ಲೋಕದರ್ಶನ ವರದಿ
ಬಳ್ಳಾರಿ 07: ಜಿಲ್ಲಾ ಕಬಡ್ಡಿ ಪ್ರಮೋಟರ್ಸ
ವತಿಯಿಂದ ಜಿಲ್ಲಾ ಮಟ್ಟದ ಪ್ರೋ ಕಬಡ್ಡಿ ಲೀಗ್ ಪಂದ್ಯಾವಳಿಯೂ ದಿನಾಂಕ 09 ರಿಂದ 12 ರವರೆಗೆ ನಗರದ ಗಾಂಧಿಭವನದಲ್ಲಿ ಆಯೋಜಿಸಿದ್ದು. ಈ ಪಂದ್ಯಾವಳಿಯಲ್ಲಿ 9 ತಂಡಗಳು ಭಾಗವಹಿಸಲಿವೆ ಎಂದು ಬಳ್ಳಾರಿ ಜಿಲ್ಲಾ ಕಬಡ್ಡಿ ಪ್ರಮೋಟಸರ್್ನ ಮುಖ್ಯಸ್ಥರಾದ ಪಂಪಾಪತಿ, ರಮೇಶ್ ಹಾಗೂ ಮುತ್ತೇಗೌಡ ಅವರು ಈ ಕುರಿತು ಪತ್ರಿಕಾಗೋಷ್ಟಿ ನಡೆಸಿ ಮಾತನಾಡುತ್ತಾ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಗೆ ಬಳ್ಳಾರಿ ಜಿಲ್ಲೆಯಿಂದ ಯಾವೊಂದು ತಂಡ ಇಲ್ಲಿಯವರೆಗೆ ಭಾಗವಹಿಸಿಲ್ಲ. ನಾವು ಎರಡು ವರ್ಷದಿಂದ ಸತತ ಪ್ರಯತ್ನ ಮಾಡಿದರೂ ಅದು ಇನ್ನು ಚಾಲನೆಗೆ ಸಿಗುತ್ತಿಲ್ಲ. ಅದಕ್ಕಾಗಿ ಈ ಬಾರಿ ನಾವು ಜಿಲ್ಲಾ ಮಟ್ಟದಲ್ಲಿ ಪ್ರತೀ ತಾಲೂಕಿನಲ್ಲಿ ಒಂದೊಂದು ತಂಡ ಆಯ್ಕೆ ಮಾಡಲು ಹಲವಾರು ದಿನಗಳಿಂದ ಕಾರ್ಯಕ್ರಮವನ್ನು ರೂಪಿಸಿದ್ದೇವು. ಒಟ್ಟಿಗೆ 9 ತಂಡವನ್ನು ಆಯ್ಕೆ ಮಾಡಿದ್ದು ಆ ಎಲ್ಲಾ ತಂಡಗಳು 9ನೇ ತಾರೀಖು ಉದ್ಗಾಟನಾ ಸಮಾರಂಭವಿದ್ದು. ಇದರ ಉದ್ಘಾಟವನ್ನು ಗ್ರಾಮೀಣ ಶಾಸಕ ನಾಗೇಂದ್ರ ಅವರು ಉದ್ಗಾಟಿಸಲಿದ್ದಾರೆ.
ಇದರ ಅಧ್ಯಕ್ಷತೆಯನ್ನು ಬಳ್ಳಾರಿ ಶಾಸಕರಾದ ಸೋಮಶೇಖರರೆಡ್ಡಿ, ಕ್ರೀಡಾ ದ್ವಜಾರೋಹಣವನ್ನು ಸಂಸದ ವೈ.ದೇವೇಂದ್ರಪ್ಪ ನಡೆಸಿಕೊಡಲಿದ್ದಾರೆ.
ಬಳ್ಳಾರಿ ಜಿಲ್ಲಾಧಿಕಾರಿಗಳಾದ ಎಸ್.ಎಸ್.ನಕುಲ್, ಪೋಲಿಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ಜಿ.ಪಂ.ಅಧಿಕಾರಿ ಕೆ.ನಿತೀಶ್, ಮಾಜಿ ಶಾಸಕರಾದ ನಾರಾ ಸೂರ್ಯನಾರಾಯಣರೆಡ್ಡಿ, ಜ್ಯೋತಿ ಬೆಳಗಿಸಲಿದ್ದಾರೆ ಎಂದರು. ವಿಶೇಷ ಅಹ್ವಾನಿತರಾಗಿ ಬಿ.ಶ್ರೀರಾಮುಲು, ಯಮಕನಮರಡಿ ಶಾಸಕರಾದ ಸತೀಶ್ ಜಾರಕಿಹೊಳೆ, ಜಿಂದಾಲ್ ಸಂಸ್ಥೆಯ ಮುಖ್ಯಸ್ಥರಾದ ವಿನೋದ್ ನಾವೆಲ್, ಪಿ.ರಾಜಶೇಖರ್, ಮಂಜುನಾಥ ಪ್ರಭು, ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು. ನಂತರ 10ನೇ ತಾರೀಖಿನಿಂದ ಪಂದ್ಯಾವಳಿಯೂ ಮದ್ಯಾಹ್ನ 2 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಡೆಯಲಿದೆ ಎಂದು ವಿವರಿಸಿದರು.
ಇದರಲ್ಲಿ ಈ ಪಂದ್ಯದಲ್ಲಿ ಜಯ ಗಳಿಸಿದವರಿಗೆ ಮೊದಲನೇ ಬಹುಮಾನ 70 ಸಾವಿರ, ಎರಡನೇ ಬಹುಮಾನ 50ಸಾವಿರ, ಮೂರನೇ ಬಹುಮಾನ 30 ಸಾವಿರ ಹಾಗೂ ನಾಲ್ಕನೇ ಬಹುಮಾನ 20 ಸಾವಿರ ಜೊತೆಗೆ ಉತ್ತಮ ದಾಳಿಗಾರರಿಗೆ 5 ಸಾವಿರ ರೂ ಮತ್ತು ಪ್ರಶಸ್ತಿಪತ್ರ, ಉತ್ತಮ ಹಿಡಿತದಾರರಿಗೆ 5 ಸಾವಿರ ರೂ ಮತ್ತು ಪ್ರಶಸ್ತಿಪತ್ರ, ವಿಶೇಷವಾಗಿ ನೀಡಲಾಗುತ್ತದೆ ಎಂದು ತಿಳಿಸಿದರು.