ಬಳ್ಳಾರಿ: ಉಚಿತ ದಂತಪಂಕ್ತಿ ಜೋಡಣಿ ಕಾರ್ಯಕ್ರಮ

ಬಳ್ಳಾರಿ 26: ಕನರ್ಾಟಕ ಸರ್ಕಾರದ ಎನ್.ಒ.ಹೆಚ್.ಪಿ ಅಡಿಯಲ್ಲಿ ಅಯೋಜಿಸಲಾದ "ದಂತಭಾಗ್ಯ ಯೋಜನೆ" ಅಭಿಯಾನದಲ್ಲಿ ಈ ದಿನ ಬಳ್ಳಾರಿ ಜಿಲ್ಲೆಯ 40ಜನ ಹಲ್ಲಿಲ್ಲದ ವಯೋವೃದ್ದರಿಗೆ ಉಚಿತ ದಂತಪಂಕ್ತಿಗಳನ್ನು ವಿತರಿಸಲಾಯಿತು.

ಅಭಿಯಾನವು ಕರ್ನಾಟಕ ರಾಜ್ಯದ ಅತ್ಯುತ್ತಮ ಕಾರ್ಯಕ್ರಮವಾಗಿದ್ದು. ಬಿಪಿಎಲ್ ಕಾರ್ಡ್  ಹೊಂದಿದ ಹಲ್ಲಿಲ್ಲದ ವೃದ್ದರಿಗೆ ಊಟಮಾಡಲು ಅನುಕೂಲವಾಗುವಂತೆ ಉಚಿತ ದಂತ ಪಂಕ್ತಿಗಳನ್ನು ಮಾಡಿಕೊಡಲಾಗುವುದು. ದಂತಪಂಕ್ತಿಗಳನ್ನು ಖಾಸಗಿ ಆಸ್ಪತ್ರೆಯಲ್ಲಿ ಮಾಡಿಸಿಕೊಂಡರೆ 5-6 ಸಲ ಓಡಾಡಬೇಕಾಗುತ್ತದೆ ಹಾಗೂ ಖರ್ಚು  ಸಹ 15-20 ಸಾವಿರದವರೆಗೆ ಆಗುತ್ತದೆ. 

ಕಾರ್ಯಕ್ರಮದಲ್ಲಿ ಬಳ್ಳಾರಿ ಸರ್ಕಾರಿ ದಂತ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಭಾರತಿ ಎಸ್.ಎಸ್, ಡಿಎಚ್ಒ ಡಾ. ಶಿವರಾಜ್ ಹೆಡೆ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್ ಬಸರೆಡ್ಡಿ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಅನಿಲ್.ಕುಮಾರ್, ಸಕರ್ಾರಿ ದಂತ ಮಹಾವಿದ್ಯಾಲಯದ ದಂತಪಂಕ್ತಿ ಜೋಡಣಾ ವಿಭಾಗದ ಮುಖ್ಯಸ್ಥ ಡಾ.ಆದರ್ಶ  ಇದ್ದರು.

  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ದಂತ ವೈದ್ಯಾಧಿಕಾರಿಗಳಾದ ಪ್ರಶಾಂತ್, ಆಶಾಕೋರಿ, ಅಫ್ರೋಜ್ ಭಾನು, ದೇವರಾಜ್, ಜಮೀರ್ ಅಹ್ಮದ್ ಅವರ ನೇತೃತ್ವದಲ್ಲಿ ಕಾರ್ಯಕ್ರಮವು ನೆರವೇರಿತು.