ಲೋಕದರ್ಶನ ವರದಿ
ಬಳ್ಳಾರಿ 22: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಪ್ರಾರಂಭದಿಂದಲೂ ಹೈದರಾಬಾದ್ ಕರ್ನಾಟಕದ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿ ವ್ಯವಸ್ಥಿತವಾಗಿ ಆಡಳಿತ ನಡೆಸುತ್ತಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿತ್ತು. ಇಂದಿನ ಪರಿಸ್ಥಿತಿ ನೋಡಿದರೆ ಈ ಭಾಗದ ಜನತೆ ತಲೆತಗ್ಗಿಸುವಂತಾಗಿದೆ. ಯಾವುದೇ ಸಮಸ್ಯೆಗಳಿದ್ದರೂ ಕುಲಪತಿ, ಕುಲಸಚಿವರ ಗಮನಕ್ಕೆ ತಂದರೂ ಆ ಸಮಸ್ಯೆಗಳಿಗೆ ಪರಿಹಾರವೇ ಸಿಗುತ್ತಿಲ್ಲ. ಅಂದರೆ ಆಡಳಿತ ವ್ಯವಸ್ಥೆ ಯಾವ ರೀತಿ ಕುಸಿಯುತ್ತಿದೆ ಎಂಬುದು ಇದರಿಂದ ಸಾಬೀತಾಗುತ್ತದೆ. ವಿದ್ಯಾಥರ್ಿಗಳು ಸಮಸ್ಯೆ ಕೇಳಲು ಹೋದರೆ ಗುಂಡಾ ವರ್ತನೆ ತೋರುವ ಆಡಳಿತ ಮಂಡಳಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ. ಸಂಡೂರಿನ ಸರ್ಕಾರಿ ಪದವಿ ಕಾಲೇಜಿನ ವಿಜ್ಞಾನ ವಿದ್ಯಾಥರ್ಿಗಳು ಫೇಲ್ ಆಗಿರುವುದಕ್ಕೆ ವಿಶ್ವ ವಿದ್ಯಾಲಯವೇ ನೇರ ಹ್ರೆಣೆಯಾಗಿದೆ. ಆದರೂ ಸತ್ತ ಶವದಂತೆ ಕುಲಪತಿಗಳು ಸುಮ್ಮನಿರುವುದು ಶೋಚನೀಯ ಸಂಗತಿ.ಘಟಿಕೋತ್ಸವದ ಶುಲ್ಕ ರಾಜ್ಯದ ಯಾವ ವಿಶ್ವವಿದ್ಯಾಲಯದಲ್ಲಿ ಇಲ್ಲದ ಶುಲ್ಕವನ್ನು ವಿದ್ಯಾಥರ್ಿಗಳಿಂದ ತುಂಬಿಸಿಕೊಂಡಿದ್ದಾರೆ (ರೂ. 2750) ತಕ್ಷಣವೇ ವಿದ್ಯಾರ್ಥಿಗಳಿಗೆ ಮರುಪಾವತಿ ಮಾಡಬೇಕು.ಬಳ್ಳಾರಿ ವಿಶ್ವವಿದ್ಯಾಲಯ ವ್ಯಾಪ್ತಿಗೆ ಬರುವ 19 ಬಿ.ಇಡಿ ಕಾಲೇಜುಗಳಲ್ಲಿ ವಿದ್ಯಾಥರ್ಿಗಳು ಆಡಳಿತ ಮಂಡಳಿಯ ಕೈಗೊಂಬೆಯಾಗಿದ್ದಾರೆ.
