ಬಳ್ಳಾರಿ 26: ಖಾಸಗಿ ವಲಯಗಳಲ್ಲಿ ಕಾರ್ಖಾನೆ ಮತ್ತು ಉದ್ಯಮಗಳಲ್ಲಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ಅಭ್ಯರ್ಥಿಗಳ ಕೌಶಲ್ಯವನ್ನು ಹೆಚ್ಚಿಸಲು ಆಶಾದೀಪ ಎಂಬ ವಿನೂತನ ಯೋಜನೆಯನ್ನು ಕಾರ್ಮಿಕ ಇಲಾಖೆಯು ರಾಜ್ಯದಲ್ಲಿ ಜಾರಿಗೆ ತಂದಿದ್ದು, ಈ ಯೋಜನೆಯನ್ನು ರಾಜ್ಯದಲ್ಲಿ ಪ್ರಥಮವಾಗಿ ಬಳ್ಳಾರಿ ಕಾಮರ್ಿಕ ಇಲಾಖೆ ಹಾಗೂ ಜಿಂದಾಲ್ ಕಂಪನಿಯ ಸಹಯೋಗದಲ್ಲಿ ಅಪ್ರೆಂಟಿಷಿಪ್ ತರಬೇತಿ ಕಾರ್ಯಕ್ರಮವನ್ನು ಬಳ್ಳಾರಿ ಜಿಲ್ಲೆಯಲ್ಲಿ ಪ್ರಾರಂಭ ಮಾಡಲಾಗಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಚಂದ್ರಶೇಖರ್ ಐಲಿ ಹೇಳಿದರು.
ಬಳ್ಳಾರಿಯ ಕಾರ್ಮಿಕ ಇಲಾಖೆಯ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಆಶಾದೀಪ ಯೋಜನೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಐ.ಟಿ.ಐ ಮತ್ತು ಡಿಪ್ಲೊಮಾ ಪಾಸಾದ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ 85 ವಿದ್ಯಾರ್ಥಿಗಳು ಸಂದರ್ಶನಕ್ಕೆ ಹಾಜರಾಗಿದ್ದು, ಅದರಲ್ಲಿ 80 ಅಭ್ಯರ್ಥಿಗಳನ್ನು ಅಪ್ರೆಂಟಿಷಿಪ್ ತರಬೇತಿಗೆ ನೇಮಕ ಮಾಡಿಕೊಳ್ಳಲಾಗಿದೆ ಎಂದರು.
ತೋರಣಗಲ್ಲು ಜೆಎಸ್ಡಬ್ಲ್ಯೂ ವ್ಯವಸ್ಥಾಪಕರಾದ ಫಿರೋಜ್ ಅಹಮ್ಮದ್ ವರು ಮಾತನಾಡಿ ಆಶಾದೀಪ ಯೋಜನೆಯನ್ನು ಕಾರ್ಮಿಕ ಇಲಾಖೆಯು ಜಾರಿಗೆ ತಂದಿರುವುದು ತುಂಬಾ ಸಂತೋಷದ ವಿಷಯ ಹಾಗೂ ಖಾಸಗಿ ವಲಯಗಳಲ್ಲಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ಅಭ್ಯರ್ಥಿಗಳ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಇದೊಂದು ಸುವರ್ಣ ಅವಕಾಶ ಎಂದರು.
ಅಪ್ರೆಂಟಿಷಿಪ್ ತರಬೇತಿಗೆ ಆಯ್ಕೆಯಾದ ಪ್ರತಿಯೊಂದು ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ಸರ್ಕಾರ ಮತ್ತು ಜಿಂದಾಲ್ ಸಂಸ್ಥೆಯ ವತಿಯಿಂದ ರೂ.7 ಸಾವಿರ ಶಿಷ್ಯ ವೇತನ ನೀಡಲಾಗುವುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪಿ.ಎಸ್.ಹಟ್ಟಪ್ಪ, ಬಳ್ಳಾರಿ, ಕಾರ್ಮಿಕ ನಿರೀಕ್ಷಕ ಸಿ.ಎನ್. ರಾಜೇಶ್, ತೋರಣಗಲ್ಲು ಜೆಎಸ್ಡಬ್ಲ್ಯೂನ ಸಹಾಯಕ ವ್ಯವಸ್ಥಾಪಕರಾದ ವಿರೂಪಾಕ್ಷಿ, ಅನಿಲ್ ಹಾಗೂ ಸಂದರ್ಶನಕ್ಕೆ ಹಾಜರಾದ ವಿದ್ಯಾರ್ಥಿಗಳು ಇದ್ದರು. ಜಿಲ್ಲಾ ಕಾಮರ್ಿಕ ಇಲಾಖೆಯ ಕಾರ್ಯನಿರ್ವಾಹಕ ಆರ್.ಎನ್.ಶಿವರಾಜ್ ನಿರೂಪಿಸಿ ವಂದಿಸಿದರು.