ಸಿ ಪಿ ಐ ಮುಸಾಪುರಿ ಅವರಿಗೆ ಶ್ರೀಗಳಿಂದ ಸನ್ಮಾನ

CPI Musapuri honored by Shri

ಯಮಕನಮರಡಿ 15: ಸ್ಥಳೀಯ ಪೋಲಿಸ ಠಾಣೆ ಸಿ ಪಿ ಐ ಜಾವೀದ ಮುಸಾಪುರಿ ಇವರ 45ನೇ ಹುಟ್ಟು ಹಬ್ಬದ ಪ್ರಯುಕ್ತ ಹತ್ತರಗಿ ಹರಿಮಂದಿರದ ಪೂಜ್ಯರಾದ ಡಾ.ಆನಂದ ಮಹಾರಾಜ ಗೋಸಾವಿ ಯವರು ದಿ. 14 ರಂದು ಶಾಲು ಹೊದಿಸಿ ಸನ್ಮಾನಿಸಿದರು. 

 ತಮ್ಮ ಉಭಯ ಕುಶಲೋಪರಿ ಕುರಿತು ಶ್ರೀಗಳೊಂದಿಗೆ ಮಾತನಾಡುತ್ತಾ ಸಿ ಪಿ ಐ ಜಾವೀದ ಮುಸಾಪುರಿ ಇಂದಿನ ದಿನಮಾನಗಳಲ್ಲಿ ಯುವಕರಲ್ಲಿ ಇರುವ ಸಂಸ್ಕಾರವು ನಶಿಸುತ್ತಾ ಹೊರಟಿದೆ ಇಂದಿನ ಯುವಕರು ದುಶ್ಚಟಕ್ಕೆ ಬಲಿಯಾಗಿ ಅಲ್ಲ ಸಲ್ಲದ ಚಟುವಟಿಕೆಗಳಲ್ಲಿ ಪಾಲ್ಗೊಂಡು ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಹಿಗಾಗಿ ಮುಂದಿನ ದಿನಮಾನಗಳಲ್ಲಿ ಸಂಸ್ಕಾರ ಧರ್ಮ ಆಚಾರ ವಿಚಾರಗಳನ್ನು ಕಾಣುವುದು ಬಹಳಷ್ಟು ವಿರಳವಾಗುತ್ತಿದೆ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.  

ಈ ಸಂದರ್ಭದಲ್ಲಿ ಪರ್ತ್ರಕರ್ತರಾದ ಗೋಪಾಲ ಚಪಣಿ, ಎ ಎಮ್ ಕರ್ನಾಚಿ, ಎಸ್ ಆರ್ ತಬರಿ ಮುಂತಾದವರು ಉಪಸ್ಥಿತರಿದ್ದರು.