ಬೆಳಗಾವಿ 17: ಒಬ್ಬ ವೈದ್ಯ ಎಲ್ಲ ರೋಗಗಳಿಗೂ, ಎಲ್ಲ ವಯಸ್ಸಿನ ರೋಗಿಗಳಿಗೂ ಚಿಕಿತ್ಸೆ ನೀಡುವಂತೆ ಮಾಡುವುದೇ ಈ ಫ್ಯಾಮಿಲಿ ಮೆಡಿಸಿನ್‌ನ ಉದ್ದೇಶವಾಗಿದೆ ಎಂದು ಯು ಎಸ್ ಎಮ್ ಕೆ ಎಲ್ ಇ ಯ ನಿರ್ದೇಶಕರಾದ ಡಾ. ಹೆಚ್ ಬಿ ರಾಜಶೇಖರ ಅವರು ಮಾತನಾಡುತ್ತಿದ್ದರು.
ಅವರು ಇಂದು ನಗರದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಚರಕ ಸಭಾಭವನದಲ್ಲಿ ಫ್ಯಾಮಿಲಿ ಮೆಡಿಸಿನ್ ವಿಭಾಗದ ವತಿಯಿಂದ ನಡೆದ ಪ್ರಥಮ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಫ್ಯಾಮಿಲಿ ಮೆಡಿಸಿನ್ ಇದು ನಮ್ಮ ದೇಶದಲ್ಲಿ ನೂತನವೆನ್ನಿಸಿದರೂ ಪಾಶ್ಚಿಮಾತ್ಯ ದೇಶಗಳಲ್ಲಿ ಸುಮಾರು ದಶಕಗಳ ಇತಿಹಾಸವನ್ನು ಹೊಂದಿದೆ. ಇಂದು ವೈದ್ಯರು ಶರೀರದ ವಿವಿಧ ಅಂಗಗಳ ಚಿಕಿತ್ಸೆಯಲ್ಲಿ ನೈಪುಣ್ಯತೆಯನ್ನು ಸಾಧಿಸಿರುತ್ತಾರೆ. ಆದರೆ ನಾಗರಿಕರು ರುಗ್ಣಾವಸ್ಥೆಯಲ್ಲಿ ವಿವಿಧ ಅಂಗಗಳ ಚಿಕಿತ್ಸೆಗಾಗಿ ಬೇರೆ ಬೇರೆ ವೈದ್ಯರುಗಳನ್ನು ಸಂಪರ್ಕಿಸಬೇಕಾಗುತ್ತದೆ. ಆದರೆ ಒಬ್ಬ ಫ್ಯಾಮಿಲಿ ಮೆಡಿಸಿನ್‌ನ ಒಬ್ಬ ವೈದ್ಯ ಎಲ್ಲ ರೋಗಗಳಿಗೆ ಚಿಕಿತ್ಸೆ ನೀಡುವಂತಹನಾಗಿರುತ್ತಾರೆ. ಈ ವಿಭಾಗಕ್ಕೆ ಇನ್ನಷ್ಟು ಪ್ರೋತ್ಸಾಹಣೆ ನೀಡುವದರಿಂದ ಸಮಾಜಕ್ಕೆ ಇನ್ನಷ್ಟು ಒಳಿತಾಗುವದು ಎಂದು ಎಂದು ಅಭಿಮತ ವ್ಯಕ್ತ ಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ವೈದ್ಯಕೀಯ ಮುಖ್ಯಾಧಿಕಾರಿ ಡಾ. ಆರ ಜಿ ನೆಲವಿಗಿ ಮಾತನಾಡುತ್ತ “ ಫ್ಯಾಮಿಲಿ ಮೆಡಿಸಿನ ವಿಭಾಗವು ಭಾರತದ ವೈದ್ಯ ವಿಜ್ಞಾನದಲ್ಲಿ ಒಂದು ಉದಯೋನ್ಮುಖ ಶಾಖೆಯಾಗಿದೆ. ಹಳ್ಳಿಗಳಿಂದಲೇ ಕೂಡಿರುವ ನಮ್ಮ ದೇಶದಲ್ಲಿ ಹಳ್ಳಿಗರು ವಿಶೇಷ ವೈದ್ಯರ ಸೇವೆಯನ್ನು ನಗರಗಳತ್ತ ಮುಖ ಮಾಡುವದು ಸಹಜವಾಗಿದೆ. ಆದರೆ ಈ ಫ್ಯಾಮಿಲಿ ಮೆಡಿಸಿನ್ ನ ವೈದ್ಯರುಗಳಿಂದ ದೇಶದ ಮೂಲೆ ಮೂಲೆಗಳಿಗೆ ನುರಿತ ಸಕಲಚಿಕಿತ್ಸಾ ವೈದ್ಯರುಗಳ ಸೇವೆದೊರೆತಂತಾಗುತ್ತದೆ. ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಕಾರ್ಯಕ್ರಮದಲ್ಲಿ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾದಿಕಾರಿ ಪ್ರಶಾಂತ ದೇಸಾಯಿ ಅವರು, ಯು ಎಸ್ ಎಮ ಕೆ ಎಲ್ ಯ ಫೇಸ 2 ನ ಚೇರಮನ್‌ರಾದ ಡಾ. ಅಶೋಕ ಪಾಂಗಿ, ಫ್ಯಾಮಿಲಿ ಮೆಡಿಸಿನ್ ವಿಭಾಗದ ಹೆಸರಾಂತ ವೈದ್ಯೆ ಡಾ. ಗೀತಾ ಪಾಂಗಿ , ಡಾ. ಮಹೇಶ ಕೋರೆ ಸೇರಿದಂತೆ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಸಮಸ್ಥ ವೈದ್ಯ ವೃಂದ ಹಾಗೂ ದೇಶದ ವಿವಿಧಮೂಲೆಗಳಿಂದ 34 ಯುವ ವೈದ್ಯರುಗಳು ಯು ಎಸ್ ಎಮ್ ಕೆ ಎಲ್ ಇ ಯ 35 ವೈದ್ಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ವಿಶಯಗಳ ನಿಪುಣರು ತಮ್ಮ ಉಪನ್ಯಾಸವನ್ನು ಮಂಡಿಸಿದರು. ಕಾರ್ಯಕ್ರಮವನ್ನು ವೈದ್ಯ ವಿದ್ಯಾರ್ಥೀಗಲಾದ ಡಾ. ತನ್ವಿ ಉತ್ಚಲ್ ಹಾಗೂ ಡಾ.ದಾನಿಷ ಅಖಾಶಾ ನಿರೂಪಿಸಿದರು. ಡಾ. ಸ್ಮೃತಿ ಹವಳ ಸ್ವಾಗತಿಸಿದರು. ಡಾ. ವಿರೇಂದ್ರ ಅಷ್ಟಗಿ ವಂದಿಸಿದರು.