ನವದೆಹಲಿ, ಜ 10,ಭಾರತದ 2021 ರ ಜನಗಣತಿ ಈ ವರ್ಷದ ಏಪ್ರಿಲ್ 1 ರಂದು ಆರಂಭವಾಗಿ ಸೆಪ್ಟೆಂಬರ್ 30 ರಂದು ಕೊನೆಗೊಳ್ಳಲಿದೆ. ಮೊಬೈಲ್ ಫೋನ್ ಅಪ್ಲಿಕೇಷನ್ ಮೂಲಕ ಜನಗಣತಿ 2021 ನಡೆಯಲಿದೆ. ಸಾಂಪ್ರದಾಯಿಕ ಕಾಗದ, ಪೆನ್ನು ಬಳಸಿ ಬರೆದು ಎಣಿಸುವ ಪದ್ಧತಿಯಿಂದ ಹೊರಬಂದು ಆಪ್ ಬಳಕೆಗೆ ಈ ಬಾರಿಯ ನಾಂದಿಯಾಗಲಿದೆ. ಕುಟುಂಬದ ಮುಖ್ಯಸ್ಥರ ಮೊಬೈಲ್ ಸಂಖ್ಯೆ ಪಡೆದು ಆ ಮೂಲಕ ಶೌಚಾಲಯ, ಟಿವಿ, ಅಂತರ್ಜಾಲ ಸೌಲಭ್ಯ, ಕುಟುಂಬ ಹೊಂದಿರುವ ವಾಹನ, ಕುಡಿಯುವ ನೀರಿನ ಮೂಲ ಮೊದಲಾದ ಪ್ರಶ್ನೆಗಳಿಗೆ ಉತ್ತರ ಪಡೆಯಲಾಗುವುದು. ಇತರ ಜೊತೆಗೆ ವಾಸಸ್ಥಳದ ಮಾಹಿತಿಯನ್ನೂ ಪಡೆಯಲಾಗುವುದು. ಇದು ವಸತಿರಹಿತರಿಗೆ ಆಶ್ರಯ ನೀಡುವ ಯೋಜನೆಗೂ ಪೂರಕವಾಗಿರಲಿದೆ.