ಲೋಕದರ್ಶನವರದಿ
ಹಾವೇರಿ29: ವೃತ್ತಿ ಕ್ಷೇತ್ರದ ಆಯ್ಕೆ ವಿದ್ಯಾರ್ಥಿಗಳದಾಗಿರಬೇಕಲ್ಲದೇ ಪ್ರಸ್ತುತ ಸನ್ನಿವೇಶಕ್ಕೆ ತಕ್ಕ ಹಾಗೆ ಉದ್ಯೋಗ ಕ್ಷೇತ್ರದ ಕುರಿತಾದ ಮಾಹಿತಿ ಮತ್ತು ಬಳಕೆಯ ಕ್ರಮದ ಅರಿವಿರಬೇಕು ಎಂದು ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ವ್ಯವಹಾರ ಕಾರ್ಯನಿರ್ವಾಹಕಿ ಡಾ|| ಶ್ರೇಯಾ ಅಮರಾಪುರಕರ್ ಹೇಳಿದರು.
ನಗರದ ಪ್ರತಿಷ್ಟಿತ ಕೆ. ಎಲ್. ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ವಾಣಿಜ್ಯ ಸ್ನಾತಕೋತ್ತರ ವಿಭಾಗವು ಆಯೋಜಿಸಿದ್ದ 'ಕೃಷಿಕ್-ಅಗ್ರಿ ಬ್ಯುಸಿನೆಸ್ ಇನ್ಕುಬಾಟರ್ ಕಾರ್ಯಕ್ರಮದಲ್ಲಿ ಮಾಹಿತಿ ನೀಡುತ್ತ ಮಾತನಾಡಿದರು.
ಇಂದು ಎಲ್ಲೆಡೆ ಜಾಗತೀಕರಣದ ಪ್ರಭಾವದಿಂದಾಗಿ ಸ್ವಯಂ ಉದ್ಯೋಗ ಕೇಂದ್ರಗಳು ಸ್ಥಾಪನೆಯಾಗುತ್ತಿದ್ದು, ಆಸಕ್ತರು ಸಕರ್ಾರದ ಧನ ಸಹಾಯದ ಮೇರೆಗೆ ಹಲವಾರು ರೀತಿಯ ಸ್ವಯಂ ಉದ್ಯೋಗವನ್ನು ಆರಂಭಿಸಲು ಅವಕಾಶವಿದೆ. ಸೂಕ್ತ ವ್ಯವಹಾರ ಮತ್ತು ಸಮರ್ಥ ಕೆಲಸದಿಂದ ಉದ್ಯೋಗ ಕ್ಷೇತ್ರದಲ್ಲಿ ಬಹುಬೇಗ ಬೆಳೆಯಲು ಅನುಕೂಲವಾಗುವುದು. ಈ ನಿಟ್ಟಿನಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯವು ಹಲವಾರು ಸರ್ಕಾರಿ ಯೋಜನೆಗಳ ಅಧೀನ ಸ್ವಯಂ ಉದ್ಯೋಗಿಗಳಿಗೆ ಯೋಗ್ಯ ರೀತಿಯ ಸಹಕಾರ ನೀಡುತ್ತ ಮಾಹಿತಿ, ತರಬೇತಿ ಮತ್ತು ಅವಕಾಶಗಳನ್ನು ಕಲ್ಪಿಸುತ್ತಿದೆ. ಇವುಗಳ ಪ್ರಯೋಜನವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳುವಲ್ಲಿ ಯಶಸ್ವಿಗಳಾಗಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ|| ಎಮ್. ಎಸ್. ಯರಗೊಪ್ಪ ವಹಿಸಿದ್ದರು. ಡಾ|| ಸಂಜೀವ ನಾಯಕ, ಪ್ರೊ. ಗುರುರಾಜ ಬಾಕರ್ಿ, ಡಾ|| ಗುರುಪಾದಯ್ಯ ಸಾಲಿಮಠ, ಪ್ರೊ. ಪವನ ಡೊಂಕಣ್ಣವರ, ಪ್ರೊ. ಸುಮಾ ಹಿರೇಮಠ, ಪ್ರೊ. ರಿಷಿಕಾ ಡಿ, ಪ್ರೊ. ಸುಮಂಗಲಾ ಜಿ. ಎಮ್. ಹಾಗೂ ಎಮ್. ಕಾಂ. ವಿಭಾಗದ ವಿದ್ಯಾಥರ್ಿ-ವಿದ್ಯಾಥರ್ಿನಿಯರು ಪಾಲ್ಗೊಂಡಿದ್ದರು.