ಹಾವೇರಿ : ಕಾಶಿ ಮಹಾಪೀಠದ ಜಂಗಮವಾಡಿಮಠದ ಶ್ರೀವಿಶ್ವಾರಾಧ್ಯ ಗುರುಕುಲದ ಶತಮಾನೋತ್ಸವ ಸಮಾರಂಭವನ್ನು 2020 ಜನೇವರಿ ತಿಂಗಳಲ್ಲಿ, ಶ್ರೀಗುರುಕುಲದಲ್ಲಿ ಅಧ್ಯಯನ ಮಾಡಿರುವ ಹಿಂದಿನ ಮತ್ತು ಪ್ರಸಕ್ತ ಶಿಷ್ಯಂದಿರು ಸೇರಿ ಆಯೋಜನೆ ಮಾಡಲು ನಿರ್ಧರಿಸಿದ್ದಾರೆ ಎಂದು ಕಾಶಿಪೀಠದ ಜಗದ್ಗರು ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2020 ಜನೇವರಿ 15ರಿಂದ ಫೆ.21ರವರೆಗೆ, ಸತತ 36 ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಶತಮಾನೋತ್ಸವ ಕಾರ್ಯಕ್ರಮವನ್ನು ಅತ್ಯಂತ ವೈಭವದಿಂದ ಆಚರಿಸಲು ನಿಶ್ಚಯಿಸಲಾಗಿದೆ ಎಂದು ಹೇಳಿದರು.
ಕಾಶಿಪೀಠದ ಜಂಗಮವಾಡಿ ಮಠದಲ್ಲಿ ಈ ಕಾರ್ಯಕ್ರಮ ಜರುಗುವ ಹಿನ್ನಲೆಯಲ್ಲಿ ದೇಶಾದ್ಯಂತ ಲಕ್ಷಾಂತರ ಭಕ್ತಾಧಿಗಳು ಆಗಮಿಸುತ್ತಾರೆ, ಇವರಿಗೆಲ್ಲ ಪ್ರಸಾದ ಮತ್ತು ವಸತಿ ಸಮಸ್ಯೆ ಆಗಬಾರದು ಎನ್ನುವ ಹಿನ್ನಲೆಯಲ್ಲಿ ಸತತ 36 ದಿನಗಳ ಕಾಲ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ ಎಂದರು.
ಕಾಶಿ ಜಂಗಮವಾಡಿ ಮಠದಲ್ಲಿರುವ ಗುರುಕುಲಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆದರೆ 1918ರಲ್ಲಿ ಪಂಚಪೀಠಾಧೀಶ್ವರರು ಕಾಶಿಗೆ ಆಗಮಿಸಿದ ಸಂದರ್ಭದಲ್ಲಿ ಸಮಾಜದ ಹಿತದೃಷ್ಠಿಯಿಂದ ಕೆಲವೊಂದು ನಿರ್ಣಯಗಳನ್ನು ತಗೆದುಕೊಳ್ಳುತ್ತಾರೆ.
ಇದರಲ್ಲಿ ಕಾಶಿ ಜಂಗಮವಾಡಿಮಠದ ಗುರುಕುಲಕ್ಕೆ ಶ್ರೀ ಜಗದ್ಗುರು ಶ್ರೀವಿಶ್ವಾರಾಧ್ಯ ಗುರುಕುಲ ಎಂದು ನಾಮಕರಣ ಮಾಡಲಾಗುತ್ತದೆ. ನಾಮಕರಣ ಮಾಡಿ ನೂರು ವರ್ಷಗಳಾಗಿರುವ ಹಿನ್ನಲೆಯಲ್ಲಿ ಪ್ರಸಕ್ತ ಈ ಗುರುಕುಲದ ಶತಮಾನೋತ್ಸವ ಸಮಾರಂಭವನ್ನು ಮಾಡಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಈ ಗುರುಕುಲದ ಶತಮಾನೋತ್ಸವವನ್ನು 2020 ಜ.15 ರಂದು ಬೃಹತ್ ಧಾಮರ್ಿಕ ಕಾರ್ಯಕ್ರಮದೊಂದಿಗೆ ಪ್ರಾರಂಭಿಸಲು ನಿರ್ಧರಿಸಲಾಗಿದೆ. 2020 ಫೆ.21 ರಂದು ಮಹಾ ಶಿವರಾತ್ರಿಯಂದು ಈ ಕಾರ್ಯಕ್ರಮ ಪೂರ್ಣಗೊಳ್ಳಲಿರುವುದು ವಿಶೇಷವಾಗಿದೆ, ಫೆ.15ರಂದು ಪಂಚಪೀಠಗಳ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವದೊಂದಿಗೆ ಪಂಚಪೀಠಾಧೀಶ್ವರರ ಪುರ ಪ್ರವೇಶ ಜರುಗಲಿದೆ ಮತ್ತು ಈ ಕಾರ್ಯಕ್ರಮ ಬಹಳ ಅದ್ಧೂರಿಯಿಂದ ಆಚರಿಸಲಾಗುವುದು. ಪ್ರಸಕ್ತ ಜಂಗಮವಾಡಿ ಮಠದಲ್ಲಿ ಏಕಕಾಲದಲ್ಲಿ ಮೂರು ಸಾವಿರ ಭಕ್ತರಿಗೆ ವಸತಿ ಮತ್ತು ಪ್ರಾಸಾದದ ವ್ಯವಸ್ಥೆಯಿದೆ ಎಂದರು.
ಕಾಶಿ ಜಂಗಮವಾಡಿಮಠದ ಗುರುಕುಲದಲ್ಲಿ ನಗರದ ಹುಕ್ಕೇರಿಮಠದ ಹಿಂದಿನ ಶ್ರೀಗಳಾದ ಶಿವವಸವ ಸ್ವಾಮೀಜಿ, ಬಂಕಾಪುರ ಅರಳೆಲೆ ಮಠದ ರುದ್ರಮುನಿ ಸ್ವಾಮೀಜಿ, ಹುಬ್ಬಳ್ಳಿ ಮೂರುಸಾವಿರಮಠದ ಗಂಗಾಧರ ಸ್ವಾಮೀಜಿ, ತರಳಬಾಳು ಸಂಪ್ರದಾಯದ ಶಿವಕುಮಾರ ಸ್ವಾಮೀಜಿಗಳು ಅಧ್ಯಯನ ಮಾಡಿದ್ದಾರೆ. ಎಲ್ಲ ಸಂಪ್ರದಾಯದವರನ್ನು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೇರಿದಂತೆ ಆ ರಾಜ್ಯದ ಸಾಧು, ಸಂತರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು, ಕನರ್ಾಟಕ, ಆಂದ್ರ, ಮಹಾರಾಷ್ಟ್ರ, ರಾಜಸ್ಥಾನ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗುತ್ತಿದೆ ಎಂದು ಹೇಳಿದರು.