ಬೈಲಹೊಂಗಲ, 27: ಪಟ್ಟಣದ ಪತ್ರಿ ಬಸವನಗರ 2 ಅಡ್ಡರಸ್ತೆಯಲ್ಲಿರುವ ಪತ್ರಿ ಬಸವೇಶ್ವರ ಅನುಭವ ಮಂಟಪದಲ್ಲಿ ಪತ್ರಿ ಬಸವ ನಗರ ಅಭಿವೃದ್ಧಿ ಸಂಘ, ಪತ್ರಿ ಬಸವೇಶ್ವರ ಶರಣ ಸಂಸ್ಕೃತಿ ಉತ್ಸವ ಸಮಿತಿಯ ಆಶ್ರಯದಲ್ಲಿ ಬಸವ ಜಯ ಪತ್ರಿ ಬಸವೇಶ್ವರ ಜಾತ್ರಾ ಮಹೋತ್ಸವ ಮತ್ತು 13ನೇ ಶರಣ ಸಂಸ್ಕೃತಿ ಉತ್ಸವ- 2025 ಕಾರ್ಯಕ್ರಮ ಏ. 28ರಿಂದ 30ರ ವರೆಗೆ ವಚನ ಕಂಠಪಾಠ ಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ವಿವಿಧ ಗೋಷ್ಠಿಗಳು ನಡೆಯಲಿವೆ.
ಡಾ. ಅನುಪಮ ಜೋಶಿ ಹಾಗೂ ಓಂ ಸಂಗೀತ ಪಾಠಶಾಲೆ ವಿದ್ಯಾರ್ಥಿಗಳಿಂದ ಸಂಗೀತ ಸೇವೆ ನಡೆಯಲಿದೆ. 28ರಂದು ಬೆಳಗ್ಗೆ 9ಕ್ಕೆ ವಿಶ್ವನಾಥ ಹಿರೇಮಠ ದಂಪತಿ ಷಟ್ ಸ್ಥಲ ಧ್ವಜಾರೋಹಣ ನೆರವೇರಿಸುವರು. ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆ ವಹಿಸುವರು. ಶಿಕ್ಷಕ ಬಸವರಾಜ ಮಾಟೋಳ್ಳಿ ಷಟ್ ಸ್ಥಲ ನುಡಿ ಹೇಳುವರು.
ಅಂದು ಸಂಜೆ 6ಕ್ಕೆ ಬಸವನ ಯೋಗದಿಂದ 'ಹಸನಾಯ್ತು ಲೋಕ' ಎಂಬ ವಿಷಯ ಕುರಿತು ಪ್ರಥಮ ಗೋಷ್ಠಿ 29ನೇ ಮಾಸಿಕ ಅನುಭಾವ ಗೋಷ್ಠಿ ನಡೆಯಲಿದೆ. ಮುರಗೋಡ ಶ್ರೀ ಮಹಾಂತ ದುರದುಂಡೀಶ್ವರ ಮಠದ ನೀಲಕಂಠ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಡಾ. ಶಿವಯೋಗಿ ದೇವರು ಸಮುಖ ಅನುಭಾವ ಹೇಳುವರು. ವತ್ರಿಬಸವೇಶ್ವರ ಅನುಭವ ಮಂಟಪದ ಅಧ್ಯಕ್ಷ ಪ್ರೇಮಕ್ಕಾ ಅಂಗಡಿ ನೇತೃತ್ವ ವಹಿಸುವರು. ಸಂಸದ ಜಗದೀಶ ಶೆಟ್ಟರ್ ಕಾರ್ಯಕ್ರಮ ಉದ್ಘಾಟಿಸುವರು. ಗಣಾಚಾರಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಿ.ಬಿ. ಗಣಾಚಾರಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಜಗದೀಶ ಮೆಟಗುಡ್ಡ, ವರ್ತಿಸಿದ್ದಬಸವೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಹಾಬಳೇಶ ಪಾಟೀಲ ಆಗಮಿಸುವರು.
