ಬಸವಣ್ಣನವರ ಜಯಂತ್ಯೋತ್ಸವದಲ್ಲಿ ವಚನ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಲಾಯಿತು. ಗಣ್ಯರು
ಹುಬ್ಬಳ್ಳಿ 01: ಸಮಾನತೆಯ ಹರಿಕಾರ, ಮಹಾ ಮಾನವತಾವಾದಿ, ಕರ್ನಾಟಕದ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ ಜಯಂತ್ಯೋತ್ಸವದ ಶುಭ ಸಂದರ್ಭದಲ್ಲಿ ಇಂದಿರಾಗಾಜಿನ ಮನೆಯಲ್ಲಿರುವ ಜಗಜ್ಯೋತಿ ಬಸವೇಶ್ವರ ಅವರ ಪ್ರತಿಮೆಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಮಾಲಾರೆ್ಣ ಮಾಡುವ ಮೂಲಕ ಗೌರವ ಅರೆ್ಣ ಮಾಡಿ. ಭಕ್ತಿ ಪೂರ್ವಕ ನಮನಗಳನ್ನು ಸಲ್ಲಿಸಲಾಯಿತು. ಬಸವಣ್ಣನವರು ಹಲವಾರು ಶರಣರನ್ನು ಸೇರಿಸಿಕೊಂಡು ವಚನ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಲಾಯಿತು. ಗಣ್ಯರು ಮಾತನಾಡಿ ಬಸವಣ್ಣನವರ ಕಾಯಕ, ದಾಸೋಹ, ಸಮಾನತೆ, ಸ್ತ್ರೀ ಸ್ವಾತಂತ್ರ್ಯ ತತ್ವಗಳನ್ನು ಎಲ್ಲರೂ ಪಾಲಿಸಿದರೆ ಸೌಹಾರ್ಧತೆ ಹಾಗೂ ನೆಮ್ಮದಿ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ವಾಕರಸಾ ನಿಗಮದ ಮಾಜಿ ಅಧ್ಯಕ್ಷ ಸದಾನಂದಡಂಗನವರ ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಅಧ್ಯಕ್ಷ ಪ್ರೊ ಎಸ್.ಎಂ.ಸಾತ್ಮಾರ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ‌್ಯದಶಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ದುರೀಣರಾದ ಕೆ.ಎಸ್.ಇನಾಮತಿ, ಈರ್ಪಎಮ್ಮಿ, ಚನ್ನಬಸಪ್ಪ ಧಾರವಾಡ ಶೆಟ್ಟರ, ಸಂಗಮೇಶ ಐಹೋಳ್ಳಿ, ಉದ್ಯಮಿ, ಕೋಳಿವಾಡ ಮಾರ್ಬಲ್ಸ್ಘಗ್ರಾನೈಟ್ಸ ಮಾಲಿಕರಾದ ಶಂಕರ ಕೋಳಿವಾಡ, ದಾಕ್ಷಾಯಣಿ ಕೋಳಿವಾಡ, ಬಸವಕೇಂದ್ರದ ಅಧ್ಯಕ್ಷ ಪ್ರೊ ಜಿ.ಬಿ.ಹಳ್ಳಾಳ,ಜಾಗತಿಕ ಲಿಂಗಾಯತ ಮಹಾಸಭಾದ ಬಿ.ಎಲ್.ಲಿಂಗಶೆಟ್ಟರ ಎಸ್.ವಿ.ಕೊಟಗಿ,ಡಾ. ಎಂ.ಎಂ.ನುಚ್ಚಿ, ರೇಣುಕಾದೇಸಾಯಿ, ಮಂಜುಳಾ ಬದ್ನೂರ ಶೋಭಾ ಬೆಲ್ಲದ, ಬಸವರಾಜ ಬೆಲ್ಲದ, ಆರ್.ಸಿ.ಹಲಗತ್ತಿ, ಎನ್.ಬಿ.ಬೆಳ್ಳಿಗಟ್ಟಿ, ಪ್ರಭು ಶೆಟ್ಟರ ಚಿಂತಾಮಣಿ ಸಿಂದಗಿ, ವೀರಣ್ಣಗೊವೇಶ್ವರ, ನಿಜಗುಣಿ ಹಳ್ಳಾಳ, ಈಶ್ವರ ಶಿರಸಂಗಿ ಲಿಂಗರಾಜ ಕಂಬಳಿ ಗಂಗಾಧರ ದೊಡ್ಡವಾಡ, ಪ್ರವೀಣ ಕುಬಸದ, ಪರಮೇಶ್ವರ್ಪ, ಬಾಳು ಪಾಟೀಲ, ಪ್ರಮೋದ ಬದ್ದಿ, ಮುಂತಾದವರು ಇದ್ದರು. ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಅವರು ಮಾತನಾಡಿ ಬಸವಪ್ರಣೀತ ಲಿಂಗಾಯತ ಧರ್ಮ ಒಂದು ವಿಶ್ವಧರ್ಮ, ಸರ್ವರೂ ಆಚರಿಸಬಹುದಾದ ಸರಳ ಸಹಜಧರ್ಮ ಕಾಯಕ ದಾಸೋಹದ ಸಹಜ ಪ್ರಧಾನ ಧರ್ಮಏಕ ದೇವೋಪಾಸನೆ ಧರ್ಮ ದೇಹವೆ ದೇವಾಲಯವನ್ನಾಗಿ ಮಾಡಿಕೊಂಡು ದೇವರನ್ನು ತನ್ನೋಳಗೆ ಅನುಭವಿಸುವ ಧರ್ಮ ತನುಶುಚಿ, ಮನಶುಚಿ, ಭಾವಶುಚಿ ಗೊಳ್ಳಬೇಕಾದರೆ ಶರಣರ ತತ್ವ ಚಿಂತನೆ ಅತ್ಯವಶ್ಯ ಎಂದು ಹೇಳಿದರು. ದಾಕ್ಷಾಯಣಿ ಕೋಳಿವಾಡ, ಶೋಭಾ ಬೆಲ್ಲದ, ವಚನಗಳನ್ನು ಹಾಡಿದರು.