ಬಳ್ಳಾರಿ 26: ಕಲಾಸಂಗಮ ಸಾಂಸ್ಕೃತಿಕ ಸಂಸ್ಥೆ ಐದನೇ ವಾಷರ್ಿಕೋತ್ಸವ ಹಾಗೂ 20ನೇ ಕಾಗರ್ಿಲ್ ವಿಜಯ್ ದಿವಸ್ ಸಂಭ್ರಮವನ್ನು "ರಾಷ್ಟ್ರದೇವೋಭವ" ಎಂಬ ಶೀಷರ್ಿಕೆಯಡಿಯಲ್ಲಿ ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಗುರುವಾರ ಸಂಜೆ ಅದ್ದೂರಿಯಾಗಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಬಿ.ಐ.ಟಿ.ಎಂ. ನಿರ್ದೇಶಕರಾದ ಡಾ. ಯಶವಂತ ಭೂಪಾಲ್ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಕಲಾಸಂಗಮ ಸಾಂಸ್ಕೃತಿಕ ಸಂಸ್ಥೆ ಕಳೆದ ಐದು ವರ್ಷಗಳಿಂದ ಇಂತಹ ದೇಶಭಕ್ತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಹರ್ಷದಾಯಕ ಎಂದರು.
ಜೊತೆಗೆ ಕಾಗರ್ಿಲ್ ವಿಜಯ್ ದಿವಸ್ ಶುಭಾಶಯಗಳನ್ನು ಕೋರಿದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೆಶಕರಾದ ಬಿ.ನಾಗರಾಜ, ಬಿಜೆಪಿ ಯುವಮೋಚರ್ಾ ಅಧ್ಯಕ್ಷರಾದ ಕೆ.ಎಸ್.ಅಶೋಕ್, ರಾಜ್ಯ ಯುವಮೋರ್ಚ ಉಪಾಧ್ಯಕ್ಷರಾದ ನಿಶ್ಚಿತ, ಕನರ್ಾಟಕ ರಾಜ್ಯ ಸಕರ್ಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಎಂ.ಶಿವಾಜಿರಾವ್, ಪ್ರಧಾನ ಕಾರ್ಯದಶರ್ಿ ಜಿ.ಕೆ.ರಾಮಕೃಷ್ಣ, ಬಿಜೆಪಿ ಮುಖಂಡರಾದ ವೇಮಣ್ಣ, ಮಾಜಿ ಯೋಧರ ಹಾಗೂ ವೀರ ನಾರಿಯರ ಸಂಘದ ಉಪಾಧ್ಯಕ್ಷರಾದ ಪ್ರಸನ್ನಕುಮಾರ್ ಗೌಡ, ಕನರ್ಾಟಕ ಕ್ಷತ್ರಿಯ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಕೃಷ್ಣಮೂರ್ತಿ, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಎಂ.ವಿನೋದ್, ಕಾರ್ಯದಶರ್ಿ ಬಿ.ಎಂ.ಸಿದ್ದೇಶ್, ಪದಾಧಿಕಾರಿಗಳಾದ ರಘು ಹರ್ಧಗೇರಿ, ನವೀನ್ ಸೌದ್ರಿ, ಸೌದ್ರಿ ಕಾರ್ತಿಕ್, ಅಮರ್, ಬಾಲು, ರಾಕೇಶ್ ಉಪಸ್ಥಿತರಿದ್ದರು.
ಕಲಾಸಂಗಮ ಸಾಂಸ್ಕೃತಿಕ ಸಂಸ್ಥೆಯ ಪ್ರತಿಷ್ಠಿತ ಜನಕ ಪ್ರಶಸ್ತಿಗೆ ಎಂ.ಬಿ.ಎಸ್.ಎಲ್. ಶಾಲೆಯ ನಿವೃತ್ತ ದೈಹಿಕ ಶಿಕ್ಷಕ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಹಿರಿಯ ಅಥ್ಲೆಟಿಕ್ ಜಿ.ಸತ್ಯನಾರಾಯಣರಾವ್ ಅವರು ಭಾಜನರಾದರು.
ಈ ಕಾರ್ಯಕ್ರಮದಲ್ಲಿ ವಿವಿಧ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪಧರ್ೆ, ಚಿತ್ರಕಲಾ ಸ್ಪರ್ಧೆ ಹಾಗೂ ದೇಶಭಕ್ತಿ ಸಮೂಹ ನೃತ್ಯ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಜೇತರಿಗೆ ಬಹುಮಾನಗಳನ್ನು ಅತಿಥಿಗಳಿಂದ ವಿತರಿಸಲಾಯಿತು.
ಪ್ರಬಂಧ ಸ್ಪಧರ್ೆಯಲ್ಲಿ ವಿಜ್ಡಮ್ ಲ್ಯಾಂಡ್ ಶಾಲೆಯ ಪ್ರತಿಭಾ ಪ್ರಥಮ ಸ್ಥಾನ, ಆರ್ಟಿಜಿ ಶಾಲೆಯ ಎಂ.ವಿ.ಅಕ್ಷತಾ ದ್ವಿತೀಯ ಸ್ಥಾನ, ಬಾಲಭಾರತಿ ಶಾಲೆಯ ನಂದಿತಾ ತೃತೀಯ ಸ್ಥಾನ, ಚಿತ್ರಕಲಾ ಸ್ಪಧರ್ೆಯಲ್ಲಿ ಕೇಂದ್ರೀಯ ವಿದ್ಯಾಲಯದ ಹೇಮೇಶ್ ಪ್ರಥಮ ಸ್ಥಾನ, ಬಾಲಭಾರತಿ ಶಾಲೆಯ ಋಷಿ ದ್ವಿತೀಯ ಸ್ಥಾನ, ಎಂಜಿಎಂ ಶಾಲೆಯ ವಿಕ್ರಮ್ ನಾಯ್ಕ ತೃತೀಯ ಸ್ಥಾನ, ದೇಶಭಕ್ತಿ ಸಮೂಹ ನೃತ್ಯದಲ್ಲಿ ನಲಂದ ಶಾಲೆ ಪ್ರಥಮ ಸ್ಥಾನ, ಜಿಂದಾಲ್ ವಿದ್ಯಾಮಂದಿರ ದ್ವಿತೀಯ ಸ್ಥಾನ, ಬಿಪಿಎಸ್ಸಿ ಶಾಲೆ ತೃತೀಯ ಸ್ಥಾನವನ್ನು ಪಡೆಯಿತು.
ಕಾಗರ್ಿಲ್ ವಿಜಯ್ ದಿವಸ್ ಸಂದರ್ಭದಲ್ಲಿ ಮಾಜಿ ಯೋಧರಾದ ನಾಯಕ್ ಚೆನ್ನಾರೆಡ್ಡಿ, ನಾಯಕ್ ನಾಗರಾಜ್, ನಾಯಕ್ ಸುಬೇದಾರ್ ನಾರಾಯಣ ಕೆ.ಎಲ್., ನಾಯಕ್ ಕೆ.ಸತ್ಯನಾರಾಯಣ, ನಾಯಕ್ ಮಧುಸೂಧನ, ನಾಯಕ್ ಸಿ.ಪ್ರಭಾಕರ್, ನಾಯಕ್ ಗಣೇಶ್, ಸಿಎಫ್ಎನ್ ಶ್ರೀನಿವಾಸ, ಸುಬೇದಾರ್ ಪಂಪಾಪತಿ, ಸಾಜೆಂಟ್ ವೇಣುಗೋಪಾಲ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.