ಬಸವನಗುಡಿ ಶಾಲೆಗೆ ರಾಜ್ಯ ಮಟ್ಟದ ಉತ್ತಮ ಶಾಲೆಗೆ ಗೌರವ ಪ್ರಶಸ್ತಿ

Basavanagudi School gets state-level best school award

ಬಸವನಗುಡಿ ಶಾಲೆಗೆ ರಾಜ್ಯ ಮಟ್ಟದ ಉತ್ತಮ ಶಾಲೆಗೆ ಗೌರವ ಪ್ರಶಸ್ತಿ 

ಯರಗಟ್ಟಿ 11: ಸಮೀಪದ ಬಸವನಗುಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಮೈಸೂರಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕಾವ್ಯಶ್ರೀ ಚಾರಿಟೆಬಲ್ ಟ್ರಸ್ಟ ಸಹಯೋಗದಲ್ಲಿ ಜರುಗಿದ ಕರ್ನಾಟಕ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಹಾಗೂ ಆರೂಢ ಭಾರತಿ ಸ್ವಾಮೀಜಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್,ಉಪಾಧ್ಯಕ್ಷ ಟಿ. ತ್ಯಾಗರಾಜು, ಕಾವ್ಯಶ್ರೀ ಚಾರಿಟೆಬಲ್ ಅಧ್ಯಕ್ಷ ಜಿ. ಶಿವಣ್ಣ, ಚೇತನ ಪೌಂಡೇಶನ್ ಅಧ್ಯಕ್ಷ ಚಂದ್ರಶೇಖರ ಮಾಡಲಗೇರಿ, ಭಾಷಾ ಅಲ್ಪಸಂಖ್ಯಾತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಎಲ್‌. ಐ. ಲಕ್ಕಮ್ಮನವರ, ಸಾಹಿತಿ ಪಂಡಿತ ಅವುಜಿ, ಅಪ್ನಾದೇಶ ಸಂಘಟನೆಯ ರಾಜ್ಯಾಧ್ಯಕ್ಷ ವೈ. ಬಿ. ಕಡಕೋಳ, ಡಾ. ವೀಣಾ ಲೂಸಿ ಸಾಲ್ಡಾನಾ, ನಟ ಚಿಕ್ಕ ಹೆಜ್ಜಾಜೆ ಮಹದೇವ್ ಮೊದಲಾದವರ ಸಮ್ಮುಖದಲ್ಲಿ ರಾಜ್ಯ ಮಟ್ಟದ ಉತ್ತಮ ಶಾಲೆ ಪ್ರಶಸ್ತಿಯನ್ನು ಶಾಲೆಯ ಮುಖ್ಯ ಶಿಕ್ಷಕ ವಿಜಯಕುಮಾರ ಮೆಳವಂಕಿಯವರಿಗೆ ನೀಡಿ ನೀಡಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ನಲಿಕಲಿ ವಿಷಯದ ರಾಜ್ಯಮಟ್ಟದ ಸಂಪನ್ಮೂಲ ಶಿಕ್ಷಕ ಮನೋಹರ ಚೀಲದ, ಸವದತ್ತಿ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿ ಶಿವಾನಂದ ಮಿಕಲಿ, ಶಿಕ್ಷಕರಾದ ಎಲ್ ಎಂ ಕುಮಕಾಗೋಳ, ಟಿ. ಬಿ. ಚೌರಡ್ಡಿ, ಗುರು,ಕೊಳವಿ ಮೊದಲಾದವರು ಪಸ್ಥಿತರಿದ್ದರು. ಚಂದ್ರಶೇಖರ ಮಾಡಲಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಜಿ. ಶಿವಣ್ಣ ಸ್ವಾಗತಿಸಿದರು.