ಲೋಕದರ್ಶನ ವರದಿ
ಬಳ್ಳಾರಿ 22: ನಗರ ಹೊರವಲಯದ ಬೈಪಾಸ್ ರಸ್ತೆಯ ಅಲ್ಲಂ ಭವನದ ಬಳಿ ಟೆಸ್ಟ್ ಡ್ರೈವ್ ತಂದಿದ್ದ ಸ್ಪೋಟರ್್ ಕಾರಿನ ಎಂಜಿನ್ ಬಿಸಿಯಾದ ಪರಿಣಾಮ ಅಗ್ನಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ಇಬ್ಬರು ಆ ಕಾರನ್ನು ಟೆಸ್ಟ್ ಡ್ರೈವ್ ಮಾಡಲೆಂದು ತೆಗೆದುಕೊಂಡು ಬಂದಿದ್ದರು. ಎಂಜಿನ್ ಒಳಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದನ್ನ ಸೂಕ್ಷ್ಮವಾಗಿ ಅರಿತ ಆ ಕಾರಿನೊಳಗಿದ್ದ ಇಬ್ಬರು ಕೂಡಲೇ ಕಾರಿಂದ ಕೆಳಗಡೆ ಇಳಿದುಕೊಂಡಿದ್ದರಿಂದ ಪ್ರಾಣಾಪಯದಿಂದ ಪಾರಾಗಿದ್ದಾರೆ.
ನಿಧಾನವಾಗಿ ಅಗ್ನಿ ಕಾರಿನ ಎಲ್ಲ ಕಡೆಯು ಆವರಿಸಿಕೊಂಡು ಕಾರು ಸುಟ್ಟು ಕರಕಲಾಗಿದೆ.ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಗ್ನಿಶಾಮಕದಳದ ಅಧಿಕಾರಿಗಳು ಕೂಡಲೇ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರು. ಈ ಕುರಿತು ಅಗ್ನಿಶಾಮಕದಳದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.