ಬಳ್ಳಾರಿ: ಆಟೋಗಳಿಗೆ ಕನ್ನಡ ಧ್ವಜ ಕಟ್ಟುವ ಕಾರ್ಯಕ್ರಮ

ಲೋಕದರ್ಶನ ವರದಿ

ಬಳ್ಳಾರಿ 31: ನಗರದ ಐತಿಹಾಸಿಕ ರೈಲ್ವೆ ನಿಲ್ದಾಣವೂ ಸೇರಿದಂತೆ ನಗರದ ವಿವಿಧೆಡೆ ಆಟೋ ನಿಲ್ದಾಣಗಳಲ್ಲಿ ನವಕರ್ನಾಟಕ ಯುವಶಕ್ತಿ ಸಂಘಟನೆಯವತಿಯಿಂದ ಆಟೋಗಳಿಗೆ ಸಾವಿರಾರು ಕನ್ನಡ ಧ್ವಜ ಕಟ್ಟುವ ಕಾರ್ಯಕ್ರಮವನ್ನು ಗುರುವಾರದಂದು ಬೆಳಗಿನ ಜಾವ 5.30 ಗಂಟೆಗೆ ಹಮ್ಮಿಕೊಳ್ಳಲಾಗಿತ್ತು. 

ಈ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಆಹಾರ ನಿರೀಕ್ಷಕರಾದ ಹನುಮಂತಪ್ಪ ಅವರು ಆಟೋಗಳಿಗೆ ಕನ್ನಡ ಧ್ವಜಗಳನ್ನು ಕಟ್ಟುವ ಮೂಲಕ ಚಾಲನೆ ನೀಡಿದರು. ಇದೇ ವೇಳೆ ಕನ್ನಡ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಕನ್ನಡ ಪರ ಸಂಘಟನೆಗಳು ಹೋರಾಟಗಳಿಗೆ ಮಾತ್ರ ಸೀಮಿತವಾಗದೆ, ಜನರಲ್ಲಿ ಕನ್ನಡದ ಬಗ್ಗೆ ಜಾಗೃತಿಯನ್ನುಂಟು ಮಾಡುವ ಇಂತಹ ಧ್ವಜ ಕಟ್ಟುವ ಕಾರ್ಯಕ್ರಮವನ್ನು ಮಾಡುತ್ತಿರುವುದು ಸಂತಸದ ಸಂಗತಿ. ಇದೇ ರೀತಿಯಲ್ಲಿ ಇತರೆ ಸಂಘಟನೆಗಳು ಸಹ ಕನ್ನಡ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಬೇಕೆಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ನವಕರ್ನಾಟಕ ಶಕ್ತಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಸಿದ್ಮಲ್ ಮಂಜುನಾಥ, ಜಿಲ್ಲಾಧ್ಯಕ್ಷ ರಮೇಶ್, ಕೇಣಿಬಸವರಾಜ, ಹಲಕುಂದಿ ರವಿಕುಮಾರ್, ರಾಮಚಂದ್ರ,  ಬಿ.ಚಂದ್ರಶೇಖರ ಆಚಾರಿ, ಕೇದಾರನಾಥ, ಪಂಪಾಪತಿ, ಸೂರಜ್, ಮಾದೆಗೊಂಡ ಮಂಜುನಾಥ, ಹನುಮಂತ, ಯಮುನಪ್ಪ, ಟಿ.ಮಹೇಶ್ಕುಮಾರ್, ಗಿರಿಬಾಬು, ದೇವೇಶ್, ವಾಮದೇವಸ್ವಾಮಿ ಮದನ್, ಕೃಶಾದ್, ಶ್ರೇಯಸ್, ನೀಲಕಂಠ(ಕಂಠಿ) ಮುಂತಾದವರು ಹಾಜರಿದ್ದರು. 

ನವಂಬರ್ 1ರಂದು ಬೃಹತ್ ಕನ್ನಡ ಧ್ವಜಾರೋಹಣ ಬಳ್ಳಾರಿ ನಗರದ ಹಂಡೆ ಪಾಳೆಯಗಾರರು ನಿಮರ್ಿಸಿದ ಐತಿಹಾಸಿಕ ಮೂರು ಸುತ್ತಿನ ಕೋಟೆಯ ಬುರುಜಿನ ಮೇಲೆ 64 ಅಡಿ ಎತ್ತರದ ಬೃಹತ್ ಕನ್ನಡ ಧ್ವಜವನ್ನು ಆರೋಹಣವನ್ನು ನವಂಬರ್ 1ರಂದು ಬೆಳಗಿನ ಜಾವ 5.30ಕ್ಕೆ  ಮಾಡಲಾಗುತ್ತದೆ. ಎಲ್ಲಾ ಕನ್ನಡ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು  ನವಕನರ್ಾಟಕ ಯುವಶಕ್ತಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಸಿದ್ಮಲ್ ಮಂಜುನಾಥ ತಿಳಿಸಿದ್ದಾರೆ.