ಲೋಕದರ್ಶನ ವರದಿ
ಬಳ್ಳಾರಿ 04: ಸಾರ್ವಜನಿಕರು ಮಳೆಗಾಲದಲ್ಲಿ ವಿದ್ಯುತ್ ಕಂಬ ಅಥವಾ ಪರಿವರ್ತಕದ ಹತ್ತಿರ ಹೋಗುವುದಾಗಲೀ ಹಾಗೂ ಮುಟ್ಟುವುದಾಗಲೀ, ವಿದ್ಯುತ್ ತಂತಿ ತುಂಡಾದ ಪ್ರದೇಶವನ್ನು ಗಮನಿಸಿ ತಕ್ಷಣ ವಿದ್ಯುತ್ ಕಚೇರಿಗೆ ದೂರನ್ನು ನೀಡುಬೇಕು ಎಂದು ಜೆಸ್ಕಾಂನ ಮುಖ್ಯ ಅಭಿಯಂತರರಾದ ಅನಿಲ್ ಕುಮಾರ್ ಬಬಲೇಶ್ವರ ಅವರು ಹೇಳಿದರು.
ನಗರದ ಜೆಸ್ಕಾಂ ಸಮುದಾಯ ಭವನದಲ್ಲಿ ಬುಧುವಾರರಂದು ಎರಡು ದಿನಗಳ ಕಾಲ ನಡೆಯುವ ಕಿರಿಯ ಮಾರ್ಗದಾಳುಗಳಿಗೆ ವಿದ್ಯುತ್ ಸುರಕ್ಷತಾ ತರಬೇತಿ ಶಿಬಿರವನ್ನು ಚಾಲನೆ ನೀಡಿ ಮಾತನಾಡಿದರು.
ಮಳೆಗಾಲದಲ್ಲಿ ಸಾರ್ವಜನಿಕರು ವಿದ್ಯುತ್ ಕಂಬಗಳಿಗೆ ದೂರವಿರಬೇಕು. ಯಾವುದೇ ಷಾಕ್ ಅಥವಾ ಅಪಘಾತವಾದಲ್ಲಿ ಕೂಡಲೇ ವಿದ್ಯುತ್ ಕಚೇರಿಗೆ ಸಂಪಕರ್ಿಸಬೇಕು ಎಂದು ಹೇಳಿದ ಅವರು ವಿದ್ಯುತ್ ಕಂಬಗಳನ್ನು ಹತ್ತಿ ಸ್ವತಃ ದುರಸ್ಥಿಯನ್ನು ಕೈಗೊಳ್ಳಬಾರದು ಎಂದರು.
ಈ ಸಂದರ್ಭದಲ್ಲಿ ಪ್ರಭಾರಿ ಅಧೀಕ್ಷಕ ಅಭಿಯಂತರರಾದ ಹುಸೇನ್ ಸಾಬ್, ಕಾರ್ಯನಿರ್ವಾಹಕ ಅಭಿಯಂತರ ರಂಗನಾಥ ಬಾಬು, ಆಸ್ಮಾಖಾತೂನ್, ಪ್ರಭಾರಿ ಉಪಲೆಕ್ಕ ನಿಯಂತ್ರಣಾಧಿಕಾರಿ ಹೊನ್ನೂರಪ್ಪ, ಲೆಕ್ಕಾಧಿಕಾರಿ ಸುಕುಮಾರ್ ಹಾಗೂ ಜಗದೀಶ್, ನೌಕರರ ಸಂಘದ ಪದಾಧಿಕಾರಿಗಳಾದ ಕೆ.ಎಂ.ವೀರೇಶ್, ದಿಲೀಪ್ ಕುಮಾರ್, ಬಿ.ಮೀನಪ್ಪ, ರಘನಂದನ ಸೇರಿದಂತೆ ಇತರರ ಇದ್ದರು.