ಬಳ್ಳಾರಿ: ದೇಶ ಭಕ್ತಿಯೊಂದಿಗೆ ದೇಶದ ಅಭಿವೃದ್ಧಿ ಸಾಧ್ಯ

ಲೋಕದರ್ಶನ ವರದಿ

ಬಳ್ಳಾರಿ 22: ದೇಶ ಭಕ್ತಿಯೊಂದಿಗೆ ದೇಶದ ಅಭಿವೃದ್ಧಿ ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಎಲ್ಲರೊಟ್ಟಿಗೆ ಆಗಬೇಕಾದ ಕಾರ್ಯವೆಂದು ಹೆಚ್ಸಿ.ರಾಘವೇಂದ್ರ, ಸದಸ್ಯರು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು ಇವರು ತಿಳಿಸಿದರು. 

ದಿ: 22 ರಂದು ಭಾರತ ಸರ್ಕಾರದ ನೆಹರು ಯುವ ಕೇಂದ್ರ, ಮತ್ತು ವಂದೇ ಮಾತರಂ ಯುವಕ ಸಂಘ, ಗುರು ತಿಪ್ಪೇರುದ್ರ ಮಹಾವಿದ್ಯಾಲಯ, ಸಂಯುಕ್ತಾಶ್ರಯದಲ್ಲಿ ದೇಶಾಭಿಮಾನ ಮತ್ತು ದೇಶದ ಅಭಿವೃದ್ಧಿ ಕುರಿತು ಕೇಂದ್ರ ಸಕರ್ಾರದ ಸಬ್ಕಾ ಸಾಥ್-ಸಬ್ಕಾ ವಿಕಾಸ್, ಸಬ್ಕಾ-ವಿಶ್ವಾಸ್ ಧ್ಯೇಯವಾಕ್ಯದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಇಂಗ್ಲೀಷ್, ಹಿಂದಿ ಭಾಷೆಯಲ್ಲಿ ಭಾಷಣಾ ಸ್ಪರ್ದಾ   ಕಾರ್ಯಕ್ರಮದ ಉದ್ಘಾಟನೆ ಮಾಡಿ ತಿಳಿಸಿದರು. 

ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಡಿವಿ ಸ್ವಾಮಿ, ಎಬಿವಿಪಿ ಹಾಗೂ ಎನ್ವೈಕೆ ಸದಸ್ಯರು, ಇವರು ನೆಹರು ಯುವಕೇಂದ್ರವು ಯುವಕರಿಗಾಗಿ ಕೇಂದ್ರ ಸಕರ್ಾರವು ಸಂಘ ಸಂಸ್ಥೆಗಳ ದ್ವಾರ ಅಭಿವೃದ್ಧಿಗಾಗಿ ಕಾರ್ಯಗತಗೊಳ್ಳುತ್ತಿದೆ ಅದರ ಉಪಯೋಗ ಪಡೆಯಬೇಕಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು. 

ಕಾರ್ಯಕ್ರಮದಲ್ಲಿ ಅರುಣ್ ಕುಮಾರ್, ಅಧ್ಯಕ್ಷರು, ವಂದೇ ಮಾತರಂ ಯುವಕ ಸಂಘ, ಎಸ್ಡಿಎನ್ ಹಯಾತ್ಅಲಿ, ಪ್ರಾಚಾರ್ಯರು, ಎಸ್ಜಿಟಿ ಕಾಲೇಜ್, ಬಳ್ಳಾರಿ ಇವರು ಭಾಗವಹಿಸಿದ್ದರು.

ಸ್ಪರ್ದೇಯಲ್ಲಿ ಅಂಜು ಕಾಟೇವಾಲಾ ಇವರು ಪ್ರಥಮ, ಭವ್ಯ ಇವರು ದ್ವಿತೀಯ ಮತ್ತು ಅಮೋಘವರ್ಷ, ಆರ್ವೈಎಂಇಸಿ ತೃತೀಯ, ದೀಪಕ್, ಕಾಳಿಂಗ ಸಮಾಧಾನಕರ ಸ್ಥಾನಗಳನ್ನು ಪಡೆದರು. ವಿಜೇತರಿಗೆ ಪಾರಿತೋಷಕಗಳನ್ನು ವಿತರಿಸಲಾಯಿತು. ಇವರುಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸ್ಪರ್ದೇಯಲ್ಲಿ ಭಾಗವಹಿಸುತ್ತಾರೆ.