ಮಾಂಜರಿ 9: ಚಿಕ್ಕೋಡಿ ಲೋಕಸಭಾ ಕ್ಷೇತ್ರ ರಾಜ್ಯದ ಗಮನ ಸೆಳೆದಿದೆ. ಒಂದೆ ಕುಟುಂಬ ಹಾಗೂ ಒಂದೆ ಊರಿನ ನಾಯಕರು ಸ್ಪಧರ್ಾ ಕಣದಲ್ಲಿ ಇದ್ದು, ಇವರ ಮಧ್ಯದಲ್ಲಿ ಚುನಾವಣಾ ಹಣಾಹಣಿ ನಡೆಯಲಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಮಧ್ಯದಲ್ಲಿ ಭಾರಿ ಪೈಪೋಟಿ ಇದೆ. ಅಲ್ಲದೆ ಒಂದೇ ಊರಿನ ಇಬ್ಬರು ಶಾಸಕರ ನಡುವೆ ಚಿಕ್ಕೋಡಿ ಲೋಕಸಭಾ ಕ್ಷೇತ್ರ ಪ್ರತಿಷ್ಠೆ ಕಣವಾಗಿ ಮಾರ್ಪಟ್ಟಿದೆ.
ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಅಖಾಡದಲ್ಲಿ ಹಾಲಿ ಸಂಸದ ಪ್ರಕಾಶ ಹುಕ್ಕೇರಿ ಕಾಂಗ್ರೆಸ್ದಿಂದ ಹಾಗೂ ಅಣ್ಣಾಸಾಹೇಬ ಜೊಲ್ಲೆ ಅವರು ಬಿಜೆಪಿಯಿಂದ ಅಖಾಡದಲ್ಲಿರುವದರಿಂದ ಚುನಾವಣಾ ಕಣ ತೀವ್ರ ರಂಗೇರಿದೆ. ಇನ್ನು ತಮ್ಮ ಪತಿಯನ್ನು ಗೆಲ್ಲಿಸಲು ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಅವರು ಕಾಲಿಗೆ ಚಕ್ರ ಕಟ್ಟಿಕೊಂಡು ಕ್ಯಾನವಾಸ ಮಾಡುತ್ತಿದ್ದಾರೆ. ಇನ್ನು ತಂದೆಯನ್ನು ಗೆಲ್ಲಿಸಲು ಚಿಕ್ಕೋಡಿ-ಸದಲಗಾ ಶಾಸಕ ಗಣೇಶ ಹುಕ್ಕೇರಿ ಅವರು ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಅಲ್ಲದೆ ಚುನಾವಣಾ ಅಖಾಡದಲ್ಲಿ ಇರುವ ಅಭ್ಯಥರ್ಿಗಳು ಯಕ್ಸಂಬಾ ಪಟ್ಟಣದವರು ಎನ್ನುವದು ವಿಶೇಷವಾಗಿದೆ. ಇನ್ನು ತಮ್ಮ ಪತಿ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಶತಾಯ ಗತಾಯ ಗೆಲ್ಲಿಸುವದಕ್ಕಾಗಿ ಶಶಿಕಲಾ ಜೊಲ್ಲೆ ಅವರು ಹಠ ತೊಟ್ಟಿದ್ದಾರೆ. ಇನ್ನು ತಮ್ಮ ತಂದೆ ಮತ್ತೊಂದು ಭಾರಿ ಸಂಸದರನ್ನಾಗಿ ಮಾಡಲು ಗಣೇಶ ಹುಕ್ಕೇರಿ ಅವರು ಪಣತೊಟ್ಟಿದ್ದಾರೆ.
ಇನ್ನು ಚುನಾವಣೆ ನೋಡಿದರೆ ಇಬ್ಬರ ನಡುವೆ ಎರಡು ಕುಟಂಬಗಳ ಕದನವೋ ರಣಕಣವಾಗಿದೆ. ಕಳೆದ ಮೂರು ಬಾರಿ ಚುನಾವಣೆಯಲ್ಲಿ ಬಿಜೆಪಿ ಈಗಿನ ಅಭ್ಯಥರ್ಿ ಅಣ್ಣಾಸಾಹೇಬ ಜೊಲ್ಲೆ ಅವರು ಹುಕ್ಕೇರಿ ಕುಟಂಬದ ಎದುರು ಸೋಲು ಕಂಡಿದ್ದಾರೆ. ಸದಲಗಾ ವಿಧಾನಸಭಾ ಕ್ಷೇತ್ರದಿಂದ ಪ್ರಕಾಶ ಹುಕ್ಕೇರಿ ಎದುರು ಎರಡು ಭಾರಿ ಹಾಗೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗಣೇಶ ಹುಕ್ಕೇರಿ ಎದುರು ಅಣ್ಣಾಸಾಹೇಬ ಜೊಲ್ಲೆ ಪರಭಾವಗೊಂಡಿದ್ದಾರೆ. ಇದೀಗ ಮತ್ತೆ ಪ್ರಕಾಶ ಹುಕ್ಕೇರಿ ಹಾಗೂ ಅಣ್ಣಾಸಾಹೇಬ ಜೊಲ್ಲೆ ಅವರು ಚುನಾವಣೆ ಅಖಾಡದಲ್ಲಿ ಇರುವದರಿಂದ ಇಬ್ಬರ ನಡುವೆ ಸ್ಪಧರ್ೆ ರಾಜ್ಯದ ಗಮನ ಸೆಳೆದಿದೆ.
