ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಜಯಂತಿ ಆಚರಣೆ
ತಾಳಿಕೋಟಿ 11: ಪಟ್ಟಣದ ಎಸ್ ಎಸ್ ವಿದ್ಯಾ ಸಂಸ್ಥೆಯಲ್ಲಿ ಹೇಮರೆಡ್ಡಿ ಮಲ್ಲಮ್ಮನವರ 603ನೇ ಜಯಂತಿಯನ್ನು ಶನಿವಾರ ಆಚರಿಸಲಾಯಿತು. ಹೇಮರೆಡ್ಡಿ ಮಲ್ಲಮ್ಮಳ ಭಾವಚಿತ್ರಕ್ಕೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಚ್.ಎಸ್.ಪಾಟೀಲರು ಪೂಜೆ ಸಲ್ಲಿಸಿ ಮಾತನಾಡಿ ಹೇಮರೆಡ್ಡಿ ಮಲ್ಲಮ್ಮನವರು ರೆಡ್ಡಿ ಜನಾಂಗದ ಕುಲದೇವತೆ ಶ್ರೀಶೈಲದ ದಕ್ಷಿಣಕ್ಕಿರುವ ವೆಲ್ಲಟೂರು ಜಿಲ್ಲೆಗೆ ಸೇರಿದ ರಾಮಪುರದ ರಾಮರೆಡ್ಡಿ-ಗೌರಮ್ಮ ದಂಪತಿಗಳಿಗೆ ಶ್ರೀಶೈಲ ಚೆನ್ನಮಲ್ಲಿಕಾರ್ಜುನನ ಕೃಪೆಯಿಂದ ಜನಿಸಿದ ಹೆಣ್ಣುಮಗುವೆ ಹೇಮರೆಡ್ಡಿ ಮಲ್ಲಮ್ಮ. ಈಕೆ ಬಾಲ್ಯದಿಂದಲೂ ಶ್ರೀಶೈಲ ಚೆನ್ನಮಲ್ಲಿಕಾರ್ಜುನನನ್ನೆ ಆರಾಧ್ಯ ದೈವವೆಂದು ಪರಿಭಾವಿಸಿ, ಕಡೆಯಲ್ಲಿ ದೇವರನ್ನೇ ಸಾಕ್ಷಾತ್ಕರಿಸಿಕೊಂಡವಳು.
‘ಶಿವ ಕರೆದ ಕಾಲಕ್ಕೆ ಮ್ಯಾಲಕ ಹೋಗಾಗ, ನಾಕು ಮಂದಿ ಕಳಸಾಕ ಬರುವಂಗ ಇರಬೇಕು’ ಎಂದು ವಿವರಿಸಿದರು. ಶಿಕ್ಷಕರಾದ ಎಸ್.ಸಿ.ಗುಡಗುಂಟಿ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮರವರು ರೆಡ್ಡಿ ಕುಲಕ್ಕೆ ಬಡತನವಿರಬಾರದು ಎಂದು ಪರಮೇಶ್ವರನಲ್ಲಿ ವರ ಪಡೆದುಕೊಂಡರು ಎಂದು ವಿವರಿಸಿದರು.
ಸಂಸ್ಥೆಯ ಕಾರ್ಯದರ್ಶಿ ಸಚಿನ.ಎಚ್.ಪಾಟೀಲರು, ಆಡಳಿತಾಧಿಕಾರಿ ಕಿರಣ.ಎಚ್.ಪಾಟೀಲರು, ರವಿ.ಬಿ.ಪಾಟೀಲರು, ಪ್ರಾಚಾರ್ಯರುಗಳಾದ ಡಾ. ಎಚ್.ಬಿ.ನಡುವಿನಕೇರಿ, ಶಿವಕುಮಾರ, ನಾಯಕ, ವಿರೇಶ, ಕನಕ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಅಶೋಕ ಕಟ್ಟಿ, ಆಂಗ್ಲ ಮಾಧ್ಯಮದ ಗುರುಮಾತೆ ಮೀರಾ ದೇಶಪಾಂಡೆ, ಶಿಕ್ಷಕರಾದ ಬಿ.ಆಯ್.ಹಿರೇಹೊಳಿ, ಎಸ್.ವಿ.ಜಾಮಗೊಂಡಿ, ಎಚ್.ಬಿ.ಪಾಟೀಲ, ಎಮ್.ಎಸ್.ರಾಯಗೊಂಡ, ಯು.ಎಚ್. ಗಟನೂರ, ಎಸ್.ಎಸ್.ವಿದ್ಯಾ ಸಂಸ್ಥೆಯ ಸಮಸ್ತ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.