ಬಳ್ಳಾರಿ: ಬಸ್ ಪಾಸ್ ದರ ಏರಿಕೆಯನ್ನು ಕೈಬಿಡಲು ಆಗ್ರಹಿಸಿ ಪ್ರತಿಭಟನೆ

ಲೋಕದರ್ಶನ ವರದಿ

ಬಳ್ಳಾರಿ 06: ಬಸ್ ಪಾಸ್ ವಿತರಣೆ ವಿಳಂಬ ಮಾಡುತ್ತಿರುವ ಸಕರ್ಾರಕ್ಕೆ ಧಿಕ್ಕಾರ, ಬಸ್ ಪಾಸ್ ಶುಲ್ಕ ಏರಿಕೆ ಕೈಬಿಡಿ, ಈ ಕೂಡಲೇಎಲ್ಲಾವಿದ್ಯಾರ್ಥಿಗಳಿಗೆ ಬಸ್ ಪಾಸ್ ಒದಗಿಸಿ ಎಂದು ಘೋಷಣೆಗಳನ್ನು ಕೂಗುತ್ತಾ ವಿವಿದಕಾಲೇಜಿನಿಂದ ಆಗಮಿಸಿದ ವಿದ್ಯಾಥರ್ಿಗಳು ಎಐಡಿಎಸ್ಒ ನೇತೃತ್ವದಲ್ಲಿ ಕೆ.ಎಸ್.ಆರ್.ಟಿ.ಸಿ ಡಿಪೋ ಆವರಣದಲ್ಲಿ ಪ್ರತಿಭಟನೆ ನಡೆಸಿ ಕೆ.ಎಸ್.ಆರ್.ಟಿ.ಸಿ ಜಿಲ್ಲಾ ನಿಯಂತ್ರಣಾಧಿಕಾರಿಗಳಾದ ಚಂದ್ರಶೇಖರ್ರವರಿಗೆ ಮನವಿ ಪತ್ರ ನೀಡಲಾಯಿತು. 

   `ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್ಒ ಜಿಲ್ಲಾಧ್ಯಕ್ಷರಾದ ಗೋವಿದ್ರವರು ಮಾತನಾಡುತ್ತಾ "ಶಾಲಾ  ಕಾಲೇಜು ರಾಜ್ಯವ್ಯಾಪಿ ಮೇ ತಿಂಗಳಿನಲ್ಲೇ ಪ್ರಾರಂಭವಾಗಿವೆ. ಸುಗಮವಾಗಿ ತರಗತಿಗಳಿಗೆ ಹಾಜರಾಗಲು ಬಸ್ಪಾಸ್ ಅತ್ಯಗತ್ಯವಾಗಿದೆ.ಇನ್ನೂ ಬಸ್ಪಾಸ್ದೊರಕದೆ ಪ್ರತಿದಿನ ವಿದ್ಯಾರ್ಥಿಗಳು  ಬಸ್ ಟಿಕೇಟ್ಗೆ ಅಧಿಕ ಹಣ ವ್ಯಯಿಸಿ ಪ್ರಯಾಣಿಸುವಂತಾಗಿದೆ. ಬಡ ವಿದ್ಯಾಥರ್ಿಗಳು ಇನ್ನು ತರಗತಿಗಳಿಗೆ ಬರುತ್ತಿಲ್ಲ. ಇವರ ಪಾಲಕರಿಗೆ ಶಾಲಾ-ಕಾಲೇಜು ಶುಲ್ಕ ಕಟ್ಟಿ ಬಸ್ಪಾಸ್ಗೆ ಸಾವಿರರೂಪಾಯಿ ಪಾವತಿಸುವುದೇ ಹೊರೆಯಾಗಿದೆ ಇಂತಹ ಸಂದರ್ಭದಲ್ಲಿ ಸಾರಿಗೆ ಇಲಾಖೆ ಪಾಸ್ನ್ನು ತಿಂಗಳುಗಟ್ಟಲೇ ತಡಮಾಡಿಕೊಟ್ಟೆರೆ ಪಾಸ್ಧರದ ಎರಡರಷ್ಟು ಹಣ ಈ ಒಂದು ತಿಂಗಳಲ್ಲೇ ಟಿಕೇಟ್ಗೆ ವ್ಯಯಿಸುವಂತಾಗಿದೆ. ಬಸ್ಪಾಸ್ ಇನ್ನೂ ಮುದ್ರಣವಾಗದಿರುವುದು ಸಕರ್ಾರದ ಬೇಜವಾಬ್ದಾರಿಯನ್ನು ಎತ್ತಿತೋರಿಸುತ್ತದೆ. 