ಚಿಕ್ಕೋಡಿ-ಸದಲಗಾ ಕ್ಷೇತ್ರದ ಶಾಸಕ ಗಣೇಶ ಹುಕ್ಕೇರಿ ಅವರು ತಮ್ಮ ತಂದೆಯನ್ನು ಗೆಲ್ಲಿಸಲು ತಾವು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಇಟ್ಟುಕೊಂಡು ಜನರ ಬಳಿ ಮತ ಕೇಳುತ್ತಿದ್ದಾರೆ. ಗಣೇಶ ಹುಕ್ಕೇರಿ ಅವರು ಕಳೆದ ಎರಡು ವಾರದಿಂದ 8 ವಿಧಾನಸಭಾ ಕ್ಷೇತ್ರದಲ್ಲಿ ಭಾರಿ ಪ್ರಚಾರ ನಡೆಸಿ ಜನರ ಬಳಿ ಮತಯಾಚಿಸುತ್ತಿದ್ದಾರೆ. ಜನರಿಂದ ಭಾರಿ ಬೆಂಬಲ ವ್ಯಕ್ತವಾಗಿರುವ ಹಿನ್ನಲೆಯಲ್ಲಿ ಈ ಭಾರಿ ಗೆಲವು ಗ್ಯಾರಂಟಿ ಎಂದು ಗಣೇಶ ಹುಕ್ಕೇರಿ ಅವರು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.
ಶಶಿಕಲಾ ಜೊಲ್ಲೆ ಅವರು ತಮ್ಮ ಪತಿ ಕಳೆದ ಮೂರು ಭಾರಿ ಹುಕ್ಕೇರಿ ಕುಟಂಬದ ಎದುರು ಸೋಲು ಕಂಡಿದ್ದಾರೆ. ಹಳೆ ಸೇಡನ್ನು ತೀರಿಸಿಕೊಳ್ಳಲು ತಮ್ಮ ಪತಿ ಅಣ್ಣಾಸಾಹೇಬರನ್ನು ಗೆಲ್ಲಿಸಲು ಅವರು ರಾಜಕೀಯ ರಣತಂತ್ರ ರೂಪಿಸುತ್ತಿದ್ದಾರೆ. ಶಶಿಕಲಾ ಅವರು ಬಿಜೆಪಿ ಕಾರ್ಯಕತರ್ೆಯಾಗಿ ಹಾಗೂ ಇನ್ನೊಂದು ಕಡೆಗೆ ಬಿಜೆಪಿ ಶಾಸಕಿಯಾಗಿ ತಮ್ಮ ಪತಿ ಗೆಲುವಿಗೆ ಸಾಕಷ್ಟು ಪ್ರಚಾರ ಕೈಗೊಂಡಿದ್ದಾರೆ. 8 ವಿಧಾನಸಭಾಕ್ಷೇತ್ರದಿಂದ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.
ಬಿಜೆಪಿ ಅಭ್ಯಥರ್ಿ ಅಣ್ಣಾಸಾಹೇಬ ಜೊಲ್ಲೆ ಅವರು ಸಹಕಾರಿ ರಂಗದಲ್ಲಿ ಸಾಕಷ್ಟು ಕಾರ್ಯ ಮಾಡಿಕೊಂಡು ಬಂದಿದ್ದಾರೆ. ಬೀರೇಶ್ವರ ಕೋ ಆಫ್ ಕ್ರೆಡಿಟ್ ಸೊಸಾಯಿಟಿ ಮೂಲಕ ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸಿದ್ದಾರೆ.
ಇನ್ನು ಸಂಸದ ಪ್ರಕಾಶ ಹುಕ್ಕೇರಿ ಅವರು ಕಳೆದ 35 ವರ್ಷದಿಂದ ಶಾಸಕ, ಸಂಸದ ಸಚಿವರಾಗಿ ರಾಜಕೀಯವಾಗಿ ಹಲವಾರು ಕೊಡುಗೆ ನೀಡಿ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ.
ಒಟ್ಟಿನಲ್ಲಿ ಜೊಲ್ಲೆ ಹಾಗೂ ಹುಕ್ಕೇರಿ ಅವರು ಎದುರು ಬದರು ರಾಜಕಾರಣ ಮಾಡಿಕೊಂಡು ಬಂದು ಇದೀಗ ಮತ್ತೆ ಲೋಕಸಭಾ ಚುನಾವಣೆಯಲ್ಲಿ ಪ್ರತಿಸ್ಪಧರ್ಿಗಳಾಗುವ ಮೂಲಕ ಮತ್ತೆ ಈ ಕುಟುಂಬ ರಾಜಕೀಯ ಕ್ಷೇತ್ರದಲ್ಲಿ ಸದ್ದು ಮಾಡಿದೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಮತದಾರರು ಇದೀಗ ಯಾರ ಕೈ ಹಿಡಿಯುತ್ತಾರೆ ಎನ್ನುವುದೆ ಇದೀಗ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಒಂದೇ ಊರಿನವರು ಹಾಗೂ ಒಂದೆ ಕುಟಂಬದವರು ಲೋಕಸಭಾ ಕ್ಷೇತ್ರದ ಅಖಾಡದಲ್ಲಿರುವದರಿಂದ ಮತದಾರ ಪ್ರಭು ಯಾರ ಕೈ ಹಿಡಿಯುತ್ತಾನೆ ಎನ್ನುವದಕ್ಕೆ ಮೇ.23 ರಂದು ಉತ್ತರ ಸಿಗಲಿದೆ