ಸಿಬಿಎ??? 10ನೇ ತರಗತಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಫಿನಿಕ್ಸ್‌ ಇಂಟರ್ನ್ಯಾಷನಲ್ ಶಾಲೆ

CBA??? Phoenix International School won the first position for class 10 Taluk

ಸಿಬಿಎ??? 10ನೇ ತರಗತಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಫಿನಿಕ್ಸ್‌ ಇಂಟರ್ನ್ಯಾಷನಲ್ ಶಾಲೆ 

  ಲೋಕದರ್ಶನ ವರದಿ  

ಶಿಗ್ಗಾವಿ  14: ಪಿನಿಕ್ಸ್‌ ಇಂಟರ್ನ್ಯಾಷನಲ್ ಶಾಲೆಯು ಗುಣಮಟ್ಟದ ಶಿಕ್ಷಣದಲ್ಲಿ ತನ್ನದೇ ಆದ ವಿಶಿಷ್ಟ ಹೆಸರು ಹೊಂದಿರುವ ಸತತವಾಗಿ ಸಿ.ಬಿ.ಎಸ್‌.ಸಿ. ಬೋರ್ಡಿನಲ್ಲಿ 10ನೇ ತರಗತಿಯಲ್ಲಿ 100ಅ ಸಾಧಿಸುತ್ತಾ ಬಂದಿದ್ದು, ಈ ಬಾರಿ ಕೂಡ 100ಅ ಫಲಿತಾಂಶ ಸಾಧಿಸುವ ಮೂಲಕ ಒಂದು ಐತಿಹಾಸಿಕ ಸಾಧನೆ ಮಾಡಿ ಯಶಸ್ವಿಯಾಗಿದೆ. ಶಾಲೆಯ ಈ ಅದ್ವಿತೀಯ ಸಾಧನೆಯೊಂದಿಗೆ ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದು ತನ್ನ ಶೈಕ್ಷಣಿಕ ಶ್ರೇಷ್ಠತೆಯನ್ನು ಮತ್ತೊಮ್ಮೆ ಸಾದರಪಡಿಸಿದೆ.ಮತ್ತೊಂದು ಹೆಮ್ಮೆ ಏನೆಂದರೆ, ಈ ವರ್ಷ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿ ವಿಷಯದಲ್ಲಿ 95ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ ಅವರಲ್ಲಿ ಪ್ರಮುಖವಾಗಿ: ಶ್ರೀಧರ್ ಕೊತಬಾಳ್, ಶ್ರೀನಿಧಿ ಅತ್ತಿಗೇರಿ, ಸಂಜನ ಕುಲಕರ್ಣಿ, ಸಹನಾ ಪೂಜಾರ ಇವರು ಅತ್ಯುನ್ನತ ಅಂಕಗಳನ್ನು ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಾಗಿ ಹೊರಹೊಮ್ಮಿದ್ದಾರೆ. ಇವರ ಶ್ರಮ, ಶಿಕ್ಷಕರ ಮಾರ್ಗದರ್ಶನ ಹಾಗೂ ಪೋಷಕರ ಸಹಕಾರ ಇವೆಲ್ಲ ಶಾಲೆಯ ಸಾಧನೆಯ ಮೂಲಸ್ತಂಭಗಳಾಗಿವೆ.  ಈ ಅದ್ಭುತ ಸಾಧನೆಗಾಗಿ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಎಂ.ಎಂ.ತಿರ್ಲಾಪೂರ, ಉಪಾಧ್ಯಕ್ಷ ನರಹರಿ ಕಟ್ಟಿ, ಕಾರ್ಯದರ್ಶಿ ಡಾ.ರಾಣಿ ತಿರ್ಲಾಪೂರ, ಪ್ರಾಂಶುಪಾಲ ಶ್ರೀನಿವಾಸ್ ಸೇರಿದಂತೆ ಶಿಕ್ಷಕ ವರ್ಗ ಹಾಗೂ ಸಂಪೂರ್ಣ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ ಮತ್ತು ಭವಿಷ್ಯದಲ್ಲೂ ಇನ್ನಷ್ಟು ಬೆಳಕಿನತ್ತ ಸಾಗಲೆಂದು ಹಾರೈಸಿದ್ದಾರೆ.