ಗಂಗಾವತಿ 01 : ಚೈತನ್ಯ ಟೆಕ್ನೋ ಸ್ಕೂಲ್ 2024 - 25 ನೇ ಸಾಲಿನ ICSE ಹತ್ತನೇ ತರಗತಿ ಫಲಿತಾಂಶವು ಪ್ರಕಟಗೊಂಡಿದ್ದು ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ದಿ. 30.4. 2025 ರಂದು ಬೆಳಿಗ್ಗೆ 11 ಗಂಟೆಗೆ ICSE ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ನೂರಕ್ಕೆ ನೂರರಷ್ಟು ಫಲಿತಾಂಶ ಬಂದಿರುತ್ತದೆ ಒಟ್ಟಾರೆಯಾಗಿ 144 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು,ಇದರಲ್ಲಿ 17 ವಿದ್ಯಾರ್ಥಿಗಳು 90% ಹೆಚ್ಚು ಅಂಕಗಳನ್ನು ಪಡೆದಿದ್ದು, 39 ವಿದ್ಯಾರ್ಥಿಗಳು 80% ಕಿಂತ ಹೆಚ್ಚು ಅಂಕ ಪಡೆದಿದ್ದು. ಇನ್ನುಳಿದಂತೆ ಎಲ್ಲಾ ವಿದ್ಯಾರ್ಥಿಗಳು ಶೇಕಡ 70ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ನೂರಕ್ಕೆ ನೂರು ಫಲಿತಾಂಶ ಬಂದಿದೆ ಎಂದು ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆಯ ಸಿಇಓ ಆದ ಜಿ ಸುನಿಲ್ ಕುಮಾರ ಹಾಗೂ ಅಕಾಡೆಮಿ ಡೈರೆಕ್ಟರ್ ಆದ ಬಿ ವಿ ಸತೀಶ್ ವಿದ್ಯಾರ್ಥಿಗಳ ಫಲಿತಾಂಶದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅದೇ ರೀತಿಯಾಗಿ ಉತ್ತರ ಕರ್ನಾಟಕದ ಎಜಿಎಂ ಆದ ಡಾಕ್ಟರ್ ರಾಜಕುಮಾರ ವಿದ್ಯಾರ್ಥಿಗಳ ಸತತ ಪ್ರಯತ್ನದಿಂದ ಈ ಫಲಿತಾಂಶ ಬಂದಿದೆ ಎಂದು ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಈ ವೇಳೆ ಶಾಲೆಯ ಪ್ರಾಚಾರ್ಯರಾದ ಪುನೀತಕುಮಾರಿ ಹಾಗೂ ಉಪ ಪ್ರಾಚಾರ್ಯರಾದ ಶಿವಕುಮಾರ ವಿದ್ಯಾರ್ಥಿಗಳ ಪರಿಶ್ರಮ ಮತ್ತು ಪಾಲಕರ ಸಹಕಾರ ಮುಖ್ಯ ಎಂದು ಹರ್ಷವಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕ ಸಿಬ್ಬಂದಿ ಹಾಗೂ ಶಿಕ್ಷಕರೇ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಉತ್ತಮ ಫಲಿತಾಂಶ ಪ್ರಕಟದವಾದ ನಿಮಿತ್ಯ ಶಾಲೆಯಲ್ಲಿ ಪಟಾಕಿ ಸಿಡಿಸುವುದರ ಮುಖಾಂತರ ಸಿಹಿ ಹಂಚಲಾಯಿತು.