ಬಳ್ಳಾರಿ: ಬಿಹಾರದಲ್ಲಿ ಮಿದುಳಿನ ಕಾಯಿಲೆಯಿಂದ 150ಕ್ಕೂ ಹೆಚ್ಚು ಮಕ್ಕಳ ಸಾವು ಆರೋಗ್ಯ ವ್ಯವಸ್ಥೆ ಖಂಡಿಸಿ ಎಸ್ಯುಸಿಐ ಪ್ರತಿಭಟನೆ

ಲೋಕದರ್ಶನ ವರದಿ

ಬಳ್ಳಾರಿ 25: ಬಿಹಾರದ ಮುಜಾಫರ್ ಪುರ ಜಿಲ್ಲೆಯೊಂದರಲ್ಲೇ 150 ಕ್ಕೂ ಹೆಚ್ಚು ಮಕ್ಕಳು ತೀವ್ರವಾದ ಮೆದುಳಿನ ಉರಿಯೂತ ಕಾಯಿಲೆಯಿಂದ ಸಾವನ್ನಪ್ಪಿರುವುದು ಅತ್ಯಂತ ವಿಷಾದದ ಸಂಗತಿ. ಬಿಹಾರ ರಾಜ್ಯದಲ್ಲಿ ಇದುವರೆಗೆ ಇಂತಹ 600 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂಬುದು ಗಾಬರಿ ಹುಟ್ಟಿಸುವಂತಹ ವಿಷಯ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಇಂತಹ ಸಂಪೂರ್ಣ ವೈಫಲ್ಯವನ್ನು ಖಂಡಿಸಿ ಎಸ್ಯುಸಿಐ ಕಮ್ಯುನಿಸ್ಟ್ ಪಕ್ಷದ ಕೇಂದ್ರ ಸಮಿತಿಯು ಕರೆ ನೀಡಿರುವ ಅಖಿಲ ಭಾರತ ಪ್ರತಿಭಟನಾ ದಿನದ ಅಂಗವಾಗಿ ಇಂದು ಬಳ್ಳಾರಿಯ ರಾಯಲ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತಢದಿ. 

        ನೂರಾರು ಮಕ್ಕಳ ಸಾವಿನಂತಹ ಹೃದಯ ವಿದ್ರಾವಕ ದುರಂತದ ಪರಿಶೀಲನಾ ಸಭೆಯಲ್ಲೂ ಕೂಡ ಬಿಹಾರದ ಬಿಜೆಪಿ ಪಕ್ಷದ ಆರೋಗ್ಯ ಸಚಿವರಾದ ಶ್ರೀಯುತ ಮಂಗಲ್ ಪಾಂಡೆಯವರು "ವಿಕೆಟ್ ಎಷ್ಟು ಬಿತ್ತು" ಎಂದು ಭಾರತ ಪಾಕಿಸ್ತಾನ ಕ್ರಿಕೆಟ್ ಪಂದ್ಯದ ಬಗ್ಗೆ ವಿಚಾರಿಸಿಕೊಂಡಿದ್ದು ಸರ್ಕಾರದ ಅಸೂಕ್ಷ್ಮತೆ ಮತ್ತು ಆದ್ಯತೆಗಳನ್ನು ತೋರಿಸುತ್ತದೆ. ಅವಶ್ಯಕವಿರುವಷ್ಟು  ವೈದ್ಯರು, ಔಷಧಿಗಳು, ದಾದಿಯರು ಮೊದಲಾದ ಕೊರತೆಗಳನ್ನು ಆಸ್ಪತ್ರೆಗಳಲ್ಲಿ ಸರಿಪಡಿಸದೆ ಇರುವುದೇ ಇಂತಹ ವಿಪತ್ತಿಗೆ ಕಾರಣವಾಗಿದೆ. ಜೊತೆಗೆ ಗ್ರಾಮೀಣ ಭಾಗಗಳಲ್ಲಿ ಮಿದುಳಿನ ಉರಿಯೂತದ ಸಮಸ್ಯೆಗೆ ಸೂಕ್ತ ಪ್ರಾಥಮಿಕ ಚಿಕಿತ್ಸೆಯನ್ನು ಕೊಟ್ಟು ಜೀವ ಉಳಿಸುವುದು ಸಾಧ್ಯವಿದೆಯಾದರೂ ಅಂತಹ ಸೌಲಭ್ಯಗಳು ಲಭ್ಯವಿಲ್ಲ. ಆರೋಗ್ಯ ವ್ಯವಸ್ಥೆ ಹದಗೆಡಲು ಕಾರಣವಾದ ಕೇಂದ್ರ ಮತ್ತು ಬಿಹಾರ ರಾಜ್ಯ ಸರ್ಕಾರಗಳ ಇಂತಹ ದಿವ್ಯ ನಿರ್ಲಕ್ಷ್ಯವನ್ನು ಎಸ್ ಯು ಸಿಐ ಕಮ್ಯುನಿಸ್ಟ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ. 

ಮಕ್ಕಳ ಸಾವು ಎಂಬುದು ಅತ್ಯಂತ ಹೃದಯ ವಿದ್ರಾವಕ ಸಂಗತಿಯಾಗಿದ್ದು ಯಾವ ಪರಿಹಾರವೂ ಕೂಡ ಪೋಷಕರ ದುಃಖವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಹಾಗಿದ್ದರೂ ತಮ್ಮ ಮುಂದಿನ ಬದುಕನ್ನು ಕಟ್ಟಿಕೊಳ್ಳುವುದಕ್ಕಾಗಿ ಮಕ್ಕಳನ್ನು ಕಳೆದುಕೊಂಡ ಪೋಷಕರಿಗೆ ಕನಿಷ್ಠ 10 ಲಕ್ಷ ರೂಪಾಯಿಗಳನ್ನು ಪರಿಹಾರ ನೀಡಬೇಕೆಂದು ನಾವು ಆಗ್ರಹಿಸುತ್ತೇವೆ.

    ಈ ಪ್ರತಿಭಟನೆಯಲ್ಲಿ ಎಸ್.ಯು.ಸಿ.ಐ (ಸಿ) ಜಿಲ್ಲಾ ಕಾರ್ಯದಶರ್ಿಗಳಾದ ರಾಧಾಕೃಷ್ಣ ಉಪಾಧ್ಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ನಾಯಕರುಗಳಾದ ಮಂಜುಳಾ.ಎಂ.ಎನ್, ಎ.ದೇವದಾಸ್, ಡಾ.ಪ್ರಮೋದ್, ಸೋಮಶೇಖರ ಗೌಡ, ಹನುಮಪ್ಪ, ಗೋವಿಂದ್, ಶಾಂತಾ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.