ಈ ಕೂಡಲೇ ವಿದ್ಯಾಥರ್ಿಗಳಿಗೆ ಬಸ್ ಪಾಸ್ ವಿತರಿಸಿ, ಅಲ್ಲಿಯವರೆಗೆಎಲ್ಲಾ ವಿದ್ಯಾಥರ್ಿಗಳಿಗೆಕಾಲೇಜಿನ ಶುಲ್ಕ ಕಟ್ಟಿದ ರಶೀದಿ/ಗುರುತಿನಚೀಟಿಯೊಂದಿಗೆ ಓಡಾಡಲು ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದರು. ಎಐಡಿಎಸ್ಒ ಜಿಲ್ಲಾ ಕಾರ್ಯದಶರ್ಿ ಸುರೇಶ್ ಮಾತನಾಡುತ್ತಾ "ಸರ್ಕಾರವು ಈ ವರ್ಷ ಬಸ್ಪಾಸ್ ಶುಲ್ಕವನ್ನು ಏರಿಕೆ ಮಾಡಬೇಕೆಂಬ ಮಾತು ಕೇಳಿಬರುತ್ತಿದೆ.ಇಂದುರಾಜ್ಯದಲ್ಲಿ ಬರಗಾಲವಿದ್ದು ಜನರಜೀವನ ಸಂಕಷ್ಟದಲ್ಲಿರುವಾಗ ಸರ್ಕಾರ  ಈ ನಿರ್ಧಾರವನ್ನು ಕೈಬಿಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯ ವ್ಯಾಪಿ ವಿದ್ಯಾರ್ಥಿಗಳ  ದೊಡ್ಡಮಟ್ಟದ ಹೋರಾಟ ನಡೆಸಬೇಕಾಗುತ್ತದೆಂದು ಎಚ್ಚರಿಕೆ ನೀಡಿದರು. ಹಾಗೂ ಸೆಮಿಸ್ಟ ರ್ವಿದ್ಯಾರ್ಥಿಗಳಿಗೆ  ವರ್ಷಪೂತರ್ಿತರಗತಿ ಪರೀಕ್ಷೆಗಳು ನಡೆಯಲಿದ್ದು ಬೆಂಗಳೂರಿನ ಬೆಂ.ಮ.ಸಾ.ಸಂ.ನಲ್ಲಿ ವರ್ಷ ಪೂತರ್ಿ ಬಸ್ಪಾಸ್ ನೀಡುತ್ತಿರುವಂತೆಇಲ್ಲಿನ ವಿದ್ಯಾಥರ್ಿಗಳಿಗೂ ನೀಡಬೇಕೆಂದರು.

ಈ ಪ್ರತಿಭಟನೆಯಲ್ಲಿ ಎ.ಐಡಿ.ಎಸ್.ಒ ಜಿಲ್ಲಾಧ್ಯಕ್ಷರಾದ  ಗೋವಿದ್,  ಉಪಾಧ್ಯಕ್ಷ ಜಗಧೀಶ್ ನೇಮಕಲ್, ಕಾರ್ಯದರ್ಶಿ  ಜಿ.ಸುರೇಶ್, ಜಂಟಿ ಕಾರ್ಯದರ್ಶಿ  ರವಿಕಿರಣ, ಸದಸ್ಯರಾದರಂಗಸ್ವಾಮಿ, ಕಂಬ್ಳಿ ಮಂಜುನಾಥ, ನಿಂಗರಾಜ, ರವಿಕುಮಾರ ಹಾಗೂ ವಿವಿಧಕಾಲೇಜಿನ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.