ಲೋಕದರ್ಶನ ವರದಿ
ಬಳ್ಳಾರಿ 23: ನಗರದ ಆದಿದೇವತೆ ಶ್ರೀಕನಕದುರ್ಗಮ್ಮ ದೇವಿ ಸಿಡಿಬಂಡಿ ಉತ್ಸವವು ಮಾರ್ಚ 03 ಮಂಗಳವಾರದಂದು ಸಂಜೆ 5:30ಕ್ಕೆ ನಡೆಯಲಿದೆ. ಈ ಕುರಿತು ದೇವಸ್ಥಾನದ ಆವರಣದಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತಾನಾಡಿದ ಗಾದೆಪ್ಪ ಮತ್ತು ಮಖ್ಯಕಾರ್ಯನಿರ್ವಹಕ ಅಧಿಕಾರಿ ಪ್ರಕಾಶ ಸುದ್ದಿಗೋಷ್ಟಿಯಲ್ಲಿ ವಿವರಿಸಿದರು. ಸಾವಿರಾರು ಜನ ವಿವಿದ ಹಳ್ಳಿಗಳಿಂದ ಉತ್ಸವಕ್ಕೆ ಆಗಮಿಸಿಲು ನಾಲ್ಕು ದಿಕ್ಕುಗಳಿಂದ 130 ಹಳ್ಳಿಗಳಿಗೆ ಬೆಳಗ್ಗೆ 09ರಿಂದ ರಾತ್ರಿ 12 ಗಂಟೆಯವರಗೆ ಉವಿತ ಬಸ್ ಸೇವೆಯನ್ನು ಒದಗಿಸುವುದಾಗಿ ದೇವಸ್ಥಾನದ ಮುಖ್ಯಸ್ಥ ಗಾದೆಪ್ಪ ಅವರು ತಿಳಿಸಿದರು.
ಪ್ರತಿ ವರ್ಷದಂತೆ ದೇವಿಗೆ ಬಂಗಾರದ ಆಭರಣದ ಅಲಂಕಾರ, ಬಗೆ ಬಗೆಯ ಹೂವುಗಳಿಂದ ಅಲಂಕಾರ, ಅಭಿಷೇಕ, ಮಹಾಮಂಗಳಾರತಿ, ನಡೆಯುತ್ತದೆ ಎಂದರು. ಕಾರ್ಯಕ್ರಮದ ಮುಂಚಿತವಾಗಿ ದೇವಸ್ಥಾನದ ಪೂಜಾರಗಳಿಂದ ಮಾರುಕಟ್ಟೆಯ ಬಳಿ ಇರುವ ಸಣ್ಣ ದುರ್ಗಮ್ಮ ದೇವಸ್ಥಾನದಿಂದ ಕುಂಭವನ್ನು ಹೊತ್ತು ತಂದು ಬೆಳಗಿನ ಜಾವ 2:30 ಕ್ಕೆ ಅಭಿಷೇಕವನ್ನು ಮಾಡಕಲಾಗುತ್ತದೆ ಎಂದರು, ಸಂಜೆ 5:30 ಕ್ಕೆ ಗಾಣಿಗ ಸಮುದಾಯದವರಿಂದ ಮೂರು ಜೋಡಿ ಎತ್ತುಗಳನ್ನು ಕರೆತಂದು ಮೂರು ಸುತ್ತು ಸಿಡಿಯನ್ನು ಎಳೆಯಲಾಗುತ್ತದೆ, ಇದರ ಜೊತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅವರಿಂದ ಮೊದಲ ಬಾರಿಗೆ ಜನಪದ ಕಲೆಗಳ ಮೆರವಣಿಗೆ ಇರುತ್ತದೆ.
ಅಂತೆಯೇ ರಾತ್ರಿ 9ಗಂಟೆಯಿಂದ ಬೆಳಗಿನ ಜಾವದವರಗೆ ನಾಟಕ ಪ್ರದರ್ಶನ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ, ಅಲ್ಲದೆ ಪ್ರತ್ಯೇಕ ವಿಶೇಷ ದರ್ಶನಕ್ಕೆ ಒಬ್ಬರಿಗೆ 25ರೂ. ನಿಗದಿಪಡಿಸಲಾಗಿದೆ ಎಂದು ವಿವರಿಸಿದರು. ಜೊತೆಗೆ ಮೇ,ಜೂನ್ ನಲ್ಲಿ ನಡೆಯುವ ಕಳಸಾರೋಹಣ ಕಾರ್ಯಕ್ರಮ ಅತೀ ವಿಜೃಂಭಣೆದಿಂದ ದೇವಸ್ಥಾನದ ಗೋಪುರಗಳಿಗೆ 21 ಕಳಸಾರೋಹಣ ಕಾರ್ಯಕ್ರಮ ನಡೆಯಲಿದ್ದು, ಈ ಕಳಸಗಳನ್ನು ಆರೋಗ್ಯ ಸಚಿವ ಬಿ.ಶ್ರೀ ರಾಮುಲು ಕಳಸದ ದಾನಿಗಳಾಗಿದ್ದಾರೆ ಎಂದು ಕಾರ್ಯನಿರ್ವಹಕಾ ಅಧಿಕಾರಿ ಪ್ರಕಾಶ ಅವರು ಪತ್ರಕರ್ತರು ಕೇಳಿದ ಪ್ರೆಶ್ನೆಗೆ ವಿವರಿಸಿದರು. ಈ ಎಲ್ಲಾ ಕಾರ್ಯಕ್ರಮಗಳನ್ನು ವಿಕ್ಷೀಸಲು ಎಲ್ಇಡಿ ಪರದೆಗಳನ್ನು ಆಳವಡಿಸಲಿದ್ದು ಭಕ್ತಾಧಿಗಳು ಅದರಲ್ಲೂ ಸಹ ವಿಕ್ಷೀಸಬಹುದು ಎಂದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆರ್ಚಕರ ಸಮೂದಾಯದ ಮುಖ್ಯಸ್ಥರು ಜೊತೆಗೆ ಕಾರ್ಯನಿರ್ವಹಕ ಅಧಿಕಾರಿ ಪ್ರಕಾಶ ಸುದ್ಧಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.