ಸಿಡಿ. ಹಾಗೂ ಜಂಬಗಿ ಗ್ರಾಮದ ಸಂಪಂರ್ಕ ರಸ್ತೆಯ ಕಾಮಗಾರಿಗೆ ಚಾಲನೆ
ಸಂಬರಗಿ15 ; ಬ್ರೀಟಿಸರ ಕಾಲದಿಂದ ಜಂಬಗಿ ಗ್ರಾಮದ ಸಂಪಂರ್ಕ ರಸ್ತೆ ಕೆಲಸವನ್ನು ಸ್ಥಗಿತಗೊಂಡಿದ್ದು ಆದರೆ ಗ್ರಾಮಸ್ಥರು ಪ್ರಯತ್ನದಿಂದ, ಶಾಸಕ ಲಕ್ಷ್ಮಣ ಸವದಿ ಹಾಗೂ ರಾಜು ಕಾಗೆಯವರ ಸತತ ಪ್ರಯತ್ನದಿಂದ 70 ವರ್ಷಗಳ ನಂತರ ರಸ್ತೆಯ ಕಾಮಗಾರಿ ಪ್ರಾರಂಭವಾಗಿದ್ದು ಗ್ರಾಮದ ಜನರಿಗೆ ಅನುಕೂಲವಾಗಿದೆಯಂದು ವಿವಿಧ ಉದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಅಧ್ಯಕ್ಷರಾದ ನಿಜಗುಣಿ ಮಗದುಮ್ ಹೇಳಿದರು.
ಮದಭಾಂವಿ ಗ್ರಾಮದಲ್ಲಿ ಸಿದ್ದೇಶ್ವರ ದೇವಸ್ಥಾನ ಹತ್ತಿರ ಸಿಡಿ. ಹಾಗೂ ಜಂಬಗಿ ಗ್ರಾಮದ ಸಂಪಂರ್ಕ ರಸ್ತೆಯ ಕಾಮಗಾರಿಗೆ ಚಾಲನೆ ನೀಡಿ ಚುನಾವಣೆಯಲ್ಲಿ ಶಾಸಕದ್ವರು ನೀಡಿದ ಆಶ್ವಾಸನೆಯನ್ನು ಪೂರ್ಣಮಾಡಿದ್ದು ಗಡಿಭಾಗದ ಜನರು ಶಾಸಕರಿಗೆ ಬೆನ್ನುಲುಬುವಾಗಿ ನಿಲ್ಲುತ್ತಾರೆ. ಕ್ಷೇತ್ರದ ಜನರು ಕಷ್ಟದಲ್ಲಿ ಇದ್ದಾಗ ಅವರ ಕಷ್ಟವನ್ನು ಬಗೆಹರಿಸಲು ಸತತವಾಗಿ ಪ್ರಯತ್ನಿಸುತ್ತಾರೆ. ಮತ್ತು ಸುಖದಲ್ಲಿ ಇದ್ದಾಗಲು ಭಾಗಿಯಾಗುತ್ತಾರೆ ಈ ಭಾಗದಲ್ಲಿ ಮಹಾರಾಷ್ಟ್ರ ಸಂಪಂರ್ಕ ಹೊಂದಿರುವ ಕರ್ನಾಟಕ ರಸ್ತೆಗಳು ಹಾಗೂ ತೋಟಪಟ್ಟಿ ರಸ್ತೆಗಳು ಡಾಂಬರಿಕರಣ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿದ್ದಾರೆ. ಅವರು ಹೇಳಿದಂತ ನಡೆಯುವ ಪದ್ದತಿ ಅವರಲ್ಲಿ ಇದೆ. ಅವರು ಎಲ್ಲಿಯೇ ಇದ್ದರು ಜನರು ಅವರನ್ನು ಬೆಂಬಲಿಸುತ್ತಾರೆ.
