ಇಂದು ಬೃಹತ್ ಉದ್ಯೋಗ ಮೇಳ ಕಾರ್ಯಕ್ರಮ
ಹೊಸಪೇಟೆ 22: ಇಂದು ವಿಜಯನಗರ ಜಿಲ್ಲೆಯ ಹೊಸಪೇಟೆಯ ಹೃದಯ ಭಾಗದಲ್ಲಿರುವ ವಿಜಯನಗರ ಮಹಾವಿದ್ಯಾಲಯದಲ್ಲಿ ವಿಜಯನಗರ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ಹಾಗೂ ಐ. ಕ್ಯೂ. ಎ. ಸಿ ಮತ್ತು ಪ್ಲೇಸ್ಮೆಂಟ್ ಸೆಲ್ ವಿಜಯನಗರ ಕಾಲೇಜ್ ಹೊಸಪೇಟೆ ಇವರ ಸಂಯುಕ್ತಾಶ್ರಯದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಯಿತು. ಈ ಒಂದು ಬೃಹತ್ ಉದ್ಯೋಗ ಮೇಳಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಚೇಂಬರ್ ಆಫ್ ಕಾಮರ್ಸ್ ನ ಸದಸ್ಯರು ಹಾಗೂ ಆಕಾಶ್ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಎಚ್. ಎನ್ ಮೊಹಮ್ಮದ್ ಇಮಾಮ್ ನಿಯಾಜ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಉದ್ಯೋಗ ಆಕಾಂಕ್ಷಿಗಳಿಗೆ ಉದ್ಯೋಗದಾತರು ಅವರ ಜೀವನದ ದಿಕ್ಕನ್ನೇ ಬದಲಾಯಿಸಿ ಬಿಡುತ್ತಾರೆ, ತಂದೆ-ತಾಯಿಗಳು ಮಕ್ಕಳ ಜೀವನ ನೆಲೆಗೊಂಡಿದ್ದಕ್ಕಾಗಿ ನಿಟ್ಟುಸಿರು ಬಿಟ್ಟು ನೆಮ್ಮದಿಯಿಂದ ಜೀವನ ಕಳೆಯುವಂತಹ ಸನ್ನಿವೇಶ. ಕುಟುಂಬದ ನಿರ್ವಹಣೆಗಾಗಿ ತಂದೆ ತಾಯಿಗಳು ಹೆಣಗಾಡುತ್ತಿರುವ ಸಂದರ್ಭ ಕೊನೆಗೊಂಡು ಸಂಸಾರದ ಬಂಡಿಗೆ ಮಕ್ಕಳು ಹೆಗಲು ಕೊಡುವುದು ತಂದೆ ತಾಯಿಗಳ ಕಣ್ಣಲ್ಲಿ ಸಾರ್ಥಕತೆಯ ಆನಂದ ಭಾಷ್ಪ ಬಂದಿರುತ್ತದೆ. ಈ ಒಂದು ಉದ್ಯೋಗ ಮೇಳಕ್ಕೆ ಆಗಮಿಸಿದ ಎಲ್ಲಾ ಉದ್ಯೋಗಕಾಂಶಗಳಿಗೆ ಶುಭ ಹಾರೈಸಿದರು. ಅಭ್ಯರ್ಥಿಗಳು ಕನಿಷ್ಠ 5 ಸಂದರ್ಶನಗಳನ್ನು ನೀಡಿ. ನಿಮ್ಮ ಬಯೋಡಾಟಾದ 10 ಜೆರಾಕ್ಸ್ ಪ್ರತಿಗಳನ್ನು ತೆಗೆದುಕೊಂಡು ಹಾಜರಾಗಿ. ನಿಮ್ಮ ವಿದ್ಯಾರ್ಹತೆಗೆ, ಅನುಭವಕ್ಕೆ ಸೂಕ್ತ ಎನಿಸುವ ಉದ್ಯೋಗಕ್ಕೆ ಮಾತ್ರ ರೆಸ್ಯೂಮ್‌ಗಳನ್ನು ನೀಡಿ, ಸಂದರ್ಶನಕ್ಕೆ ಹಾಜರಾಗಿ. ಸಂದರ್ಶನಕ್ಕೆ ಸಹ ಸೂಕ್ತ ತಯಾರಿ ನಡೆಸಿಕೊಳ್ಳಿ. ಸಂದರ್ಶನ ಎಂದರೆ ಭಯ ಬೇಡ. ಅವರಿಗೆ ನಿಮ್ಮಿಂದ ಕೆಲಸ ಆಗಬೇಕು ಎಂದರೆ, ಆ ಸ್ಕಿಲ್‌ಗಳು, ಅರ್ಹತೆ ನಿಮ್ಮಲ್ಲಿ ಇದ್ದಲ್ಲಿ ಆಯ್ಕೆ ಮಾಡುತ್ತಾರೆ. ಇದನ್ನು ತಲೆಯಲ್ಲಿ ಇಟ್ಟುಕೊಂಡು ಧೈರ್ಯದಿಂದ ಸಂದರ್ಶನಕ್ಕೆ ಹಾಜರಾಗಿ. ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿ. ನೀವು ಸಂದರ್ಶನ ನೀಡಿದ ಕಂಪನಿಯ ಸಂಪರ್ಕ ಮಾಹಿತಿಗಳನ್ನು ಸಹ ಪಡೆಯಲು ಮರೆಯದಿರಿ. ಕೆಲಸ ಸಿಗದಿದ್ದರೂ ಒಂದು ಉತ್ತಮ ಅನುಭವ ಸಿಗುತ್ತದೆ. ಇದನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಿ ಎಂದರು. ಒಂದು ಉದ್ಯೋಗ ಮೇಳದಲ್ಲಿ 55 ಕಂಪನಿಗಳು ಹಾಗೂ 5,000 ಉದ್ಯೋಗ ಆಕಾಂಕ್ಷಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವಿವಿ ಸಂಘದ ಅಧ್ಯಕ್ಷರಾದ ಡಾಕ್ಟರ್ ಕಣೆಕಲ್ ಮಹಾಂತೇಶ್, ಡಾಕ್ಟರ್ ಅರವಿಂದ್ ಪಾಟೀಲ್ ಡಾಕ್ಟರ್ ಎನ್ ಮಲ್ಲಿಕಾರ್ಜುನ ವಿಜಯನಗರ ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ಪ್ರಭುಗೌಡ, ಡಾಕ್ಟರ್ ಭೂಪಾಲ ಪ್ರಹ್ಲಾದ ಸೈಯದ್ಹ್ ನಾಜಿಮುದ್ದೀನ್ ಹಾಗೂ ಚೇಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷರಾದ ಅಶ್ವಿನ್ ಕೊತಂಬರಿ ಹಾಗೂ ಕಾಕುಬಾಳ ರಾಜೇಂದ್ರ, ಸಾವಿರಾರು ಉದ್ಯೋಗ ಅಂಶಿಗಳು ಪಾಲಕರ ಪೋಷಕರು ಉಪಸ್ಥಿತರಿದ್ದರು