ಬಳ್ಳಾರಿ: ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ

ಲೋಕದರ್ಶನ ವರದಿ

ಬಳ್ಳಾರಿ 18: ತಾಲೂಕಿನ ಸಂಗನಕಲ್ಲು ಗುಡ್ಡದ ಆಂಜಿನೇಯಸ್ವಾಮಿ ದೇವಸ್ಥಾನದಲ್ಲಿ ಜಯ ಕನರ್ಾಟಕ ಸಂಘಟನೆ ಮತ್ತು ಗುಡ್ಡದ ಆಂಜಿನೇಯಸ್ವಾಮಿ ಸೇವಾ ಟ್ರಸ್ಟ್ನವತಿಯಿಂದ ಹಮ್ಮಿಕೊಡ್ಡಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಹನ್ನೊಂದು ಜೋಡಿ ಗಳು ನವ ದಾಂಪತ್ಯಕ್ಕೆ ಕಾಲಿಟ್ಟರು. 

ಸಾಮೂಹಿಕ ವಿವಾಹವನ್ನು ನಡೆಸಿಕೊಟ್ಟ ಜಯ ಕನರ್ಾಟಕದ ಜಿಲ್ಲಾ ಅಧ್ಯಕ್ಷರಾದ ಜಯರಾಮ್ ಚೌಧರಿ ಮತ್ತು ಗುಡ್ಡದ ಆಂಜೆನೇಯ ಸ್ವಾಮಿ ದೇವಸ್ಥಾನದ ನಿವರ್ಾಹಕರಾದ ಆಫ್ರಿದ್ರವರು ಮಾತನಾಡಿ ಮದುವೆ ಮುಂಜಿಗಳಿಗಾಗಿ ಸಾರ್ವಜನಕರು ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡು ಅದನ್ನು ತೀರಿಸಲು ಜೀವನಪೂತರ್ಿ ಹೆಣಗಾಡುತ್ತಾರೆ. 

ಈ ರೀತಿ ಸಾಲಗಾರರಾಗುವ ಬದಲು ಸಾಮೂಹಿಕ ವಿವಾಹಗಳಲ್ಲಿ ಮದುವೆಯನ್ನು ಮಾಡಿಕೊಳ್ಳವುದರಿಂದ ಅನಾವಶ್ಯಕ ಆಥರ್ಿಕ ಹೊರೆಯನ್ನು ತಗ್ಗಿಸಿಕೊಳ್ಳಬಹುದು ಎಂದರು. 

ಈ ಸಾಮೂಹಿಕ ವಿವಾಹಕ ಕಾರ್ಯಕ್ರಮವನ್ನು ರಘುಸ್ವಾಮಿ, ಕಲ್ಯಾಣಸ್ವಾಮಿ ಶಿಷ್ಯರು, ಮಾಜಿ ಸಂಸದರಾದ ಸಣ್ಣ ಪಕ್ಕೀರಪ್ಪ, ಜಯಕನರ್ಾಟಕ ಪದಾಧಿಕಾರಿಗಳಾದ ಮಲ್ಲಿಕಾಜರ್ುನಸ್ವಾಮಿ, ನಾಗರಾಜ್, ಸುದರ್ಶನ್, ಮಹಾದೇವ್ ಕುಮಾರ್, ರಂಗಸ್ವಾಮಿ, ಎರ್ರಿಸ್ವಾಮಿ, ರಾಧಕೃಷ್ಣ, ವರದರಾಜುಲು, ರಾಮಾಂಜಿನೇಯಲು ದೇವಸ್ಥಾನದ ಟ್ರಸ್ಟ್ನ ಪದಾಧಿಕಾರಿಗಳಾದ ತಿಮ್ಮನಗೌಡ, ಕೃಷ್ಣಪ್ಪ, ಸ್ವರೂಪ್, ಪ್ರಕೃತಿ ಪವನ್, ಸೋನಿ ಹೀರಾಲಾಲ್ ಮತ್ತು ಸಂಗನಕಲ್ಲು ಗ್ರಾಮದ ಮುಖಂಡರು ಹಾಗೂ ಇನ್ನೂ ಮುಂತಾದವರು ನಡೆಸಿಕೊಟ್ಟರು.