ಸಿಎಂ ಪದಕ ಪುರಸ್ಕೃತ ಶಿವಾನಂದ ಕಟ್ಟಿಮನಿಗೆ ಸನ್ಮಾನ

CM Medal winner Shivananda Kattimana honoured

ಲೋಕದರ್ಶನ ವರದಿ 

ಸಿಎಂ ಪದಕ ಪುರಸ್ಕೃತ ಶಿವಾನಂದ ಕಟ್ಟಿಮನಿಗೆ ಸನ್ಮಾನ 

ವಿಜಯಪುರ 18: ಮುಖ್ಯಮಂತ್ರಿ ಪದಕ ಪಡೆದು ವಿಜಯಪುರ ಜಿಲ್ಲೆಯ ಕೀರ್ತಿ ಹೆಚ್ಚಿಸಿದ ಸಂಚಾರಿ ಪೊಲೀಸ್ ಠಾಣೆಯ ಎಎಸ್‌ಐ ಶಿವಾನಂದ ಕಟ್ಟಿಮನಿ ಅವರಿಗೆ ಪರಿಸರ ಜಾಗೃತಿ ವೇದಿಕೆ ಹಾಗೂ ಶಿವಶರಣ ಶೈಕ್ಷಣಿಕ, ಗ್ರಾಮೀಣಾಭಿವೃದ್ಧಿ ಹಾಗೂ ವಿವಿಧೋದ್ಧೇಶಗಳ ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. 

ಪರಿಸರ ಜಾಗೃತಿ ವೇದಿಕೆ ಅಧ್ಯಕ್ಷ ಅಂಬಾದಾಸ ಜೋಶಿ ಅವರು ಮಾತನಾಡಿ, ಸರ್ಕಾರಿ ಸೇವೆಯಲ್ಲಿದ್ದುಕೊಂಡು ಸಮಾಜಮುಖಿ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಜನಮಾನಸ ಪ್ರೀತಿಗೆ ಪಾತ್ರರಾದ ಶಿವಾನಂದ ಕಟ್ಟಿಮನಿ ಅವರಿಗೆ ಮುಖ್ಯಮಂತ್ರಿಗಳ ಪೊಲೀಸ್ ಪದಕ ಗೌರವಕ್ಕೆ ಭಾಜನರಾಗಿರುವುದು ನಮ್ಮ ವಿಜಯಪುರ ಜಿಲ್ಲೆಗೆ ಹೆಮ್ಮೆಯ ಸಂಗತಿ. ಕಟ್ಟಿಮನಿಯವರಿಗೆ ಇನ್ನಷ್ಟು ಹೆಚ್ಚಿನ ಗೌರವ ಆದರಗಳು ಸಿಗಲಿ ಎಂದು ಹಾರೈಸಿದರು. 

ಎಎಸ್‌ಐ ವಾಗ್ಮೋರೆ, ಕಲಾವಿದ ಭೀಮಣ್ಣ ಭಜಂತ್ರಿ, ರಾಷ್ಟ್ರೀಯ ಸಂಶೋಧನಾ ವೇದಿಕೆ ಅಧ್ಯಕ್ಷ ಲಾಯಪ್ಪ ಇಂಗಳೆ, ಶೈಕ್ಷಣಿಕ, ಗ್ರಾಮೀಣಾಭಿವೃದ್ಧಿ ಹಾಗೂ ವಿವಿಧೋದ್ಧೇಶಗಳ ಸಂಸ್ಥೆ ಅಧ್ಯಕ್ಷ ಕಲ್ಲಪ್ಪ ಶಿವಶರಣ, ಹೋರಾಟಗಾರ ಬಸವಕುಮಾರ ಕಾಂಬಳೆ, ಪತ್ರಕರ್ತರಾದ ಉಮೇಶ ಶಿವಶರಣ, ಭೀಮರಾಯ ಕುಂಟೋಜಿ, ಶ್ರೀಕಾಂತ ಮೆಂಡೇಗಾರ, ಸುಬ್ರಮಣ್ಯ ಬಜಂತ್ರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.