ಬಳ್ಳಾರಿ: ಗಿಡಮರ ಬೆಳೆಸಿ ಪರಿಸರ ಅಭಿವೃದ್ಧಿಗೊಳಿಸಿ

ಲೋಕದರ್ಶನ ವರದಿ

ಬಳ್ಳಾರಿ 26: ನಮ್ಮ ಸುತ್ತಮುತ್ತ ಉತ್ತಮ ಪರಿಸರ ಇದ್ದಲ್ಲಿ ಮನುಷ್ಯ ಆರೋಗ್ಯವಂತನಾಗಿರಬಹುದು, ನಮ್ಮ ಸುತ್ತಮುತ್ತ ಇರುವ ಪರಿಸರ ಸ್ವಚ್ಚವಾಗಿರಬೇಕು ಒಳ್ಳೆಯ ಗಾಳಿ, ಉತ್ತಮ ಮಳೆ ಯಾಗಲು ಮರಗಿಡಗಳನ್ನು ಬೆಳೆಸುವ ಅಗತ್ಯವಿದ್ದು ಎಲ್ಲರ ಪರಿಸರ ಅಭಿವೃದ್ಧಿಗಾಗಿ ಗಿಡನೆಡುವ ಕಾರ್ಯಕ್ರಮ ಹಾಕಿ ಕೊಂಡಿರುವುದು ಶ್ಲಾಘನೀಯ ವಿಚಾರ ಎಂದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಾಗರಾಜಪ್ಪ ಅಭಿಪ್ರಾಯ ಪಟ್ಟರು.  ಸನ್ಮಾರ್ಗ ಗೆಳೆಯದ ಬಳಗ ಹಾಗೂ ಎಸ್ಯುಜೆಎಸ್ ಪದವಿ ಪೂರ್ವ ಕಾಲೇಜಿನ ಎನ್ಎಸ್ಎಸ್ ಘಟಕದ ವತಿಯಿಂದ ಗುಗ್ಗರಹಟ್ಟಿಯ ರುದ್ರಭೂಮಿಯಲ್ಲಿ ಹಮ್ಮಿಕೊಂಡ  ಗಿಡನೆಡುವ ಕಾರ್ಯಕ್ರಮದಲ್ಲಿ ಉದ್ಘಾಟನೆ ಮಾಡಿಮಾತನಾಡುತ್ತಿದ್ದರು.

ಇಂದಿನ ಯುವ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ನಾಯಕತ್ವದ ಗುಣಗಳನ್ನು ಪರಿಸರ ಜಾಗೃತಿಯನ್ನು ಬೆಳೆಸಿಕೊಳ್ಳಲು ಇಂತಹ ಕಾರ್ಯಕ್ರಮಗಳನ್ನು ಸಹಕಾರಿಯಾಗಿವೆ.  ಆದ್ದರಿಂದ ಪ್ರತಿಯೊಂದು ಕಾಲೇಜಿನಲ್ಲಿ ಒಬ್ಬ ವಿದ್ಯಾರ್ಥಿ  ಕನಿಷ್ಠ ಒಂದು ಗಿಡವನ್ನಾದರೂ ಬೆಳೆಸಿದಲ್ಲಿ ಕರ್ನಾಟಕ ರಾಜ್ಯವೇ ಒಳ್ಳೆಯ ಪರಿಸರ ಹೊಂದುತ್ತದೆ.  ಆದ್ದರಿಂದ ಇಂತಹ ಕಾರ್ಯದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳು ರೂಡಿಸಿಕೊಳ್ಳಲು ಚಿತ್ತರಂಜನ್, ಪಿ.ಎಸ್.ಐ. ಗ್ರಾಮೀಣ ಪೋಲೀಸ್ ಠಾಣೆ, ಕರೆ ನೀಡಿದರು. ರುದ್ರಭೂಮಿಯಲ್ಲಿ ಮೃತದೇಹಗಳನ್ನು ಅಂತ್ಯಕ್ರಿಯ ಮಾಡುವ ಸಂದರ್ಭದಲ್ಲಿ ಬಂದಂತಹ ಜನರಿಗೆ ಬಿಸಿಲಿನಿಂದ ರಕ್ಷಿಸಲು ಪ್ರತಿ ರುದ್ರಭೂಮಿಯಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸ್ಮಶಾನಗಳನ್ನು ಹಚ್ಚಹಸಿರುಯಾಗಿ ಮಾಡಬಹುದೆಂದು ಸನ್ಮಾರ್ಗ ಗೆಳೆಯರ ಕಾರ್ಯದರ್ಶಿ  ಕಪ್ಪಗಲ್ಲು ಚಂದ್ರಶೇಖರ್ ಆಚಾರ್ ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸನ್ಮಾರ್ಗದ ಮಹಾಮಾನವ ಹನುಮಂತರೆಡ್ಡಿ, ಖಜಾಂಚಿ ತೇಜ ರಘರಾಮ, ಜಿನ್ನಾ ರಮೇಶ, ಸಹಕಾರ್ಯದರ್ಶಿ  ಪುರುಷೋತ್ತಮ, ಅಧ್ಯಕ್ಷರು, ಎಸ್ಎಂಡಿಸಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಗುಗ್ಗರಹಟ್ಟಿ ಇವರುಗಳು ಹಾಜರಿದ್ದರು. ಅಧ್ಯಕ್ಷತೆಯನ್ನು ಎಸ್ಯುಜೆಎಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀಶೈಲ ವಹಿಸಿದ್ದರು.