕಾರ್ಯಕ್ರಮ

Basava Jayanti: Dharwad news

ಹುಬ್ಬಳ್ಳಿ 02:  ರಾಜ ವಿದ್ಯಾಶ್ರಮದಲ್ಲಿ ವಂದನಾ ಫೌಂಢೇಶನ್ ವತಿಯಿಂದ ಕರ್ನಾಟಕದ ಸಾಂಸ್ಕೃತಿಕ ನಾಯಕ, ವಿಶ್ವಗುರು  ಬಸವಣ್ಣನವರ ಜಯಂತ್ಯೋತ್ಸವದ ಶುಭ ಸಂದರ್ಭದಲ್ಲಿ  ಸಂಗೀತ ಕಲಾವಿಧರಿಂದ ಹಾಡೋಣ ಬಾ ಕುಣಿಯೋಣ ಬಾ ಕಾರ್ಯಕ್ರಮವನು ಆಯೋಜಿಸಲಾಗಿತ್ತು.

ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ‌್ಯದರ್ಶಿ, ಕರ್ನಾಟಕಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕಡಾ. ಸುರೇಶ ಡಿ. ಹೊರಕೇರಿ ಅವರು ಜಗಜ್ಯೋತಿ ಬಸವೇಶ್ವರ ಅವರ ಭಾವಚಿತ್ರಕ್ಕೆ  ಪುಷ​‍್ಾರೆ್ಪಣ ಮಾಡುವ ಮೂಲಕ ಗೌರವಅರೆ​‍್ಣ ಮಾಡಿ, ಭಕ್ತಿ ಪೂರ್ವಕ ನಮನಗಳನ್ನು ಸಲ್ಲಿಸಿದರು. ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಅವರು ಮಾತನಾಡಿ  ಮನುಷ್ಯ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಸಿಲುಕಿ ತೊಂದರೆತಾಪತ್ರಯಗಳಿಗೆ ಈಡಾಗಿದ್ದಾನೆ. ಮನುಷ್ಯನ ಸಹಜ ಬದುಕಿಗೆ ಕುಂದು ಉಂಟಾಗಿದೆ. ಇಂದಿನ ಸಾಮಾಜಿಕ, ರಾಜಕೀಯ, ಆರ್ಥಿಕ ಒತ್ತಡದಿಂದ ಮಾನವರ ಬದುಕು ಡೋಲಾಯ ಮಾನವಾಗಿದೆ. ಮೊಸ-ವಂಚನೆ, ದ್ವೇಷ-ಅಸೂಹೆ, ಅನೀತಿ-ಅನ್ಯಾಯ, ಸಾವು-ನೋವು, ಮೊದಲಾದವುಗಳು ತುಂಬಿ ತುಳುಕುತ್ತಿರುವ ಇಂದಿನ ಅಂಧಮಯ ದಿನಮಾನದಲ್ಲಿ ಬೆಳಕಾಗಿ ತೋರುತ್ತಿರುವುದು ಶರಣ ತತ್ವ. ಶರಣರ ವಿಚಾರಗಳಲ್ಲಿದೆ ಸಮಸ್ಯೆಗಳಿಗೆ ಪರಿಹಾರ. ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಲು ಇರುವ ಮಾರ್ಗ ಮನುಷ್ಯ ಧರ್ಮದತ್ತ್ತ ವಾಲುವುದು. 12ನೇ ಶತಮಾನದ ಶರಣರು ಮಾನವರ ಸರ್ವತೋಮುಖ ಅಭಿವೃದ್ಧಿಗಾಗಿ ಚಿಂತಿಸಿದರು ಮಾತ್ರವಲ್ಲ ಅವರು ಮಾನಸಿಕ ನೆಮ್ಮದಿಗೆ ಬೇಕಾದತನು ಶುಚಿ, ಮನ ಶುಚಿ, ಭಾವ ಶುಚಿ ಮಾರ್ಗಗಳನ್ನು ತೋರಿದರು. ನುಡಿದಂತೆ-ನಡೆದುದು ಶರಣರ ಹೆಗ್ಗಳಿಕೆ ಎಂದರು.

ಸೋಹನ ಸುರೇಶ ಹೊರಕೇರಿ, ಎಸ್‌.ನೀಲಗುಂದ, ಉಪಸ್ಥಿತರಿದ್ದರು.   ಡಾ. ವಂದನಾ ರಮೇಶ ಕರಾಳೆ ಅವರು ಕಾರ್ಯಕ್ರಮವನ್ನು ನಿರ್ವಹಣೆ ಮಾಡಿದರು. ವೇಷ ಭೂಷಣದಲ್ಲಿ ಬಸವೇಶ್ವರರ ಪಾತ್ರದಲ್ಲಿ ಅವನೀಶ ಎಸ್‌. ನೀಲಗುಂದ, ಅಕ್ಕಮಹಾದೇವಿ ಪಾತ್ರದಲ್ಲಿ ಸಾನ್ವಿಎಸ್‌. ತೇಗೂರ ಹಾಗೂ ಸಮೃದ್ಧಿ ಎಸ್‌ತೇಗೂರಅವರು ಮಿಂಚಿದರು. ಹಲವಾರು ಗಾಯಕರು ಭಾಗವಹಿಸಿ, ಹಾಡುಗಳನ್ನು ಪ್ರಸ್ತುತ ಪಡಿಸಿದರು.ಬಸವ ಜಯಂತಿಯನು ್ನ ಅರ್ಥಪೂರ್ಣವಾಗಿ ಯಶಸ್ವಿಗೊಳಿಸಿದರು.