ಉದಾ: ರಾಯಲ್ ಬಿ.ಇಡಿ ಕಾಲೇಜು, ಸೋನಿಯಾ ಬಿ.ಇಡಿ ಕಾಲೇಜು, ಕೊಟ್ಟೂರು, ಕೂಡ್ಲಿಗಿ ಬಿ.ಇಡಿ ಕಾಲೇಜು ಇತ್ಯಾದಿ ಕಾಲೇಜುಗಳಲ್ಲಿ ಆಧ್ಯಾಪಕರಿಲ್ಲದೇ, ಗ್ರಂಥಾಲಯವಿಲ್ಲದೇ, ಮೂಲಭೂತ ಸೌಕರ್ಯಗಳಿಲ್ಲದೇ ಕಾಲೇಜುಗಗಳನ್ನು ನಡೆಸುತ್ತಿದ್ದಾರೆ. ಅಂದರೆ ವಿದ್ಯಾಥರ್ಿಗಳು ಹೆಸರಿಗೆ ಮಾತ್ರ ದಾಖಲಾಗುತ್ತಿದ್ದಾರೆ, ಪರೀಕ್ಷಿಗೆ ಕುಳಿತುಕೊಳ್ಳುತ್ತಿದ್ದಾರೆ. ಇದರ ಬಗ್ಗೆ ವಿಶ್ವವಿದ್ಯಾಲಯ, ಆಡಳಿತ ಮಂಡಳಿ ಮೌನವಹಿಸಿರುವುದೇಕೆ? ಅಂದರೆ ಸೂಟ್ಕೇಸ್ ವ್ಯವಸ್ಥೆಯನ್ನು ರಾಜಕಾರಣದ ರೀತಿ ವಿಶ್ವವಿದ್ಯಾಲಯಗಳು ಮಾಡುತ್ತಿವೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಕೋ-ಆರ್ಡಿನೇಷನ್ ಕಮಿಟಿ ಬಂದಂತಹ ಸಂದರ್ಭದಲ್ಲಿ ತಮ್ಮ ಜೇಬುಗಳನ್ನು ತುಂಬಿಸಿ ಕಳುಹಿಸಿದರೆ ಗರಿಷ್ಟ ಅಂಕಗಳು ಇದು ವಿಶ್ವವಿದ್ಯಾಲಯದ ಬಹುದೊಡ್ಡ ಸಾಧನೆ. ತಕ್ಷಣವೇ ಎಲ್ಲಾ ಕಾಲೇಜುಗಳಲ್ಲಿ ಬಯೋಮೆಟ್ರಿಕ್ ಬರದಿದ್ದಲ್ಲಿ ಹೋರಾಟ ಬೇರೆ ಸ್ವರರೂಪವಾಗುತ್ತದೆ ಎಂದು ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಲಾಗುತ್ತದೆ.ವಿಶ್ವವಿದ್ಯಾಲಯದ ಆವರಣದಲ್ಲಿರುವ ಹಾಸ್ಟೆಲ್ ವ್ಯವಸ್ಥೆ ದನದ ಕೊಟ್ಟಿಗೆ ರೀತಿ ಇದೆ, ಪ್ರಶ್ನಿಸಿದರೆ ಅನುಮತಿ ಕೇಳುತ್ತಾರೆ, ಹಾಸ್ಟೆಲ್ಗೆ ಸಂಬಂಧಿಸಿದಂತೆ ವಾರ್ಡನ್ರವರಿಗೆ ಅನೇಕ ಬಾರಿ ತಿಳಿಸಿದರೂ ಪ್ರಯೋಜನವಾಗಿಲ್ಲ. ಕಳಪೆ ಗುಣಮಟ್ಟದ ಆಹಾರ, ನೀರಿನ ಅವ್ಯವಸ್ಥೆ ಮುಂತಾದ ಸಮಸ್ಯೆಗಳನ್ನು ಹಾಸ್ಟೆಲ್ನಲ್ಲಿ ಕಾಣಬಹುದು. ಎಲ್ಲಾ ಸಮಸ್ಯೆಗಳೂ ಮೇಲ್ನೋಟಕ್ಕೆ ಕಾಣುತ್ತಿರುವ ಸಮಸ್ಯೆಗಳು, ಕಾಣದೇ ಇರು ಸಮಸ್ಯೆಗಳು ನೂರಾರು. ತಕ್ಷಣವೇ ಈ ಎಲ್ಲಾ ಸಮಸ್ಯೆಗಳು ಬಗೆಹರಿಯದಿದ್ದಲ್ಲಿ ದಿನಾಂಕ 26.02.2020 ರಂದು ಬಳ್ಳಾರಿ ವಿ.ವಿ. ಚಲೋ ಬೃಹತ್ ಮಟ್ಟದ ಹೋರಾಟ ನಡೆಸಲಾಗುವುದು. ವಿಶ್ವವಿದ್ಯಾಲಯಗಳು ಜ್ಞಾನ ದೇಗುಲಗಳು ಆದರೆ ಬಳ್ಳಾರಿ ವಿಶ್ವವಿದ್ಯಾಲಯ ಸಮಸ್ಯೆಯ ಆಗರವಾಗಿದೆ. ಆದ ಕಾರಣ ತಕ್ಷಣವೇ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡಬೇಕೆಂದರು.