ಹಾವೇರಿ: ಮಕ್ಕಳು ವೈಜ್ಞಾನಿಕ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು. ವಿಜ್ಞಾನ ಮತ್ತು ವೈಚಾರಿಕ ಚಿಂತನೆಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು. ಮೂಢನಂಬಿಕೆಗಳನ್ನು ಜೀವನದಿಂದ ಕೈಬಿಡಬೇಕು ಎಂದು ವಿದ್ಯಾಥರ್ಿಗಳಿಗೆ ಕಬ್ಬೂರ ಗ್ರಾ.ಪಂ.ಅಧ್ಯಕ್ಷ ತಿರಕಪ್ಪ ಕುಳ್ಳಣ್ಣನವರ ಕರೆ ನೀಡಿದರು.
ಕಬ್ಬೂರ ಸಮೂಹ ಸಂಪನ್ಮೂಲ ಕೇಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಭಾರತ ಜ್ಞಾನ ವಿಜ್ಞಾನ ಸಮಿತಿ ಕನರ್ಾಟಕ ಇವರ ಆಶ್ರಯದಲ್ಲಿ ಕಬ್ಬೂರ ಗ್ರಾಮದ ಮಾದರಿ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆ ಇವರ ಆಶ್ರಯದಲ್ಲಿ ಡಿ. 12 ರಂದು ಕಬ್ಬೂರ ಸಮೂಹ ಮಟ್ಟದ ಮಕ್ಕಳ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪಠ್ಯದ ಜೊತೆಗೆ ವೈಚಾರಿಕತೆ, ವಿಜ್ಞಾನಗಳ ಅರಿವನ್ನು ಹೊಂದಬೇಕು. ಮೂಢ ನಂಬಿಕೆಗಳನ್ನು ಸಮಾಜದಿಂದ ದೂರಮಾಡಲು ಶ್ರಮಿಸಬೇಕು. ವಿದ್ಯಾಥರ್ಿಗಳಾದ ತಾವೆಲ್ಲ ಸಮಾಜವನ್ನು ಜಾಗೃತಿಗೊಳಿಸಬೇಕು ಎಂದು ಸಲಹೆ ನೀಡಿದರು.
ಗ್ರಾಮದಲ್ಲಿ ವಿಜ್ಞಾನದ ಜಾಗೃತಿಗಾಗಿ ಅಕ್ಷರ ಬಂಡಿ ಮೆರವಣಿಗೆ ಆಯೋಜಿಸಿ ಪ್ರಭಾತಪೇರಿಯನ್ನು ಕ್ಷೇತ್ರದ ಶಿಕ್ಷಣಾಧಿಕಾರಿ ಎಂ.ಎಚ್.ಪಾಟೀಲ ಉದ್ಘಾಟಿಸಿದರು. ಹಾಡುಗಾತರ್ಿ ರುಬೀನಾ ನದಾಫ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳಿಗೆ ಸ್ಪೂತರ್ಿ ತುಂಬಿದರು. ಕಾರ್ಯಕ್ರಮದ ಉದ್ಘಾಟನೆಗಾಗಿ ನೀರಿನ ಚಿಮ್ಮುವ ಕಾರಂಜಿ ಹಾಗೂ ನ್ಯೂಟನ್ ಚಕ್ರಗಳನ್ನು ತಯಾರಿಸಿ ತಮ್ಮ ವಿಜ್ಞಾನ ಪ್ರತಿಭೆಯನ್ನು ಪ್ರದಶರ್ಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷರಾದ ಬಸವರಾಜ ದ್ಯಾಮಣ್ಣನವರ ವಹಿಸಿದ್ದರು. ಶಿಕ್ಷಣ ಇಲಾಖೆಯ ಸಿದ್ದರಾಜ, ಎಸ್.ಆರ್.ಹಿರೇಮಠ, ನಾಗರಾಜ ಇಚ್ಚಂಗಿ, ಜೆ.ಎಂ.ಜಾವೂರ, ನಟರಾಜ ಬಿದರಿ, ವಿ.ಎಸ್.ಪಡಗೋದಿ, ಸಿ.ಎಸ್. ಸನದಿ ಉಪಸ್ಥಿತರಿದ್ದರು.