ಲೋಕದರ್ಶನ ವರದಿ
ಬಳ್ಳಾರಿ 29: ಉತ್ತರ ಕರ್ನಾಟಕದಾದ್ಯಂತ ಅದರಲ್ಲೂ ಬಳ್ಳಾರಿಯ ಪ್ರಾಂತ್ಯದಲ್ಲಿ ಸದಾ ಅಚ್ಚರಿಹಸಿರಾಗಿ ಉಳಿದಿರುವ ನಾಟಕಗಳೆಂದರೆ ದಿ.ಕಂದಗಲ್ ಹನುಮಂತರಾಯರ ಕುರುಕ್ಷೇತ್ರ ಮತ್ತು ರಕ್ತರಾತ್ರಿ. ಈ ಎರಡು ನಾಟಕಗಳನ್ನು ಪ್ರತಿ ದಿನ ಆಡಿದರೂ ನೋಡುವ ಪ್ರೇಕ್ಷಕರ ಕೊರತೆಯಾಗುವುದಿಲ್ಲ ಎಂದು ರಾಘವ ಕಲಾಮಂದಿರದಲ್ಲಿ ಮಾತೃ ಸೇವಾ ಟ್ರಸ್ಟ್ (ರಿ.,) ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಳ್ಳಾರಿ ಪ್ರಾಯೋಗತ್ವದಲ್ಲಿ ಟಿ.ಮಹಂತೇಶ್ ಮತ್ತು ಕಲಾ ತಂಡದಿಂದ ಆಯೋಜಿಸಿದ್ದ 'ರಕ್ತರಾತ್ರಿ ಪೌರಾಣಿಕ ನಾಟಕ ಉದ್ಘಾಟನೆ ಮಾಡಿ ಮಾತನಾಡುತ್ತಾ, ದಿ.ಕಂದಗಲ್ ಹನುಮಂತರಾಯರು ಋಷಿವಾಕ್ಯದಂತೆ ಭಾರತದ ಇಂದಿನ ಪರಿಸ್ಥಿತಿಗೆ ಕಾರಣಗಳನ್ನು ತಮ್ಮ ನಾಟಕದಲ್ಲಿ ಪಾತ್ರಗಳ ಮೂಲಕ ಆಡಿಸಿದ್ದಾರೆಂದು ವೀರಶೈವ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದಶರ್ಿಗಳಾದ ಚೋರನೂರು ಕೊಟ್ರಪ್ಪ ನುಡಿದರು.
ಕನರ್ಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಎಂ.ಶಿವಾಜಿರಾವ್, ಸಾಹಿತಿ ನಿಷ್ಠಿ ರುದ್ರಪ್ಪ ಮಾತನಾಡುತ್ತ ನಲವತ್ತೈದು ವರ್ಷಗಳ ಕಾಲ ರಂಗಭೂಮಿಯನ್ನೇ ತಮ್ಮ ಉಸಿರನ್ನಾಗಿಸಿಕೊಂಡು, ಹಲವಾರು ನಾಟಕಗಳ ಎಲ್ಲಾ ಪಾತ್ರಗಳ ಮಾತುಗಳನ್ನು ತಮ್ಮ ತುದಿ ನಾಲಿಗೆಯಲ್ಲೇ ಹಿಡಿದಿಟ್ಟುಕೊಂಡಿರುವ ನಾಡಂಗ ಎಚ್.ಬಸವರಾಜಗೌಡರ ಸೇವೆಯನ್ನು ಕೊಂಡಾಡಿದರು.
ದಿ.ಕಂದಗಲ್ಲು ಹನುಮಂತರಾಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಜ್ಯೋತಿ ಬೆಳಗಿ ಕಾರ್ಯಕ್ರಮವನ್ನು ವೇದಿಕೆಯ ಗಣ್ಯರು ಉದ್ಘಾಟನೆ ಮಾಡಿದರು. ನಿವೃತ್ತ ಅಭಿಯಂತರರು ಕೆ.ಜಂಬುನಾಥ, ಟಿ.ಮಲ್ಲೇಶ್, ಮೋಹನರೆಡ್ಡಿ, ರಮೇಶಗೌಡ ಪಾಟೀಲ, ಜಿ.ತಿಪ್ಪೇರುದ್ರಪ್ಪ, ಬಸವರಾಜ, ಚಂದ್ರಶೇಖರಯ್ಯ, ಪಿ.ತಿಮ್ಮಾರೆಡ್ಡಿ ಮುಂತಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗಣ್ಯರನ್ನು ಸನ್ಮಾನಿಸಿ, ಕಲಾವಿದರಿಗೆ ಪ್ರಶಸ್ತಿ ಪತ್ರ ನೀಡಲಾಯಿತು. ಜಿಲ್ಲೆಯ ವಿವಿಧ ತಾಲೂಕಿನ ಹವ್ಯಾಸಿ ಕಲಾವಿದರ ರಕ್ತರಾತ್ರಿ ನಾಟಕ ಅನುಭವಿ ಕಲಾವಿದ ಪ್ರೇಕ್ಷಕರಿಂದ ಮೆಚ್ಚುಗೆಯನ್ನು ಪಡೆಯಿತು.