ಏ.3ಕ್ಕೆ ಸಿಂಗಟಾಲೂರು ವೀರಭದ್ರೇಶ್ವರ ಸ್ವಾಮಿಯ ರಥೋತ್ಸವ
ಲೋಕದರ್ಶನ ವರದಿ
ಹೂವಿನಹಡಗಲಿ 02: ಇಲ್ಲಿಗೆ ಸಮೀಪದ ಶಿಂಗಟಾಲೂರು ಸುಕ್ಷೇತ್ರದಲ್ಲಿ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವ ಏ. 3 ರಂದು ಗುರುವಾರ ಸಂಜೆ 5 ಗಂಟೆಗೆ ಮಹಾರಥೋತ್ಸ ಜರುಗಲಿದೆ. ಸುಕ್ಷೇತ್ರದಲ್ಲಿ ಸೋಗಿ ಪುರವರ್ಗ ಮಠದ ಸಿದ್ದವೀರಶಿವಚಾರ್ಯ ಸ್ವಾಮೀಜಿ. ಬನ್ನಿಕೊಪ್ಪ ಡಾ.ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ ಹಾಗೂ ವಿರುಪಾಪೂರದ ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ರಥೋತ್ಸವ ಜರುಗಲಿದೆ.ಸಂಜೆ 7ಗಂಟೆಗೆ ಧರ್ಮಸಭೆ ನಡೆಯಲಿದೆ.ಏ. 04ಕ್ಕೆಅಗ್ನಿ ಕಾರ್ಯ ಕ್ರಮ ಅಂದು ಬೆಳಗ್ಗೆ 5ಕ್ಕೆ ವೀರಭದ್ರ ದೇವರಿಗೆ ಮಹಾರುದ್ರಾಭಿಷೇಕ, ನಂತರ ಬೆ.10.30ಕ್ಕೆ ವೀರಪುರವಂತರು, ಸಕಲ ವಾದ್ಯಗಳೊಂದಿಗೆ ಪಲ್ಲಕ್ಕಿ ಸಮೇತ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆಯು ದೇವಸ್ಥಾನದಿಂದ ಪೌಳಿಯ ಕೆ’ ಪ್ರತಿಷ್ಠಾಪಿಸಲಾಗಿರುವ ಸುಮಾರು 30ರಿಂದ 40ಅಡಿ ಅಗ್ನಿ ಕುಂಡದಲ್ಲಿ ಸಹಸ್ರಾರು ಭಕ್ತರು ಅಗ್ನಿ ಕಾರ್ಯ ಕ್ರಮ ನಡೆಯಲಿದೆ ಎಂದು ಕಮಿಟಿ ಅದ್ಯಕ್ಷ ಕರಬಸಪ್ಪ ಹಂಚಿನಾಳ. ವಕೀಲರಾದ ಸಿಕೆಎಂ. ಬಸವಲಿಂಗ ಸ್ವಾಮಿ ತಿಳಿಸಿದ್ದಾರೆ.