ಗಡಿಭಾಗದ ಕೆರೆ ತುಂಬುವ ಯೋಜನೆಯಲ್ಲಿ ಹಾಗೂ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಿ ಹಸಿರುಕ್ರಾಂತಿ ಮಾಡಿಯೇ ತೀರುತ್ತಾರೆ. ಹೇಳೋದೊಂದು ಮಾಡೊದೊಂದು ಅಂತಹ ಭಾವನೆ ಅವರಲ್ಲಿ ಇಲ್ಲ. ನೇರ ನುಡಿ, ನೇರ ಮಾತು ಇದ್ದಾವೆ.
ಈ ವೇಳೆ ಪಿ.ಕೆ.ಪಿ.ಎಸ್.ಸಹಕಾರಿ ಸಂಘದ ಉಪಾಧ್ಯಕ್ಷರು ಅಶೋಕ ಪೂಜಾರಿ, ಮನೋಹರ ಪೂಜಾರಿ, ಈಶ್ವರ ಕುಂಬಾರ, ಮುರಗೆಪ್ಪಾ ಮಗದುಮ್, ನೀಖೀಲ ಪಾಟೀಲ, ರಾಮಣ್ಣಾ ಮಗದುಮ್, ರಾವಸಾಬ ನೀವಲಗಿ, ರಂಜಿತ ಪೂಜಾರಿ, ಆಕಾಶ ನಾಯಿಕ, ಕಲ್ಲಪ್ಪ ಪೂಜಾರಿ, ಶಿವನಿಂಗ ಮಗದುಮ್, ಅಪ್ಪು ಚೌಗಲಾ, ಶಿದಲಿಂಗ ಇಬ್ರಾಹಿಂಪೂರ, ಸದಾಶಿವ ಪ್ರಧಾನಿ, ಗುತ್ತಿಗೆದಾರರಾದ ಮಲ್ಲು ಅವಟಿ ಸೇರಿದಂತ ಗ್ರಾಮದ ಗಣ್ಯರು ಉಪಸ್ಥಿತರಿದ್ದರು.
ಪೋಟೋ :
ಮದಭಾಂವಿ ಗ್ರಾಮದ ಸಿದ್ದೇಶ್ವರ ದೇವಸ್ಥಾನ ಹತ್ತಿರ ಮದಭಾಂವಿ-ಜಂಬಗಿ ಸಂಪಂರ್ಕ ರಸ್ತೆ ಕಾಮಗಾರಿ, ನಿಜಗುಣಿ ಮಗದುಮ್ ಚಾಲನೆ ನೀಡಿದರು. ಈ ವೇಳೆ ಮುರಗೆಪ್ಪಾ ಮಗದುಮ್, ಅಶೋಕ ಪೂಜಾರಿ, ಮನೋಹರ ಪೂಜಾರಿ ಇನ್ನಿತರ ಉಪಸ್ಥಿತರಿದ್ದರು (15-ಸಂಬರಗಿ-2)
ಬಾಕ್ಸ :
ವಿನಾಯಕ ಬಾಗಡಿ, ನಿಜಗುಣಿ ಮಗದುಮ್, ಅಪ್ಪು ಚೌಗಲಾ, ಬ್ರೀಟಿಷರ ಕಾಲದ ರಸ್ತೆಗಾಗಿ ಚುನಾವಣೆಯಲ್ಲಿ ಮನವಿ ಮಾಡಿಕೊಂಡಿದ್ದರು ಆ ಪ್ರಕಾರ ಶಾಶಕದ್ವಯರು ಈ ರಸ್ತೆಯನ್ನು ನೀಡಿದ ಭರವಸೆಯ ಪ್ರಕಾರ ಕಾಮಗಾರಿಯನ್ನು ಪ್ರಾರಂಭ ಮಾಡಿದ್ದಾರೆ. ಸಿಡಿ ಹಾಗೂ ರಸ್ತೆ ಕಾಮಗಾರಿಯನ್ನು ಪ್ರಾರಂಭ ಮಾಡಿದ ನಂತರ 10 ಲಕ್ಷ ರೂ.ಅನುದಾನ ಮಂಜೂರು ಮಾಡಿದ್ದಾರೆ ಎಂದು ಹೇಳಿದರು.