ಲೋಕದರ್ಶನ ವರದಿ
ಬಳ್ಳಾರಿ 25: ರೈಲ್ವೇಅಭಿವೃದ್ದಿ ಕ್ರಿಯಾ ಸಮಿತಿ ಹಾಗೂ ರೈಲ್ವೇ ಸಲಹಾ ಸಮಿತಿ ನೇತೃತ್ವದಲ್ಲಿ ಈ ಭಾಗದ ರೈಲ್ವೇ ಬೇಡಿಕೆಗಳ ಬಗ್ಗೆ ನೈರುತ್ಯ ರೈಲ್ವೇ ವಲಯದ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಅಜಯ್ ಕುಮಾರ್ ಸಿಂಗ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕ್ರಿಯಾ ಸಮಿತಿ ಅಧ್ಯಕ್ಷರಾದ ವೈ.ಯಮುನೇಶ್ ಅವರು ಈಗಾಗಲೆ ಪ್ರಕಟಿಸಿರುವಂತೆ ಆಗಸ್ಟ್ 31ರ ಒಳಗಾಗಿ ಹೊಸಪೇಟೆ -ಕೊಟ್ಟೂರು ಮಧ್ಯೆ ಪ್ಯಾಸಿಂಜರ್ ರೈಲು ಆರಂಭಕ್ಕೆ ಚಾಲನೆ ನೀಡಬೇಕೆಂದು ಆಗ್ರಹಿಸಿದರು.
ಮನವಿಗೆ ಪ್ರತಿಕ್ರಿಯಿಸಿದ ಪ್ರಧಾನ ವ್ಯವಸ್ಥಾಪಕರು ಕೆಲವು ಸಣ್ಣಪುಟ್ಟ ಕಾಮಗಾರಿಗಳು ತ್ವರಿತವಾಗಿ ನಡೆಯುತ್ತಿದ್ದು, 3 ರೈಲ್ವೇ ಗೇಟುಗಳನ್ನು ಮುಚ್ಚಲು ಕ್ರಮ ಕ್ರಮ ಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಈ ಎಲ್ಲಾ ಕಾಮಗಾರಿಗಳನ್ನು ಆಗಸ್ಟ್ 15ರ ಗಡುವಿನೊಳಗಾಗಿ ಮುಗಿಸುವಂತೆ ಆದೇಶ ನೀಡಲಾಗಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ರೈಲು ಆರಂಭಿಸುವ ಭರವಸೆ ನೀಡಿದರು.
ಈ ಭಾಗದ ಮತ್ತೊಂದು ಬೇಡಿಕೆ ವಿಶ್ವ ಪ್ರಸಿದ್ದ ಹಂಪಿ, ಮಂತ್ರಾಲಯ, ಮುಂತಾದ ಪ್ರವಾಸಿ ಹಾಗೂ ಯಾತ್ರಾ ಸ್ಥಳಗಳಿಗೆ ಬಸ್ಸ್ನಲ್ಲಿ ಈ ಮಾರ್ಗದ ಮೂಲಕವೇ ಸಂಚಾರದ ವ್ಯವಸ್ಥೆ ಇದೆ ಆದರೆ ಪ್ರತಿನಿತ್ಯ ಅಸಂಖ್ಯಾತ ಪ್ಯಾಸೆಂಜರ್ ಹಾಗೂ ಗೂಡ್ಸ್ಗಾಡಿಗಳ ಸಂಚಾರ ದಟ್ಟಣೆ ಇರುವುದರಿಂದ ರೈಲ್ವೆಗೇಟ್ನ ಎರಡು ಬದಿಗಳಲ್ಲಿ ವಾಹನಗಳು ಮತ್ತು ಸಾರ್ವಜನಿಕರು, ವಿದ್ಯಾಥರ್ಿಗಳು ಬಹಳಷ್ಟು ಹೊತ್ತು ಕಾಯುವ ಪರಿಸ್ಥಿತಿ ಇದೆ.
ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳಾದ ಎಂ.ಶ್ಯಾಮಪ್ಪ ಅಗೋಲಿ, ಟಿ.ತಿಪ್ಪೇಸ್ವಾಮಿ, ಡಾ.ಜೋಗಳೇಕರ್, ವಿಶ್ವನಾಥ ಕೌತಾಳ್, ದೀಪಕ್ ಉಳ್ಳಿ, ಕಾಶಿನಾಥ ಕುಲಕಣರ್ಿ, ಹೆಚ್.ಪೀರಾನ್ಸಾಬ್, ಶ್ರೀನಿವಾಸ್, ಪಿ.ಪ್ರಭಾಕರ್, ದೇವರೆಡ್ಡಿ, ಮುಂತಾದವರು ಉಪಸ್ಥಿತರಿದ್ದರು.