ಲೋಕದರ್ಶನ ವರದಿ
ಬಳ್ಳಾರಿ 05: ಸಮಾಜದ ಮೌಲ್ಯಗಳನ್ನು ಗೊತ್ತಿಲ್ಲದ ವ್ಯಕ್ತಿಗಳು ಜೈಲಿಗೆ ಹೋಗಿ ಬಂದುವರಿಗೆ ಸೇಬಿನ ಹಾರ ಹಾಕಿ ಅದ್ಧೂರಿಯಾಗಿ ಮೆರವಣಿಗೆ ಮಾಡುವ ಸಂಸ್ಕೃತಿಯಲ್ಲಿ ನಾವಿದ್ದೇವೆ ಎಂದು ನಿವೃತ್ತ ನ್ಯಾಯಮೂತರ್ಿ ಡಾ.ಎಸ್.ಸಂತೋಷ ಹೆಗ್ಡೆ ಅವರು ಹೇಳಿದರು.
ನಗರದ ಅಲ್ಲಿಪುರದ ಬಳಿರುವ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಬಯಲು ರಂಗಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಆರಭ್ಯ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ವಿದ್ಯಾಥರ್ಿಗಳಿಗೆ ಪ್ರಶಂಸಾ ಪತ್ರವನ್ನು ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹದಗೆಟ್ಟಿರುವ ಸಮಾಜ ಸರಿದಾರಿಗೆ ದಾರಿಗೆ ಶಕ್ತಿ ಯುವಜನತೆ ಕೈಯಲ್ಲಿದೆ. ಪ್ರಜಾಪ್ರಭುತ್ವ ಜನರಿಗಾಗಿ, ಜನರಿಗೋಸ್ಕಾರ ಸರಕಾರ ರಚನೆಯಾಗುತ್ತಿತ್ತು. ಆದರೆ ಈಗ ಕೆಲವರಿಂದ, ಕೆಲವರಿಗೋಷ್ಕರ ಎನ್ನುವ ಸರಕಾರ ರಚನೆಯಾಗುತ್ತಿದೆ ಎಂದು ಬೇಸರ ವ್ಯಕ್ತಿಪಡಿಸಿದರು.
ಈ ಪ್ರಾಮಾಣಿಕತೆಯಿಂದ ಏನು ಪ್ರಯೋಜನ ಎಂಬ ಪರಿಸ್ಥಿತಿ ತಲೆದೂರಿದೆ. ಎಷ್ಟು ಹಣ ಗಳಿಸಿದರೂ ಹಣ ಗಳಿಸಬೇಕೆಂಬ ಒತ್ತಾಸೆ ಹಲವರಿಲ್ಲದೆ. ಸಮಾಜದಲ್ಲಿನ ಕೆಟ್ಟ ಪದ್ದತಿಯನ್ನು ತಿದ್ದಲು, ಪ್ರಾಮಾಣಿಕತೆ, ಮಾನವೀಯ ಮೌಲ್ಯಗಳನ್ನು ವಿದ್ಯಾರ್ಥಿಗಳು ಮೈ ಗೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿವಿಯ ವಿದ್ಯಾರ್ಥಿಗಳ ಜೊತೆಗೆ ಕೆಲಕಾಲ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೋ.ಸಿದ್ದು ಪಿ.ಅಲಗೂರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೌಲ್ಯಮಾಪನ ಕುಲಸಚಿವರಾದ ಡಾ.ಕೆ.ರಮೇಶ್, ಉದ್ಯೋಗ ಅಧಿಕಾರ ಬಿ.ಆರ್.ಶೆಟ್ಟಿ, ಆಡಳಿತ ಕುಲಸಚಿವೆ ಡಾ.ಬಿ.ಕೆ.ತುಳಸಿಮಾಲ ಸ್ವಾಗತಿಸಿದರು. ಡಾ.ಜಿ.ಪಿ.ದಿನೇಶ್ ವಂದಸಿದರು