ದೇವರಹಿಪ್ಪರಗಿ 23: ತಾಲೂಕಿನ ಹುಣಶ್ಯಾಳ ಗ್ರಾಮದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಜರಗುವ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ ಶನಿವಾರ ದಿ.24ರಿಂದ 27ರ ವರೆಗೆ ವಿಜೃಂಭಣೆಯಿಂದ ಜರುಗಲಿದೆ
ಶನಿವಾರದಂದು ದೇಶಮುಖರ ಮನೆಗೆ ಸಾಯಂಕಾಲ ವಿವಿಧ ಗ್ರಾಮಗಳಿಂದ ಪಲ್ಲಕ್ಕಿಗಳ ಆಗಮನದ ನಂತರ ರಾತ್ರಿ 9 ಗಂಟೆಗೆ ಸುಪ್ರಸಿದ್ಧ ಡೊಳ್ಳಿನ ಪದಗಳು ಗಾಯನ ಅದ್ದೂರಿಯಾಗಿ ಜರುಗಲಿದೆ. ರವಿವಾರದಂದು ಬೆಳಿಗ್ಗೆ 7 ಗಂಟೆಗೆ ಪಲ್ಲಕ್ಕಿಗಳ ಮೆರವಣಿಗೆ, 10 ಗಂಟೆಯಿಂದ 4:00 ವರೆಗೆ ಜನಪದ ಕಲರವ, ಹಂತಿ ಮೇಳ,ಹಲಗೆ ಮೇಳ, ಹೆಜ್ಜೆ ಕುಣಿತ, ಗೊಂದಲಿಗರ ಕುಣಿತ, ಚೌಡಕಿ ಪದ, ಅಲಾಯಿ ಕುಣಿತ,
ಡೊಳ್ಳು ಕುಣಿತ, ಮೈಲಾರಲಿಂಗನ ಪದ ಸೇರಿದಂತೆ ಹಲವಾರು ಕಲಾ ತಂಡಗಳಿಂದ ಪ್ರದರ್ಶನ ಗೊಳ್ಳುವುದು.
ಸಾಯಂಕಾಲ 4ಗಂಟೆಗೆ ಧರ್ಮಸಭೆ ಜರುಗಲಿದೆ. ಸಮಾರಂಭದ ಸಾನಿಧ್ಯವನ್ನು ಹುಲಜಂತಿ ಪಟ್ಟಾಧಿಕಾರಿ ಮಹಾಲಿಂಗರಾಯ ಮಹಾರಾಜರು, ಸರೂರ-ಅಗತಿರ್ಥ ಹಾಲುಮತ ಗುರುಪೀಠದ ರೇವಣಸಿದ್ದೇಶ್ವರ ಶಾಂತಮಯ ಮಹಾಸ್ವಾಮಿಗಳು, ಗುಬ್ಬೇವಾಡದ ಅಮೋಘಸಿದ್ದೇಶ್ವರ ಮಠದ ಶ್ರೀಗಳು, ಚಟ್ಟರಕಿ ಶ್ರೀಗಳು ಹಾಗೂ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದ ಗೊಲ್ಲಾಳಪ್ಪ ಪೂಜಾರಿಗಳು ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಿವರಾಜ ದೇಶಮುಖ ವಹಿಸಲಿದ್ದಾರೆ. ಉದ್ಘಾಟಕರಾಗಿ ಸ್ಥಳೀಯ ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ಪ್ರಭುಗೌಡ ಲಿಂಗದಳ್ಳಿ ಚಬನೂರ ಆಗಮಿಸಲಿದ್ದಾರೆ.
ಫೋಟೋ ಪೂಜೆ ಕಾರ್ಯಕ್ರಮದಲ್ಲಿ ಮಾಜಿ ಶಾಸಕರುಗಳಾದ ಶರಣಪ್ಪ ಸುಣಗಾರ ಹಾಗೂ ಸೋಮನಗೌಡ ಪಾಟೀಲ ಸಾಸನೂರ ಹಾಗೂ ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆನಂದಗೌಡ ದೊಡ್ಡಮನಿ, ಮಾಜಿ ಜಿ.ಪಂ ಸದಸ್ಯರಾದ ಗೌರಮ್ಮ ಮುತ್ತತ್ತಿ, ಮುಖಂಡರುಗಳಾದ ಸೋಮನಾಥ ಕಳ್ಳಿಮನಿ,ಡಾ. ಪ್ರಭು ಭೈರಿ, ಸಿದ್ದು ಬುಳ್ಳಾ , ಈರಂಗಟೆಪ್ಪ ತಳ್ಳೊಳ್ಳಿ, ಮಲ್ಲಣ್ಣ ಸಾಲಿ, ರಾಜು ಕಂಬಾಗಿ, ಸಾಯಿನಾಥ ವಾಲಿಕಾರ, ಮಡಿವಾಳಪ್ಪ ಬ್ಯಾಲ್ಯಾಳ, ರವಿ ನಾಯ್ಕೋಡಿ ಸೇರಿದಂತೆ ಹಲವಾರು ಜನ ಮುಖಂಡರು ಅತಿಥಿಗಳಾಗಿ ಆಗಮಿಸಲಿದ್ದಾರೆ. ನಂತರ ರಾತ್ರಿ 10ಗಂಟೆಗೆ ಸುಪ್ರಸಿದ್ಧ ಡೊಳ್ಳಿನ ಪದಗಳು ಜರುಗುವುದು. ಸೋಮವಾರದಂದು ಟ್ರ್ಯಕ್ಟರ್ ಜಗ್ಗುವ ಸ್ಪರ್ಧೆ ಏರಿ್ಡಸಲಾಗಿದ್ದು ಸ್ಪರ್ಧೆಯಲ್ಲಿ ವಿವಿಧ ತಂಡಗಳಿಂದ ಭಾಗವಹಿಸಿ ಬಹುಮಾನ ಪಡೆದುಕೊಳ್ಳಲಿವೆ. ಮಂಗಳವಾರದಂದು ಡೊಳ್ಳಿನ
ವಾಲಗ ಹಾಗೂ ಈರಕಾರರ ಆಟ ಕಾರ್ಯಕ್ರಮ ಜರುಗುವುದು ಹಾಗೂ ರಾತ್ರಿ 10ಗಂಟೆಗೆ ಬೀರಲಿಂಗೇಶ್ವರ ಮಹಾತ್ಮೆ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಜಾತ್ರಾ ಮಹೋತ್ಸವದ ಕಮಿಟಿಯ ಪದಾಧಿಕಾರಿಗಳು ಈ ಮೂಲಕ ತಿಳಿಸಿದ್ದಾರೆ.