ಮಕ್ಕಳ ಮತ್ತು ಮಹಿಳೆಯರ ಹಕ್ಕುಗಳನ್ನು ಸಂರಕ್ಷಿಸಲು ಜಾಗ್ರತೆ ವಹಿಸಿ: ಎಂ.ಈರಣ್ಣ

Be careful to protect the rights of children and women: M. Iranna

ಕಂಪ್ಲಿ 16: ತಾಲೂಕಿನ ದೇವಲಾಪುರ ಗ್ರಾಮದ ಗ್ರಾಪಂ ಸಭಾಂಗಣದಲ್ಲಿ ಅಧ್ಯಕ್ಷೆ ಈರಮ್ಮ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಾವಲು ಸಮಿತಿ ಸಭೆ ಬುಧವಾರ ನಡೆಯಿತು. ನಂತರ ರೀಡ್ಸ್‌ ಸಂಸ್ಥೆಯ ಪ್ರೋಗ್ರಾಮ್ ಮ್ಯಾನೇಜರ್ ಎಂ.ಈರಣ್ಣ ಮಾತನಾಡಿ, ರಾಜ್ಯದಲ್ಲಿ ಶೇ.43 ರಷ್ಟು ಮಕ್ಕಳಿದ್ದಾರೆ.  

ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಮಕ್ಕಳ, ಮಹಿಳೆಯರ, ಯುವಕರ ಮತ್ತು ರೈತರನ್ನು ಸಂಘಟಿಸಿ ಸಬಲೀಕರಿಸಿ ಸಾಮಾಜಿಕ ಪಿಡುಗುಗಳನ್ನು ನಿರ್ಮೂಲನೆ ಮಾಡುವುದು ಹಾಗೂ ಸುಸ್ಥಿರ ಜೀವನೋಪಾಯಗಳನ್ನು ಕಲ್ಪಿಸುವುದು.  

ಬಾಲ್ಯ ವಿವಾಹ, ಬಾಲ ಕಾರ್ಮಿಕ, ಲಿಂಗತಾರತಮ್ಯ ಮತ್ತು ದೇವದಾಸಿ ಪದ್ಧತಿ ನಿರ್ಮೂಲನೆಗೊಳಿಸುವ ಮೂಲಕ ಮಕ್ಕಳ ಮತ್ತು ಮಹಿಳೆಯರ ಹಕ್ಕುಗಳನ್ನು ಸಂರಕ್ಷಿಸುವುದು ಮತ್ತು ಲಿಂಗ ಅಸಮಾನತೆ ತಡೆಯುವ ಉದ್ದೇಶವಾಗಿದೆ. ಪೋಷಕರು ಸೇರಿದಂತೆ ಪ್ರತಿಯೊಬ್ಬರು ಮಕ್ಕಳಿಗೆ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಜಾಗೃತಿವಹಿಸಬೇಕು ಎಂದರು.  

ಈ ಸಂದರ್ಭದಲ್ಲಿ ಪಿಡಿಒ ಹನುಮಂತಪ್ಪ, ಉಪಾಧ್ಯಕ್ಷ ಉಮೇಶ, ಸದಸ್ಯರಾದ ಕುಂಬಾರ ವಿರುಪಾಕ್ಷಪ್ಪ, ಚನ್ನದಾಸರ ಚನ್ನಮ್ಮ, ಬೂದಾಳ ರವಿಕುಮಾರ್, ದೇವರಮನೆ ಮಲ್ಲಮ್ಮ, ಎನ್‌.ನಾಗರಾಜ, ಓಂಕಾರ​‍್ಪ ವದ್ದಿಗೇರಿ ಮಾರೆಮ್ಮ, ಚನ್ನದಾಸರ ಉಮಾದೇವಿ, ಫಕೂರ್ಬಿ, ರೀಡ್ಸ್‌ ಸಂಸ್ಥೆಯ ತಾಲೂಕು ಸಂಯೋಜಕ ಶಶಿಭೂಷಣ್ ಸೇರಿದಂತೆ ಸಿಬ್ಬಂದಿ ಇದ್ದರು.