ದಿ.29ರಂದು ಬೆಳಗ್ಗೆ 8ರಿಂದ 10ರ ವರೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಲಿದೆ. ಲಲಿತಾ ಪಾಟೀಲ ದಂಪತಿ ಷಟ್ ಸ್ಥಲ ಧ್ವಜಾರೋಹಣ ನೆರವೇರಿಸುವರು. ಡಾ. ನಿರ್ಮಲಾ ಮಹಾಂತಶೆಟ್ಟಿ ಕಾರ್ಯಕ್ರಮ ಉದ್ಘಾಟಿಸು ವರು. ತಜ್ಞರಾದ ಡಾ. ಮಂಜುನಾಥ ಮುದಕನ ಗೌಡರ, ಡಾ. ಶರಣಕುಮಾರ ಅಂಗಡಿ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಸಂಜೆ 6 ಕ್ಕೆ ಇಷ್ಟಲಿಂಗ ಪೂಜೆಯ ವೈಜ್ಞಾನಿಕತೆ ದ್ವಿತೀಯ ಗೋಷ್ಠಿ ನಡೆಯಲಿದೆ. ಡಾ. ಪಂಚಮ ಶಿವಲಿಂಗೇಶ್ವರ ಮಹಾ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸುವರು. ಬಸವಲಿಂಗ ಮಹಾ ಸ್ವಾಮೀಜಿ ನೇತೃತ್ವ ವಹಿಸುವರು. ಪ್ರಭುನೀಲಕಂಠ ಮಹಾಸ್ವಾಮೀಜಿ ಸಮ್ಮುಖ ವಹಿಸುವರು. ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ಪುರಸಭೆ ಸದಸ್ಯ ಅರ್ಜುನ ಕಲಕುಟಕರ ಅಧ್ಯಕ್ಷತೆ ವಹಿಸುವರು. ಡಾ.ದಯಾನಂದ ನೂಲಿ ಅನುಭಾವ ನುಡಿ ಹೇಳುವರು.
ದಿ. 30ರಂದು ಬೆಳಗ್ಗೆ 7 ಕ್ಕೆ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿ ಹಾಗೂ ಬಸವ ಮಹಾಪೂಜೆ, ತೊಟ್ಟಿಲೋತ್ಸವ ಮೆರವಣಿಗೆ ನಡೆಯಲಿದೆ. ಶಂಕರ ದೇವರು ಸಾನ್ನಿಧ್ಯ ವಹಿಸುವರು. ವಿದ್ಯಾಶ್ರೀ ರಜಪೂತ, ಡಾ. ಅಮರಜೀಡಸಿಂಗ್ ರಜಪೂತ ದಂಪತಿ ಯಿಂದ ಧ್ವಜಾರೋಹಣ ನೆರವೇರಲಿದೆ. ಪತ್ರಿ ಬಸವೇಶ್ವರ ಶರಣ ಸಂಸ್ಕೃತಿ ಉತ್ಸವ ಸಮಿತಿ ನೂತನ ಅಧ್ಯಕ್ಷ ದುಂಡಯ್ಯಾ ಕುಲಕರ್ಣಿ ನೇತೃತ್ವ ವಹಿಸುವರು. ಮೀನಾಕ್ಷಿ ಹವಳಪ್ಪನವರ ಹಾಗೂ ಸುಹಾಸಿನಿ ತಿಳ್ಳಿ ದಂಪತಿಗಳು ಕಾರ್ಯಕ್ರಮ ನಿರ್ವಹಿಸುವರು. ಅಂದು ಮಧ್ಯಾಹ್ನ 12ಕ್ಕೆ ಮಹಾಪ್ರಸಾದ, ಸಂಜೆ 6ಕ್ಕೆ ಪ್ರಸ್ತುತ ಮಹಿಳೆಯರ ಸಬಲೀಕರಣದ ಸವಾಲು ಹಾಗೂ ಸವಲತ್ತುಗಳು ಎಂಬ ವಿಷಯ ಕುರಿತು ತೃತೀಯ ಗೋಷ್ಠಿ ನಡೆಯಲಿದೆ. ಡಾ. ಅಲ್ಲಮಪ್ರಭು ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಬೈಲವಾಡ ವರ್ತಿಮಠದ ಶಂಕರ ದೇವರು ಸಮ್ಮುಖ ವಹಿಸುವರು. ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಅಧ್ಯಕ್ಷತೆ ವಹಿಸುವರು. ಮುರಗೋಡ ಅಕ್ಕಮಹಾದೇವಿ ಮಹಿಳಾ ವಿವಿಧ ಉದ್ದೇಶಗಳ ಸಹಕಾರಿ ಸಂಘದ ಅಧ್ಯಕ್ಷೆ ರತ್ನಕ್ಕೆ ಶೆಟ್ಟರ್ ಕಾರ್ಯಕ್ರಮ ಉದ್ಘಾಟಿಸುವರು ಎಂದು ಪತ್ರಿ ಬಸವೇಶ್ವರ ಅನುಭವ ಮಂಟಪದ ಅಧ್ಯಕ್ಕೆ ಪ್ರೇಮಕ್ಕಾ ಅಂಗಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.