ಲೋಕದರ್ಶನ ವರದಿ
ಬಳ್ಳಾರಿ 06: ನಗರದ ಬಿಡಿಎಎ ಕ್ರೀಡಾಂಗಣದಲ್ಲಿ ಈಚೆಗೆ ನಡೆದ ರಾಜ್ಯಮಟ್ಟದ ಫುಟ್ಬಾಲ್ ಪಂದ್ಯಾವಳಿ(ಬಾಲಕರ ವಿಭಾಗ)ಯಲ್ಲಿ ಕೋಟೆ ಪ್ರದೇಶದ ಸೇಂಟ್ ಜಾನ್ಸ್ ಪಪೂ ಕಾಲೇಜಿನ ವಿದ್ಯಾಥರ್ಿಗಳು ವಿಜೇತರಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 31 ಬಾಲಕರ ತಂಡಗಳು ಮತ್ತು 26 ಬಾಲಕಿಯರ ತಂಡಗಳು ಭಾಗವಹಿಸಿದ್ದವು. ಫೈನಲ್ನಲ್ಲಿ ಬಾಲಕರ ವಿಭಾಗ ಫುಟ್ಬಾಲ್ ಪಂದ್ಯದಲ್ಲಿ ಸೇಂಟ್ ಜಾನ್ಸ್ ಪಪೂ ಕಾಲೇಜಿನ ತಂಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಂಡದೊಂದಿಗೆ ಹಣಾಹಣಿ ಏರ್ಪಟ್ಟಿತ್ತು. ಸೇಂಟ್ ಜಾನ್ಸ್ ಕಾಲೇಜಿನ ಪ್ರೀತಂ, ಅವಿನಾಶ್, ಚಂದನ್, ಪ್ರೀತಂ ಎಂ.ಗೌಡ, ದರ್ಶನ್, ಶರಣಪ್ಪ, ತೇಜಸ್, ಸುತಾರ್, ತರುಣ್, ತೇಜಸ್ ಕೋತ್ ಉತ್ತಮ ಆಟದಿಂದ ದಕ್ಷಿಣ ಕನ್ನಡ ಜಿಲ್ಲೆ ತಂಡವನ್ನು 5-0 ಗೋಲುಗಳ ಅಂತರದಲ್ಲಿ ಸೋಲಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ನ.21, 22ರಂದು ಅಂಡಮಾನ್ನಲ್ಲಿ ಆಯೋಜಿಸಿರುವ ರಾಷ್ಟ್ರಮಟ್ಟದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ.ಹೆನ್ರಿ ಡಿಸೋಜಾ, ಉಪನಿದರ್ೆಶಕ ಬಿ.ನಾಗರಾಜಪ್ಪ, ಸಂಸ್ಥೆಯ ವ್ಯವಸ್ಥಾಪಕ ಫಾ.ವಾಲ್ಟರ್ ಮೆನೆಜಸ್, ಪ್ರಾಚಾರ್ಯ ಎಚ್.ಎಸ್.ಶಿವರಾಮ್, ಮುಖ್ಯಶಿಕ್ಷಕ ಶಾಂತುಶೀಲನ್ ಸಂತಸ ವ್ಯಕ್ತಪಡಿಸಿದ್ದಾರೆ.