ಚಂದ್ರಕಾಂತ ಬೆಲ್ಲದ ತಂಡದಿಂದ ಮತ ಯಾಚನೆ

Chandrakanth Bellad's team appeals for votes

ಗದಗ  17 : ಧಾರವಾಡದ ಪ್ರತಿಷ್ಠಿತ ಕರ್ನಾಟಕ ವಿದ್ಯಾವರ್ಧಕ ಸಂಘದ ತ್ರೈವಾರ್ಷಿಕ ಚುನಾವಣೆಯು ಇದೆ ಮೇ.25 ರಂದು ನಡೆಯಲಿರುವ  ಹಿನ್ನೆಲೆಯಲ್ಲಿ ಶ್ರೀ ಚಂದ್ರಕಾಂತ ಬೆಲ್ಲದ ಮತ್ತು ಮಕ್ಕಳ ಮಹರ್ಷಿ ಶಂಕರ ಹಲಗತ್ತಿ ಅವರ ತಂಡವು ಗದಗ ನಗರಕ್ಕೆ ಆಗಮಿಸಿ ಸದಸ್ಯರಲ್ಲಿ ಮತಯಾಚನೆ ಮಾಡಿದರು. 

ಪ್ರಧಾನ ಕಾರ್ಯದರ್ಶಿ ಸ್ಥಾನದ ಅಭ್ಯರ್ಥಿ ಶ್ರೀ  ಶಂಕರ ಹಲಗತ್ತಿ , ವೀರಣ್ಣ ಒಡ್ಡೀನ, ಡಾ.ಜಿನದತ್ತ ಹಡಗಲಿ, ಶಿವಾನಂದ ಭಾವಿಕಟ್ಟಿ , ಡಾ.ಧನವಂತ ಹಾಜವಗೋಳ ಅವರ ತಂಡವು  ಪಂಚಾಕ್ಷರ ಗವಾಯಿಗಳ ಪದವಿ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ  ಮೂರು ವರ್ಷಗಳ ಅವಧಿಯಲ್ಲಿ ಕೈಕೊಂಡಿದ್ದ ಕಾರ್ಯಗಳ ಕುರಿತು ವಿವರಿಸಿದರಲ್ಲದೆ ತಮ್ಮ ಮತಗಳಲ್ಲದೆ ಇತರ ಸದಸ್ಯರ ಮತಗಳನ್ನು ಚಂದ್ರಕಾಂತ ಬೆಲ್ಲದ ಅವರ ಗುಂಪಿಗೆ ಹಾಕಿಸುವ ಮೂಲಕ ಗುಂಪಿನ ಎಲ್ಲ ಹದಿನೈದು  ಸದಸ್ಯರನ್ನೂ ಬೆಂಬಲಿಸಿ  ಆಯ್ಕೆ ಮಾಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಪಿಪಿಜಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ರಾಜಶೇಖರ ದಾನರಡ್ಡಿ, ಪ್ರೊ.ಬಸವರಾಜ ಪೂಜಾರ್ ,  ಪ್ರೊ.ಬಾಹುಬಲಿ ಜೈನರ,  ನಿವೃತ್ತ ಪ್ರಾಚಾರ್ಯ ವಿ.ಎಂ.ಗುರುಮಠ,  ನಿವೃತ್ತ ಪ್ರಾಚಾರ್ಯ ಡಾ.ಪ್ರಭು ಗಂಜಿಹಾಳ  ಮೊದಲಾದವರಿದ್ದರು.