ಬಳ್ಳಾರಿ 07: ಕಳೆದ ಕೆಲದಿನಗಳಿಂದ ತುಂಗಾಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು, ನೀರಾವರಿ ಉದ್ದೇಶಕ್ಕೆ ಜಲಾಶಯದ ನೀರನ್ನು ಬಿಡುಗಡೆ ಮಾಡುವುದಕ್ಕೆ ಸಂಬಂಧಿಸಿದಂತೆ ಕೆಲದಿನಗಳಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿದೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಬಳ್ಳಾರಿ-ಕರನೂಲ್ ಅಂತರ್ಜಿಲ್ಲಾ ಸಮನ್ವಯ ಸಮಿತಿ ಸಭೆಯಲ್ಲಿ ಈ ನಿಧರ್ಾರಕ್ಕೆ ಬರಲಾಗಿದೆ.
ಸದ್ಯ ತುಂಗಾಭದ್ರಾ ಜಲಾಶಯದಲ್ಲಿ 36 ಟಿಎಂಸಿ ನೀರು ಲಭ್ಯವಿದ್ದು, 76 ಸಾವಿರ ಕ್ಯೂಸೆಕ್ ಒಳಹರಿವು ಇದೆ. ಇದೇ ರೀತಿಯ ಒಳಹರಿವು ಇನ್ನೂ ಕೆಲದಿನಗಳು ಮುಂದುವರಿದರೇ 50ಕ್ಕೂ ಹೆಚ್ಚು ಟಿಎಂಸಿ ತಲುಪುವ ಸಾಧ್ಯತೆ ಇದೆ. ನೀರಾವರಿಗಾಗಿ ನೀರು ಬಿಡುವುದಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲದಿನಗಳಲ್ಲಿ ಚಚರ್ಿಸಿ ತೀರ್ಮಾನ ಕೈಗೊಳ್ಳೋಣ. ಅಲ್ಲಿಯವರೆಗೆ ತುಂಗಾಭದ್ರಾ ಬೋಡರ್್ ಯಾವುದೇ ನಿಧರ್ಾರ ಕೈಗೊಳ್ಳಬಾರದು ಎಂದು ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮತ್ತು ಕನರ್ೂಲ್ ಜಿಲ್ಲಾಧಿಕಾರಿ ವೀರಪಾಂಡ್ಯನ್ ಅವರು ಬೋಡರ್್ ಅಧೀಕ್ಷಕ ಕೆ.ವಿ.ರಮಣ ಅವರಿಗೆ ಸೂಚನೆ ನೀಡಿದರು.
ಸದ್ಯ ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ಜಲಾಶಯದ ನೀರು ಹರಿಸಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.
ಕೃಷಿ ನೀತಿ ರೂಪಿಸಿ:
ತುಂಗಾಭದ್ರಾ ಜಲಾಶಯದ ಇಂತಹ ಸ್ಥಿತಿಯಲ್ಲಿ ಯಾವ ರೀತಿಯ ಬೆಳೆಯನ್ನು ರೈತ ಸಮುದಾಯ ಬೆಳೆಯಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಮತ್ತು ಕನರ್ೂಲ್ ಜಿಲ್ಲೆಗಳ ಕೃಷಿ ಅಧಿಕಾರಿಗಳು ಕೃಷಿ ಹಾಗೂ ನೀರಾವರಿ ತಜ್ಞರೊಂದಿಗೆ ಚಚರ್ಿಸಿ ಮತ್ತು ಕೆಳಹಂತದಲ್ಲಿ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸುವ ಮೂಲಕ ವಿನೂತನ ಕೃಷಿನೀತಿಯೊಂದನ್ನು ರೂಪಿಸಿ ನಮಗೆ ಸಲ್ಲಿಸಿ ಎಂದು ಕನರ್ೂಲ್ ಜಿಲ್ಲಾಧಿಕಾರಿ ವೀರಪಾಂಡ್ಯನ್ ಮತ್ತು ಬಳ್ಳಾರಿ ಡಿಸಿ ನಕುಲ್ ಅವರು ಸೂಚಿಸಿದರು.
ವಿನೂತ ಕೃಷಿ ನೀತಿ ರೂಪಿಸಿ ಸಲ್ಲಿಸಿದ್ದಲ್ಲಿ ಅದನ್ನು ಜಂಟಿಯಾಗಿ ಪರಿಶೀಲಿಸಿ ಅನುಷ್ಠಾನಕ್ಕೆ ತರಲಾಗುವುದು ಎಂದರು.
ಕಾಲುವೆಗಳಿಗೆ ಅನಧಿಕೃತವಾಗಿ ಪೈಪ್ಲೈನ್ಗಳ ಸಂಪರ್ಕ ಮಾಡಿಕೊಂಡು ನೀರನ್ನು ಬೇಕಾಬಿಟ್ಟಿಯಾಗಿ ಕಳ್ಳತನ ಮಾಡುತ್ತಿರುವವರ ನಿಗ್ರಹ ಮಾಡುವ ನಿಟ್ಟಿನಲ್ಲಿ ತುಂಗಾಭದ್ರಾ ಬೋರ್ಡ ಈಗಾಗಲೇ ಕಾಯರ್ಾಚರಣೆ ಮಾಡುತ್ತಿದ್ದು,ಅದಕ್ಕೆ ಅಗತ್ಯ ಸಹಕಾರವನ್ನು ಎರಡು ಜಿಲ್ಲಾಡಳಿತಗಳು ನೀಡಲಿವೆ ಎಂದರು.
ಜಲಾಶಯದಿಂದ ನೀರು ಬಿಡುವ ಸಂದರ್ಭದಲ್ಲಿ ಎರಡು ಜಿಲ್ಲೆಗಳ ಕಾಲುವೆಯುದ್ದಕ್ಕೂ ಅಗತ್ಯ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗುವುದು ಮತ್ತು ಯಾವುದೇ ರೀತಿಯ ಅಹಿತಕರ ಘಟನೆಗಳಾಗದಂತೆ ನೋಡಿಕೊಳ್ಳಲಾಗುವುದು ಎಂದು ಬಳ್ಳಾರಿ ಎಸ್ಪಿ ಸಿ.ಕೆ.ಬಾಬಾ ಮತ್ತು ಕರ್ನೂಲ್ ಎಸ್ಪಿ ಫಕೀರಪ್ಪ ಅವರು ಸಭೆಗೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಪಂ ಸಿಇಒ ಕೆ.ನಿತೀಶ್, ಪ್ರೊಬೆಷನರಿ ಐಎಎಸ್ ಅಧಿಕಾರಿ ಈಶ್ವರ್, ಅಪರ ಜಿಲ್ಲಾಧಿಕಾರಿ ಸತೀಶಕುಮಾರ್, ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ ಸೇರಿದಂತೆ ಎರಡು ಜಿಲ್ಲೆಗಳ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.